‘ದರ್ಶನ್ ಬಳಿ ಹಣ ಇದೆ, ಆದರೆ ಬೌದ್ಧಿಕ ಪ್ರಜ್ಞೆ ಇಲ್ಲ’; ಮುಖ್ಯಮಂತ್ರಿ ಚಂದ್ರು ಬೇಸರ

|

Updated on: Aug 06, 2024 | 2:33 PM

ನಟ ದರ್ಶನ್​ ಅವರು ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನಲಾಗಿದೆ. ಈ ಕೇಸ್​ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿದ್ದಾರೆ. ದರ್ಶನ್​ಗೆ ಅನುಭವದ ಕೊರತೆ ಇದೆ ಎಂದಿದ್ದಾರೆ.

‘ದರ್ಶನ್ ಬಳಿ ಹಣ ಇದೆ, ಆದರೆ ಬೌದ್ಧಿಕ ಪ್ರಜ್ಞೆ ಇಲ್ಲ’; ಮುಖ್ಯಮಂತ್ರಿ ಚಂದ್ರು ಬೇಸರ
ದರ್ಶನ್- ಮುಖ್ಯಮಂತ್ರಿ ಚಂದ್ರು
Follow us on

ದರ್ಶನ್ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಅವರ ಪರವಾಗಿ ಕೆಲವರು ಹೇಳಿಕೆ ನೀಡಿದರೆ, ಇನ್ನೂ ಕೆಲವರು ಅವರನ್ನು ವಿರೋಧಿಸುತ್ತಿದ್ದಾರೆ. ಇನ್ನೂ ಕೆಲವರು ಮೌನ ತಾಳಿದ್ದಾರೆ. ನಟ ದರ್ಶನ್ ಅವರ ಬಗ್ಗೆ ಮುಖ್ಯಮಂತ್ರಿ ಚಂದ್ರು ಅವರು ನೇರ ಮಾತುಗಳನ್ನು ಹೇಳಿದ್ದಾರೆ. ದರ್ಶನ್​ ಅವರಲ್ಲಿ ಹಣ ಇದೆ ಆದರೆ ವಿವೇಚನೆ ಇಲ್ಲ ಎಂದು ಬೈದಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿದ್ದಾರೆ.

ಮುಖ್ಯಮಂತ್ರಿ ಚಂದ್ರು ಅವರು ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನ ಮಾತನಾಡಿದ್ದಾರೆ. ಈ ವೇಳೆ ಅವರು ಅನುಭವಗಳ ಪಾಠ ಹೇಳಿದ್ದಾರೆ. ‘ಅನುಭವದ ಪಾಠ ತುಂಬಾನೇ ಮುಖ್ಯ. ರೈತ ಓದದೇ ಇದ್ದರೂ ಅವನಿಗೆ ಜೀವನದ ಪಾಠ ಗೊತ್ತಿದೆ. ಹೇಗೆ ಉತ್ತಬೇಕು, ಬಿತ್ತಬೇಕು ಎಂಬುದು ತಿಳಿದಿರುತ್ತದೆ. ಸಾಮಾನ್ಯ ಜ್ಞಾನ ಇಲ್ಲದ ವಿದ್ಯಾಭ್ಯಾಸ ಏನಕ್ಕೂ ಪ್ರಯೋಜನ ಇಲ್ಲ’ ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು. ಇದಕ್ಕೆ ಉದಾಹರಣೆಯಾಗಿ ಅವರು ದರ್ಶನ್ ಅವರನ್ನು ತೆಗೆದುಕೊಂಡಿದ್ದಾರೆ.

‘ದರ್ಶನ್​​ಗೆ ಸಾಮಾನ್ಯ ಜ್ಞಾನ ಇಲ್ಲ. ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಹಣ ಇದೆ, ಆದರೆ ಬೌದ್ಧಿಕ ಪ್ರಜ್ಞೆ ಇಲ್ಲ. ಅವನು ವೃತ್ತಿಪರ ಮರ್ಡರರ್ ಅಲ್ಲ. ಆದಾಗ್ಯೂ ಕೊಲೆ ಮಾಡಿರುವ ಆರೋಪ ಬಂದಿದೆ. ಅವನಲ್ಲಿ ಕ್ರೌರ್ಯ ಯಾಕೆ ಬಂತು ಎಂದರೆ ಅದಕ್ಕೆ ಕಾರಣ ಧಿಮಾಕು, ದುರಹಂಕಾರ, ಅನುಭವದ ಕೊರತೆ. ರಾಜ್​ಕುಮಾರ್​ಗೆ ಅವಮಾನ ಆಗಿತ್ತು. ಆದರೆ, ಅದನ್ನು ಮೆಟ್ಟಿನಿಂತನು’ ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.

ಮುಖ್ಯಮಂತ್ರಿ ಚಂದ್ರು ಅವರು ಚಿತ್ರರಂಗದ ಹಿರಿಯರು. ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಅವರು ನಂತರ ಹಿರಿತೆರೆಗೆ ಬಂದರು. ಸದ್ಯ ಕಿರುತೆರೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಅನೇಕ ಯುವ ಹೀರೋಗಳಿಗೆ ಮುಖ್ಯಮಂತ್ರಿ ಚಂದ್ರು ಅವರು ಮಾದರಿ. ಯಾರಾದರೂ ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳುವ ಕೆಲಸವನ್ನು ಚಂದ್ರು ಮಾಡಿದ್ದಾರೆ.

ಇದನ್ನೂ ಓದಿ: ಗೆಳೆಯರಾಗಿದ್ದಾಗ ಸುದೀಪ್ ಹಾಗೂ ದರ್ಶನ್ ಈ ವಿಷಯವನ್ನು ಮಾತ್ರ ಚರ್ಚಿಸುತ್ತಿರಲಿಲ್ಲವಂತೆ

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರನ್ನು ಸದ್ಯ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಶೀಘ್ರವೇ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡೋ ಸಾಧ್ಯತೆ ಇದೆ. ಆ ಬಳಿಕ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.