ನಟ ದರ್ಶನ್ ಅವರ ಕ್ರೌರ್ಯ ಮಿತಿ ಮೀರಿತ್ತು ಎನ್ನುವ ವಿಚಾರ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಈ ಬಗ್ಗೆ ಒಂದೊಂದೇ ವಿಚಾರ ರಿವೀಲ್ ಆಗುತ್ತಾ ಇದೆ. ವಿಚಾರಣೆ ವೇಳೆ ನಟ ದರ್ಶನ್ ಅವರು ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ತಮ್ಮ ತಪ್ಪನ್ನು ಅವರು ಒಪ್ಪಿಕೊಂಡಿದ್ದಾರೆ. ಅವರ ಕ್ರೌರ್ಯವನ್ನು ಬಿಂಬಿಸುವ ಘಟನೆ ಬಗ್ಗೆ ಚಾರ್ಜ್ಶೀಟ್ನಲ್ಲಿ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಮಾಂಸದೂಟ ತಿನ್ನಿಸಿದ್ದಾಗಿ ವರದಿ ಆಗಿತ್ತು. ಇದು ನಿಜ ಅನ್ನೋದು ಚಾರ್ಜ್ಶೀಟ್ನಿಂದ ಗೊತ್ತಾಗಿದೆ. ರೇಣುಕಾಸ್ವಾಮಿಯನ್ನು ಕಟ್ಟಿ ಹಾಕಿ ಡಿ ಗ್ಯಾಂಗ್ ಊಟ ನೀಡಿತ್ತು. ರೇಣುಕಾಸ್ವಾಮಿ ಒಂದು ಅಗಳು ತಿಂದ ಕೂಡಲೇ ಅದು ಮಾಂಸಹಾರ ಅನ್ನೋದು ಗೊತ್ತಾಗಿದೆ. ಹೀಗಾಗಿ ಅದನ್ನು ಅವರು ಉಗುಳಿದ್ದಾರೆ. ಅನ್ನ ಉಗುಳುತ್ತೀಯಾ ಬೋ* ಮಗನೆ ಎಂದು ದರ್ಶನ್ ಬೈದಿದ್ದರು. ಆ ಬಳಿಕ ಶೂನಿಂದ ಒದ್ದು ದರ್ಶನ್ ವಿಕೃತಿ ಮೆರೆದಿದ್ದರು. ಬಳಿಕ ಬಿರಿಯಾನಿ ಊಟವನ್ನು ಬಲವಂತವಾಗಿ ತಿನ್ನಿಸಿದ್ದರು.
ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರೋದು ಪತ್ತೆ ಆಗಿತ್ತು. ಅದೇ ರೀತಿ ಅವರು ಧರಿಸಿದ ಶೂಗೆ ಅಂಟಿದ್ದು ರೇಣುಕಾಸ್ವಾಮಿ ರಕ್ತ ಅನ್ನೋದು ಗೊತ್ತಾಗಿದೆ. ಶೂಗೆ ರಕ್ತ ಅಂಟಿಸಿಕೊಂಡೇ ಮೈಸೂರಿಗೆ ದರ್ಶನ್ ತೆರಳಿದ್ದರು. ಮೈಸೂರಿನ ಹೋಟೆಲ್ನಲ್ಲಿ ದರ್ಶನ್ನ ಬಂಧಿಸಲಾಗಿತ್ತು. ಆಗ ಬೇರೊಂದು ಶೂ ಧರಿಸಿ ಪೊಲೀಸರ ಜೊತೆಗೆ ದರ್ಶನ್ ತೆರಳಿದ್ದರು. ಹೋಟೆಲ್ ಸಿಬ್ಬಂದಿ ಶೂ ಹಾಗೂ ಬಟ್ಟೆ ಪ್ಯಾಕ್ ಮಾಡಿ ಪತ್ನಿ ಮನೆಗೆ ಕಳುಹಿಸಿದ್ದರು. ನಂತರ ಇದನ್ನು ಪೊಲೀಸರು ಜಪ್ತಿ ಮಾಡಿದ್ದರು. ಬಟ್ಟೆ ವಾಶ್ ಮಾಡಿದ್ದರಿಂದ ಕೆಮಿಕಲ್ನಿಂದ ರೇಣುಕಾಸ್ವಾಮಿ ರಕ್ತ ಪತ್ತೆಯಾಗಿದೆ. ದರ್ಶನ್ ಶೂ ವಾಶ್ ಮಾಡಿರದ ಕಾರಣ ಅದರಲ್ಲಿ ಇದ್ದ ರಕ್ತದಿಂದ ಡಿಎನ್ಎ ಮ್ಯಾಚ್ ಮಾಡಲಾಗಿದೆ.
ಇದನ್ನೂ ಓದಿ: ದರ್ಶನ್ ಹಾಗೂ ಪವಿತ್ರಾ ಪತಿ-ಪತ್ನಿಯಾ? ಚಾರ್ಜ್ಶೀಟ್ನಲ್ಲಿರೋ ಉಲ್ಲೇಖ ಏನು?
ದರ್ಶನ್ ಮೇಲೆ 8 ತಿಂಗಳ ಹಿಂದೆ ಎಫ್ಐಆರ್ ದಾಖಲಾಗಿತ್ತು. ಸಾಕು ನಾಯಿ ಕಚ್ಚಿದ್ದ ಹಿನ್ನಲೆಯಲ್ಲಿ ದರ್ಶನ್ ಮೇಲೆ ಎಫ್ಐಆರ್ ದಾಖಲು ಮಾಡಲಾಗಿತ್ತು. ಈ ವೇಳೆ ನೋಟಿಸ್ ನೀಡಲು ದರ್ಶನ್ ಮನೆಗೆ ಆರ್.ಆರ್.ನಗರ ಇನ್ಸ್ಪೆಕ್ಟರ್ ಬಂದಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಮುಂದೆಯೇ ದರ್ಶನ್ ಪೊಗರು ತೋರಿಸಿದ್ದರು. ‘ಮನೆವರೆಗೂ ಬಂದಿದ್ದೀರ. ನಾನೇನು ಕೊಲೆ ಮಾಡಿದ್ದೀನಾ? ಕೊಲೆ ಮಾಡಿದ್ರೆ ನಾನೇ ಠಾಣೆಗೆ ಬಂದು ಕುಳಿತುಕೊಳ್ಳುತ್ತೇನೆ’ ಎಂದು ದರ್ಶನ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:52 am, Sat, 7 September 24