ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ; ಹೇಗಿತ್ತು ನೋಡಿ ಮದುವೆ ಆಮಂತ್ರಣ ಪತ್ರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಇಂದು 23ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿರುವ ಕಾರಣ ದಂಪತಿ ದೂರ ದೂರ. ವಿಜಯಲಕ್ಷ್ಮೀ ಪತಿಯ ಫೋಟೋ ಹಂಚಿಕೊಂಡಿದ್ದು, ಧರ್ಮಸ್ಥಳದಲ್ಲಿ ನಡೆದ ಅವರ ಸರಳ ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ. ಎಷ್ಟೇ ಏಳುಬೀಳುಗಳಿದ್ದರೂ, ವಿಜಯಲಕ್ಷ್ಮೀ ದರ್ಶನ್ ಬೆನ್ನಲುಬಾಗಿ ನಿಂತಿದ್ದಾರೆ.

ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ; ಹೇಗಿತ್ತು ನೋಡಿ ಮದುವೆ ಆಮಂತ್ರಣ ಪತ್ರ
ದರ್ಶನ್​-ವಿಜಯಲಕ್ಷ್ಮೀ

Updated on: May 19, 2026 | 11:37 AM

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಾಗೂ ವಿಜಯಲಕ್ಷ್ಮೀ ದಂಪತಿ ಇಂದು (ಮೇ 19) ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ಪತಿಯ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದರ ನಡುವೆ, ಇವರ ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಭಾವನಾತ್ಮಕವಾಗಿ ಕಮೆಂಟ್ ಮಾಡುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಜೈಲು ವಾಸದ ಕಾರಣದಿಂದಾಗಿ ಈ ಬಾರಿ ದರ್ಶನ್ ಅವರಿಗೆ ಪತ್ನಿ ಬಳಿ ಇದ್ದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಶೇಷ ಭೇಟಿಗೆ ವಿಜಯಲಕ್ಷ್ಮೀ ಅವರು ಅವಕಾಶ ಕೇಳಿದ್ದಾರೆ.

ಧರ್ಮಸ್ಥಳದಲ್ಲಿ ನಡೆದಿದ್ದ ಸರಳ ವಿವಾಹ:

2003ರ ಮೇ 19ರ ಸೋಮವಾರದಂದು ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಬೆಳಿಗ್ಗೆ 9:10 ರಿಂದ 9:50 ರವರೆಗಿನ ಮಿಥುನ ಲಗ್ನದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮೀ ವಿವಾಹ ನಡೆದಿತ್ತು. ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆಯಾಗಿರೋ ವಿಜಯಲಕ್ಷ್ಮೀ ಹಾಗೂ ನಟ ದರ್ಶನ್ ಮಧ್ಯೆ ಪ್ರೀತಿ ಮೂಡಿ, ನಂತರ ಹಿರಿಯರ ಸಮ್ಮುಖದಲ್ಲಿ ಯಾವುದೇ ಆಡಂಬರವಿಲ್ಲದೆ ಸರಳವಾಗಿ ಮದುವೆ ನಡೆಯಿತು

ಈ ದಂಪತಿಗೆ ವಿನೀಶ್ ಹೆಸರಿನ ಮಗನಿದ್ದಾನೆ. ಇವರ ದಾಂಪತ್ಯ ಜೀವನವು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದರೂ, ಪತಿಯಿಂದ ಎಷ್ಟೇ ನೋವಾದರೂ ವಿಜಯಲಕ್ಷ್ಮೀ ಅವರು ಪ್ರತಿ ಹಂತದಲ್ಲೂ ದರ್ಶನ್ ಅವರ ಬೆನ್ನಲುಬಾಗಿ ನಿಂತಿದ್ದಾರೆ. ಈ ಮೊದಲು ದರ್ಶನ್ ಅವರಿಗೆ ಪೂರ್ಣ ಪ್ರಮಾಣದ ಜಾಮೀನು ದೊರಕಿಸಿಕೊಡುವಲ್ಲಿ ವಿಜಯಲಕ್ಷ್ಮೀ ಪ್ರಮುಖ ಪಾತ್ರ ವಹಿಸಿದ್ದರು. ಆ ಬಳಿಕ ಸುಪ್ರೀಂಕೋರ್ಟ್ ದರ್ಶನ್ ಜಾಮೀನನ್ನು ರದ್ದು ಮಾಡಿತ್ತು.


‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ ಹಾಗೂ ಒಪ್ಪಿಕೊಂಡ ಸಿನಿಮಾ ಕೆಲಸ ಪೂರ್ಣಗೊಳಿಸಬೇಕಿದೆ ಎಂದು ದರ್ಶನ್ ಅವರು ಕೋರ್ಟ್ ಎದುರು ಅಲವತ್ತುಕೊಂಡಿದ್ದರು. ಆದಾಗ್ಯೂ ಸುಪ್ರೀಂಕೋರ್ಟ್ ಜಾಮೀನು ನೀಡಿಲ್ಲ. ಹೀಗಾಗಿ, ಇನ್ನೂ ಒಂದು ವರ್ಷ ಅವರು ಜೈಲಿನಲ್ಲೇ ಇರಬೇಕಿದೆ.

ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವ: ದರ್ಶನ್-ವಿಜಯಲಕ್ಷ್ಮಿ ಮುಖಾಮುಖಿ ಭೇಟಿಗೆ ಅವಕಾಶ ಇದೆಯಾ?

ವಿವಾಹ ವಾರ್ಷಿಕೋತ್ಸವ ಮಿಸ್ಸಿಂಗ್

ದರ್ಶನ್ ಜೈಲಿನಿಂದ ಹೊರಗಿದ್ದಾಗ ಪತ್ನಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈಗ ಇಬ್ಬರೂ ದೂರ ದೂರ ಇದ್ದಾರೆ. ಹೀಗಾಗಿ, ಅದ್ದೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಣೆ ಅಸಾಧ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Tue, 19 May 26

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us