ದರ್ಶನ್​ಗೆ ಅಭಿಮಾನಿಗಳಿಂದಲೇ ಹೆಚ್ಚುತ್ತಿದೆ ಸಮಸ್ಯೆ; ಫ್ಯಾನ್ಸ್​ಗೆ ಅರ್ಥ ಆಗೋದು ಯಾವಾಗ?

|

Updated on: Mar 08, 2025 | 12:42 PM

ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಅಭಿಮಾನಿಗಳ ಒತ್ತಡ ಹೆಚ್ಚಿನ ಸಮಸ್ಯೆಯಾಗಿದೆ. ಅವರ ಆರೋಗ್ಯದ ಬಗ್ಗೆ ಚಿಂತಿಸದ ಅಭಿಮಾನಿಗಳು ನಿರಂತರವಾಗಿ ಸೆಲ್ಫಿ ಮತ್ತು ಆಶೀರ್ವಾದಕ್ಕಾಗಿ ಮುಗಿಬೀಳುತ್ತಿದ್ದಾರೆ. ಬೆನ್ನು ನೋವಿನಿಂದ ತೊಂದರೆ ಅನುಭವಿಸುತ್ತಿರುವ ದರ್ಶನ್ ಅವರು ಈ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ದರ್ಶನ್​ಗೆ ಅಭಿಮಾನಿಗಳಿಂದಲೇ ಹೆಚ್ಚುತ್ತಿದೆ ಸಮಸ್ಯೆ; ಫ್ಯಾನ್ಸ್​ಗೆ ಅರ್ಥ ಆಗೋದು ಯಾವಾಗ?
ದರ್ಶನ್
Follow us on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಹಲವು ತಿಂಗಳ ಕಾಲ ಜೈಲಿನಲ್ಲಿ ಇದ್ದ ದರ್ಶನ್ ಅವರಿಗೆ ತೀವ್ರವಾಗಿ ಬೆನ್ನುನೋವು ಕಾಣಿಸಿಕೊಂಡಿತು. ಈಗ ಹೊರ ಬಂದರೂ ಬೆನ್ನು ನೋವು ಮುಂದುವರಿದಿದೆ. ಅವರು ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾ ಇದ್ದಾರೆ. ದರ್ಶನ್ (Darshan) ಇನ್ನೂ ಸರಿಯಾಗಿ ರಿಕವರಿ ಆಗದ ಕಾರಣ ಶೂಟಿಂಗ್​ನಲ್ಲೂ ಭಾಗಿ ಆಗಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಅವರಿಗೆ ಅಭಿಮಾನಿಗಳಿಂದಲೇ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಅವರು ಓಪನ್ ಆಗಿ ಅಸಮಾಧಾನ ಹೊರಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ದರ್ಶನ್ ಅವರು ಎಲ್ಲೇ ತೆರಳಿದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರ ಮನೆಯ ಹೊರಗೆ ನಿತ್ಯ ಸಾಕಷ್ಟು ಫ್ಯಾನ್ಸ್ ದರ್ಶನ್​ನ ನೋಡಲು ಕಾತುರದಿಂದ ಕಾಯುತ್ತಾ ಇರುತ್ತಾರೆ. ಮೊದಲಾಗಿದ್ದರೆ ದರ್ಶನ್ ಅವರು ತಾಳ್ಮೆಯಿಂದ ಸೆಲ್ಫಿ ನೀಡುತ್ತಿದ್ದರು. ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆದರೆ, ಈಗ ದರ್ಶನ್ ಅವರಿಗೆ ಬೆನ್ನು ನೋವಿನಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಅವರಿಗೆ ಸರಿಯಾಗಿ ನಿಲ್ಲಲೂ ಸಾಧ್ಯವಾಗುತ್ತಿಲ್ಲ. ಆದರೆ ಇದನ್ನು ಫ್ಯಾನ್ಸ್ ಅರ್ಥಮಾಡಿಕೊಳ್ಳುತ್ತಿಲ್ಲ.

