ಯುವ ಎರಡನೇ ಸಿನಿಮಾ ಹೆಸರಿಗೆ ಪುನೀತ್ ಸಿನಿಮಾದ ಲಿಂಕ್

ಯುವ ರಾಜ್​ಕುಮಾರ್ ನಟನೆಯ ಎರಡನೇ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಸಿನಿಮಾದ ಹೆಸರು ಮತ್ತು ಪೋಸ್ಟರ್ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಬಿಡುಗಡೆ ಆಗಿವೆ. ಪುನೀತ್ ಸಿನಿಮಾದಿಂದ ಹೆಸರನ್ನು ಎರವಲು ಪಡೆದಂತಿದೆ.

ಯುವ ಎರಡನೇ ಸಿನಿಮಾ ಹೆಸರಿಗೆ ಪುನೀತ್ ಸಿನಿಮಾದ ಲಿಂಕ್
Follow us
ಮಂಜುನಾಥ ಸಿ.
|

Updated on: Nov 01, 2024 | 6:50 PM

ಪುನೀತ್ ರಾಜ್​ಕುಮಾರ್ ಕಾಲವಾದ ಬಳಿಕ ಯುವ ರಾಜ್​ಕುಮಾರ್ ಅವರು ಅಪ್ಪು ಸ್ಥಾನ ತುಂಬಲಿ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ನಿಜಕ್ಕೂ ಯುವ, ಅಪ್ಪು ಸ್ಥಾನ ತುಂಬಲಿದ್ದಾರೆಯೇ ಎಂಬುದನ್ನು ಕಾಳವೇ ಉತ್ತರಿಸಲಿದೆ. ಆದರೆ ಯುವ ರಾಜ್​ಕುಮಾರ್, ಆ ಪ್ರಯತ್ನವಂತೂ ಮಾಡುತ್ತಿದ್ದಾರೆ. ಆದರೆ ಅವರು ಎಷ್ಟರ ಮಟ್ಟಿಗೆ ಯಶಸ್ಸುಗಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಯುವ ರಾಜ್​ಕುಮಾರ್ ಮೊದಲ ಸಿನಿಮಾ ‘ಯುವ’ ಅನ್ನು ಹೊಂಬಾಳೆ ನಿರ್ಮಿಸಿದ್ದು, ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಇದೀಗ ಯುವ ರಾಜ್​ಕುಮಾರ್ ಎರಡನೇ ಸಿನಿಮಾ ಸೆಟ್ಟೇರಿದ್ದು, ಎರಡನೇ ಸಿನಿಮಾದ ಟೈಟಲ್ ಅನ್ನು ಸಹ ಪುನೀತ್ ರ ಸಿನಿಮಾದ ಹಾಡಿನೊಂದಿಗೆ ಎರವಲು ಪಡೆದಂತಿದೆ.

ಯುವ ರಾಜ್​ಕುಮಾರ್ ನಟನೆಯ ಎರಡನೇ ಸಿನಿಮಾದ ಹೆಸರು ‘ಎಕ್ಕ’ ಎಂದು ಇರಿಸಲಾಗಿದೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಸಿನಿಮಾದ ಟೈಟಲ್ ಮತ್ತು ಹೊಸ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಪೋಸ್ಟರ್​ನಲ್ಲಿ ರಕ್ತದಲ್ಲಿ ಅದ್ದಿ ತೆಗೆದಂತಿರುವ ಯುವ ಕೈಯಲ್ಲಿ ರಕ್ತ ಮೆತ್ತಿದ ಆಯುಧವೊಂದನ್ನು ಹಿಡಿದುಕೊಂಡು, ಯಾರನ್ನೋ ಕೊಲ್ಲಲು ಮುಂದಾವರಂತೆ ನೋಡುತ್ತಿರುವ ಚಿತ್ರವಿದೆ. ಈ ರಕ್ತ-ಸಿಕ್ತ ಫೈಟ್, ಯಾವುದೋ ಮಾಂಸದ ಅಂಗಡಿಯಲ್ಲಿ ನಡೆಯುತ್ತಿದ್ದು, ಯುವ ಹಿನ್ನೆಲೆಯಲ್ಲಿ ಚರ್ಮ ಸುಲಿದ ಮಾಂಸದ ತುಂಡುಗಳು ನೇತಾಡುತ್ತಿವೆ. ಆ ಮಾಂಸವನ್ನು ನೇತು ಹಾಕಲು ಬಳಸುವ ವಸ್ತುವನ್ನೇ ಶತ್ರುಗಳನ್ನು ಕೊಲ್ಲಲು ಆಯುಧವನ್ನಾಗಿ ಹಿಡಿದಿದ್ದಾರೆ ಯುವ.

