Kaatera Collection: ‘ಇಂಡಸ್ಟ್ರಿ ಹಿಟ್‘; 200 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಕಾಟೇರ’

|

Updated on: Jan 19, 2024 | 9:59 AM

‘ಕಾಟೇರ’ ಸಿನಿಮಾ ಕರ್ನಾಟಕದಾದ್ಯಂತ ಈ ವರೆಗೆ 206 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬರೋಬ್ಬರಿ 1 ಕೋಟಿ ಟಿಕೆಟ್ ಮಾರಾಟ ಆಗಿದೆ. ಈ ಚಿತ್ರವನ್ನು ‘ಇಂಡಸ್ಟ್ರಿ ಹಿಟ್’ ಎಂದು ಫ್ಯಾನ್ಸ್ ಕರೆದಿದ್ದಾರೆ. 

Kaatera Collection: ‘ಇಂಡಸ್ಟ್ರಿ ಹಿಟ್‘; 200 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಕಾಟೇರ’
ದರ್ಶನ್
Follow us on

ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಇತ್ತೀಚೆಗೆ ಜೋರಾಗಿದೆ. ಬಿಸ್ನೆಸ್ ದೃಷ್ಟಿಯಿಂದ ಇದು ಲಾಭದಾಯಕ. ಆದರೆ, ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿ ‘ಕಾಟೇರ’ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ ಅನ್ನೋದು ವಿಶೇಷ. ಈ ಚಿತ್ರದಿಂದ ನಟ ದರ್ಶನ್ (Darshan Thoogudeepa) ಹಾಗೂ ನಿರ್ದೇಶಕ ತರುಣ್ ಸುಧೀರ್ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು ಈ ಚಿತ್ರದಿಂದ ಲಾಭ ಕಂಡಿದ್ದಾರೆ. ಇನ್ನೂ ಕೆಲವು ದಿನ ಸಿನಿಮಾದ ಅಬ್ಬರ ಮುಂದುವರಿಯಲಿದೆ. ಈ ಚಿತ್ರವನ್ನು ‘ಇಂಡಸ್ಟ್ರಿ ಹಿಟ್’ ಎಂದು ಫ್ಯಾನ್ಸ್ ಕರೆದಿದ್ದಾರೆ.

ದರ್ಶನ್ ಅವರು ಮಾಸ್ ಸಿನಿಮಾಗಳ ಮೂಲಕ ಫೇಮಸ್ ಆದವರು. ‘ಕಾಟೇರ’ ಸಿನಿಮಾದಲ್ಲಿ ಮಾಸ್ ವಿಚಾರಗಳ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ಕೂಡ ಇದೆ. ಈ ಎಲ್ಲಾ ಕಾರಣಕ್ಕೆ ‘ಕಾಟೇರ’ ಸಿನಿಮಾ ಯಶಸ್ಸು ಕಂಡಿದೆ. ದರ್ಶನ್ ವೃತ್ತಿ ಜೀವನದಲ್ಲೇ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.

‘ಕಾಟೇರ’ ಸಿನಿಮಾ ಈ ವರೆಗೆ ಕರ್ನಾಟಕದಾದ್ಯಂತ 206 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈವರೆಗೆ ಬರೋಬ್ಬರಿ 1 ಕೋಟಿ ಟಿಕೆಟ್ ಮಾರಾಟ ಆಗಿದೆ. ಹೊಸ ವರ್ಷ, ಸಂಕ್ರಾಂತಿ ಸಂದರ್ಭದಲ್ಲಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಇದ್ದಿದ್ದು ಚಿತ್ರಕ್ಕೆ ಸಹಕಾರಿ ಆಗಿದೆ. ಈಗಲೂ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರದ ಹೆಚ್ಚುಗಾರಿಕೆ. ಇನ್ನೂ ಕೆಲವು ದಿನ ಸಿನಿಮಾದ ಅಬ್ಬರ ಮುಂದುವರಿಯಲಿದೆ.

ಇದನ್ನೂ ಓದಿ: ‘ದರ್ಶನ್ ನಟನೆಯ ಕಾಟೇರ ನೋಡಿದ್ರಾ’; ಅಭಿಮಾನಿ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ ಏನು?

ಈ ಚಿತ್ರದ ಟಿವಿ ಪ್ರಸಾರ ಹಕ್ಕನ್ನು ಜೀ ಕನ್ನಡ ಹಾಗೂ ಒಟಿಟಿ ಹಕ್ಕನ್ನು ಜೀ5 ಪಡೆದುಕೊಂಡಿದೆ. ಥಿಯೇಟರ್​ನಲ್ಲಿ ಪ್ರಸಾರ ಪೂರ್ಣಗೊಂಡ ಬಳಿಕ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ದರ್ಶನ್ ಅಭಿಮಾನಿಗಳು ಈಗಾಗಲೇ ಅನೇಕ ಬಾರಿ ಸಿನಿಮಾ ವೀಕ್ಷಿಸಿದ್ದಾರೆ. ಈ ಚಿತ್ರ ಒಟಿಟಿಯಲ್ಲೂ ದಾಖಲೆ ಸೃಷ್ಟಿಸೋದು ಪಕ್ಕಾ ಎನ್ನುವ ಅಭಿಪ್ರಾಯ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:52 am, Fri, 19 January 24