ಇದನ್ನೂ ಓದಿ
ದರ್ಶನ್, ಚಿತ್ರೀಕರಣಕ್ಕೆ ಮರಳುವುದು ಯಾವಾಗ? ಇಲ್ಲಿದೆ ಅಪ್​ಡೇಟ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಕೋರ್ಟ್​​ನಲ್ಲಿ ಅಕ್ಕ-ಪಕ್ಕ ನಿಂತರೂ ಮಾತನಾಡದ ದರ್ಶನ್-ಪವಿತ್ರಾ
ದರ್ಶನ್ ಕಾಲಿಗೆ ಬಿದ್ದ ಅಭಿಮಾನಿ; ಡಿ ಬಾಸ್ ಪ್ರತಿಕ್ರಿಯೆ ಏನು?


ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ದರ್ಶನ್ ಅವರು ಕಾರನ್ನು ಏಲು ಬರುತ್ತಿರುವ ದೃಶ್ಯ ಇದೆ. ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು, ಸೆಲ್ಫಿ ತೆಗೆದುಕೊಳ್ಳಲು ಕೆಲವರು ಮುಗಿ ಬಿದ್ದಿದ್ದಾರೆ. ದರ್ಶನ್ ಅವರು ಕಾರನ್ನು ಏರಿ ಹೊರಟರೂ ಫ್ಯಾನ್ಸ್ ಬಿಟ್ಟಿಲ್ಲ. ‘ನನಗೆ ಬೆನ್ನು ನೋವು ಇದೆ’ ಎಂದು ದರ್ಶನ್ ಮನವಿ ಮಾಡಿಕೊಂಡರೂ ಫ್ಯಾನ್ಸ್ ಕೇಳುತ್ತಿಲ್ಲ. ಈ ವಿಡಿಯೋದಲ್ಲಿ ಅವರು ಅಸಮಾಧಾನಗೊಂಡಿರೋದು ಸರಿಯಾಗಿ ಕಂಡು ಬಂದಿದೆ.

ಇದನ್ನೂ ಓದಿ: ಸುದೀಪ್, ದರ್ಶನ್, ಯಶ್ ಫ್ಯಾನ್ಸ್ ಕೂಡ ನನಗಾಗಿ ಪ್ರಾರ್ಥನೆ ಮಾಡಿದ್ದರು: ಶಿವಣ್ಣ

ವಿಡಿಯೋದ ಕಮೆಂಟ್ ಬಾಕ್ಸ್​​ನಲ್ಲಿ ಎಲ್ಲರೂ ‘ಅವರಿಗೆ ಬೆನ್ನು ನೋವು ಇದೆ. ಅಭಿಮಾನಿಗಳು ಸಹಕರಿಸಿ’ ಎಂದು ಕೋರಿದ್ದಾರೆ. ಇನ್ನೂ ಕೆಲವರು ‘ಅಭಿಮಾನಿಗಳಿಂದಲೇ ದರ್ಶನ್​​ಗೆ ತೊಂದರೆ ಆಗುತ್ತಿದೆ’ ಎಂಬಿತ್ಯಾದಿ ಕಮೆಂಟ್​ಗಳನ್ನು ಮಾಡಿದ್ದಾರೆ. ದರ್ಶನ್ ಅವರು ಇನ್ನಷ್ಟೇ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಬೇಕಿದೆ. ದರ್ಶನ್ ಜೈಲು ಸೇರಿದ್ದರಿಂದ ಸಿನಿಮಾ ಕೆಲಸಗಳು ಮುಂದಕ್ಕೆ ಹೋಗಿವೆ. ಸಿನಿಮಾ ಕೆಲಸ ಪೂರ್ಣಗೊಂಡ ಬಳಿಕವೇ ಅವರು ಸರ್ಜರಿಗೆ ಒಳಗಾಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.