ಇದನ್ನೂ ಓದಿ:ಒಟಿಟಿಗೆ ಬಂತು ಯುವ ರಾಜ್​ಕುಮಾರ್ ನಟನೆಯ ‘ಯುವ’ ಸಿನಿಮಾ; ಆದರೆ..

ಇನ್ನೊಂದು ಪೋಸ್ಟರ್​ನಲ್ಲಿ ಯುವ ರಾಜ್​ಕುಮಾರ್ ಕೈಗೆ ಪೊಲೀಸರು ಕೋಳ ಹಾಕಿದ್ದಾರೆ. ಯುವ ರಾಜ್​ಕುಮಾರ್ ಬಟ್ಟೆಯೆಲ್ಲ ರಕ್ತಮಯವಾಗಿದೆ. ರಸ್ತೆಯ ಮೇಲೆ ಮಲಗಿರುವ ಯುವ ಕಡೆ ಪೊಲೀಸರು ಕೆಲ ಬಂದೂಕುಗಳನ್ನು ಗುರಿ ಮಾಡಿದ್ದಾರೆ. ಒಟ್ಟಿನಲ್ಲಿ ಎರಡೂ ಪೋಸ್ಟರ್​ಗಳು ಸೂಚಿಸುತ್ತಿರುವುದು ಒಂದನ್ನೇ, ಈ ಸಿನಿಮಾ ಬಲು ರಕ್ತ-ಸಿಕ್ತ ಕತೆ ಒಳಗೊಂಡಿರಲಿದೆ ಎಂಬುದನ್ನು.

ಪುನೀತ್ ರಾಜ್​ಕುಮಾರ್ ನಟನೆಯ ‘ಜಾಕಿ’ ಸಿನಿಮಾದಲ್ಲಿ ‘ಎಕ್ಕ ರಾಜ ರಾಣಿ…’ ಹಾಡು ಬಹಳ ಜನಪ್ರಿಯಗೊಂಡಿತ್ತು. ಆ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಇಸ್ಪೀಟು ಆಡುವುದರಲ್ಲಿ ನಿಸ್ಸೀಮ. ಈಗ ಅದೇ ಹಾಡಿನ ‘ಎಕ್ಕ’ ಪದವನ್ನು ಯುವ ರಾಜ್​ಕುಮಾರ್ ಸಿನಿಮಾಕ್ಕೆ ಇಡಲಾಗಿದೆ. ಇಸ್ಪೀಟು ಆಟ ಪರಿಚಯ ಇರುವವರಿಗೆ ಎಕ್ಕ ಹೆಸರು ಚೆನ್ನಾಗಿ ಪರಿಚಿತವಾಗಿರುತ್ತದೆ.

ಯುವ ರಾಜ್​ಕುಮಾರ್ ನಟನೆಯ ಎರಡನೇ ಸಿನಿಮಾ ಇದಾಗಿದ್ದು, ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ಪಿಆರ್​ಕೆ ಪ್ರೊಡಕ್ಷನ್ಸ್ ಮತ್ತು ಜಯಣ್ಣ ಫಿಲಮ್ಸ್. ಸಿನಿಮಾದ ಇತರೆ ಪಾತ್ರವರ್ಗ ಇನ್ನಷ್ಟೆ ಅಂತಿಮಗೊಳ್ಳಬೇಕಿದೆ. ಸಿನಿಮಾ 2025ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು