ಜಾಮೀನಿಗೆ ದರ್ಶನ್ ಅರ್ಜಿ ಸಲ್ಲಿಸೋದು ಯಾವಾಗ? ಇಷ್ಟೊಂದು ವಿಳಂಬವೇಕೆ?

|

Updated on: Sep 20, 2024 | 12:50 PM

ದರ್ಶನ್ ಪರ ವಕೀಲರ ಕೈಗೆ ಇತ್ತೀಚೆಗಷ್ಟೇ ಚಾರ್ಜ್​ಶೀಟ್ ಸಿಕ್ಕಿದೆ. ಈ ಕಾರಣಕ್ಕೆ ಅವರು ಕೂಲಂಕುಶವಾಗಿ ದೋಷಾರೋಪ ಪಟ್ಟಿಯ ಅಧ್ಯಯನ ಮಾಡುತ್ತಿದ್ದಾರೆ. ಚಾರ್ಜ್​ಶೀಟ್​ನ ಸಂಪೂರ್ಣ ಓದಿದ ಬಳಿಕವೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಜಾಮೀನಿಗೆ ದರ್ಶನ್ ಅರ್ಜಿ ಸಲ್ಲಿಸೋದು ಯಾವಾಗ? ಇಷ್ಟೊಂದು ವಿಳಂಬವೇಕೆ?
ದರ್ಶನ್
Follow us on

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿ ಮೂರು ತಿಂಗಳು ಕಳೆದಿದೆ. ಈವರೆಗೆ ದರ್ಶನ್ ಕಡೆಯಿಂದ ಜಾಮೀನಿಗೆ ಅರ್ಜಿ ಸಲ್ಲಿಕೆ ಆಗಿಲ್ಲ. ಈಗಾಗಲೇ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ನಿರಂತರವಾಗಿ ಜಾಮೀನಿಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ದರ್ಶನ್ ಅವರು ಈವರೆಗೆ ಜಾಮೀನಿಗೆ ಕೋರಿ ಯಾವುದೇ ಮನವಿ ಸಲ್ಲಿಸಿಲ್ಲ. ಹೀಗೆಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್​ ಅವರನ್ನು ಇರಿಸಲಾಗಿದೆ. ಇಂದು (ಸೆಪ್ಟೆಂಬರ್ 20) ದರ್ಶನ್​ ಭೇಟಿಗೆ ವಕೀಲರು ಜೈಲಿಗೆ ಆಗಮಿಸಲಿದ್ದಾರೆ. ಈ ವೇಳೆ ಜಾಮೀನು ಅರ್ಜಿ ವಿಚಾರವಾಗಿ ಚರ್ಚೆ ನಡೆಯಲಿದೆ. ಸೋಮವಾರದ ವೇಳೆಗೆ ಜಾಮೀನು ಅರ್ಜಿ ಸಲ್ಲಿಕೆ ಆಗುವ ಸಾಧ್ಯತೆ ಇದೆ. ಇದನ್ನು ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಆದಷ್ಟು ಬೇಗ ಅವರು ಜೈಲಿನಿಂದ ಹೊರಕ್ಕೆ ಬರಲಿ ಎಂದು ನಿರೀಕ್ಷಿಸುತ್ತಿದ್ದಾರೆ.

ದರ್ಶನ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಆದ ಬಳಿಕ ವಕೀಲರು ಬಳ್ಳಾರಿ ಜೈಲಿಗೆ ಬಂದಿದ್ದರು. ಈಗ ಅವರು ಜೈಲಿಗೆ ಬಂದು ಕೆಲ ದಾಖಲೆಗಳಿಗೆ ಸಹಿ ಪಡೆಯಲಿದ್ದಾರೆ. ಆ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೈಲಿಗೆ ಬರುವ ವಿಚಾರವನ್ನು ಜೈಲಧಿಕಾರಿಗಳಿಗೆ ವಕೀಲರು ತಿಳಿಸಿದ್ದಾರೆ.

ದರ್ಶನ್ ಪರ ವಕೀಲರ ಕೈಗೆ ಇತ್ತೀಚೆಗಷ್ಟೇ ಚಾರ್ಜ್​ಶೀಟ್ ಸಿಕ್ಕಿದೆ. ಈ ಕಾರಣಕ್ಕೆ ಅವರು ಕೂಲಂಕುಶವಾಗಿ ದೋಷಾರೋಪ ಪಟ್ಟಿಯ ಅಧ್ಯಯನ ಮಾಡುತ್ತಿದ್ದಾರೆ. ಚಾರ್ಜ್​ಶೀಟ್​ನ ಸಂಪೂರ್ಣ ಓದಿದ ಬಳಿಕವೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಯಶ್ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದ ದರ್ಶನ್; ಇಲ್ಲಿದೆ ಹಳೆಯ ನೆನಪು

ದರ್ಶನ್ ಅವರು ಜೈಲಿನಲ್ಲಿ ಹೈರಾಣವಾಗಿದ್ದಾರೆ. ಅವರು ಬೆಂಗಳೂರು ಜೈಲಿನಲ್ಲಿ ಹಾಯಾಗಿ ಇದ್ದರು. ಇದು ಗೊತ್ತಾದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇದರಿಂದ ದರ್ಶನ್ ಸಾಕಷ್ಟು ವಿಚಲಿತಗೊಂಡಿದ್ದಾರೆ. ಆಗಾಗ ಕುಟುಂಬದವರು ಬಂದು ದರ್ಶನ್​ನ ಭೇಟಿ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 12:49 pm, Fri, 20 September 24