ದರ್ಶನ್ ಅವರಿಗೆ ಅಕ್ಟೋಬರ್ 20ರ ಬಳಿಕ ಜಾಮೀನು ಸಿಗಲಿದೆ ಎಂದು ಅರ್ಜುನ್ ಗುರೂಜಿ ಅವರು ಈ ಮೊದಲು ಹೇಳಿದ್ದರು. ಅದು ನಿಜವಾಗಿದೆ. ಅವರು ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಅರ್ಜುನ್ ಗುರೂಜಿ ಅವರು ಮಾತನಾಡಿದ್ದಾರೆ. ‘ಭವಿಷ್ಯಗಳನ್ನು ಪ್ರೇರಣೆ ಪ್ರಕಾರವೇ ನೀಡಬೇಕಾಗುತ್ತದೆ. ಸುಮ್ಮನೆ ಕೊಡೋಕೆ ಆಗಲ್ಲ’ ಎಂದಿದ್ದಾರೆ ಅವರು.
‘ಅವಧೂತರು ಕೊಟ್ಟ ಪ್ರೇರಣೆ ಆಧರಿಸಿಯೇ ನಾನು ಭವಿಷ್ಯ ಕೊಡೋದು. 2025ರಲ್ಲಿ ದರ್ಶನ್ಗೆ ಒಳ್ಳೆಯ ಭವಿಷ್ಯ ಇದೆ. ಇದು ದರ್ಶನ್ ಅಭಿಮಾನಿಗಳಿಗೆ, ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಿಕ್ಕ ಜಯ. ವಿಜಯಲಕ್ಷ್ಮೀ ಅವರು ಸಾಕಷ್ಟು ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಾರೆ. ಅವರ ಪ್ರಾರ್ಥನೆ ಫಲ ಕೊಟ್ಟಿದೆ’ ಎಂದು ಅವಧೂತ ಗುರೂಜಿ ಅವರು ಹೇಳಿದ್ದಾರೆ.
‘ಸ್ತ್ರೀ ದೋಷ ಎಂಬುದು ಇಲ್ಲವೇ ಇಲ್ಲ. ಹೆಣ್ಣಿನಿಂದ ರಾಜ್ಯ ಉದ್ಧಾರ ಆಗಿದೆ, ರಾಜ್ಯ ನಾಶ ಆಗಿದ್ದೂ ಇದೆ. ತಾಯಿ ಅಳದಂತೆ ನೋಡಿಕೊಳ್ಳೋದು ಮಗನ ಕರ್ತವ್ಯ. ಸ್ತ್ರೀ ದೋಷ ಅನ್ನೋದೇ ಇಲ್ಲ. ಹಣವನ್ನು ಡಬಲ್ ಮಾಡಿಕೊಡುತ್ತೇನೆ ಎಂದು ಯಾರೋ ಬರುತ್ತಾರೆ. ಅದನ್ನು ಷೇರುಗಳ ಮೇಲೆ ಹಾಕಲಾಗುತ್ತದೆ. ಆದರೆ, ಹಣ ಡಬಲ್ ಆಗಲ್ಲ, ನಷ್ಟ ಆಗುತ್ತದೆ. ಆಗ ಆತ ಜಾತಕ ತೆಗೆದುಕೊಂಡು ಹೋಗಿ ತೋರಿಸುತ್ತಾನೆ. ಶನೀಶ್ವರನ ಕಾಟ ಇದೆ. ಈ ಕಾಟಕ್ಕೆ ನಷ್ಟ ಆಯಿತು ಎಂದು ಜ್ಯೋತಿಷಿ ಹೇಳುತ್ತಾನೆ. ನಾನ್ಯಾವಾಗ ನಿಂಗೆ 5 ಲಕ್ಷ ಹಾಕು ಎಂದಿದ್ದೆ ಎಂದು ಶನೇಶ್ವರ ಹೇಳ್ತಾನೆ. ದೇವರನ್ನು ಮಧ್ಯದಲ್ಲಿ ತರಬೇಡಿ. ನೀರಿಗೆ, ಗಾಳಿಗೆ, ದೇವರಿಗೆ ಜಾತಿ ತರಬೇಡಿ. ಸ್ತ್ರೀನ ಗೌರವಿಸಿ’ ಅವಧೂತ ಗುರೂಜಿ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಶೀಘ್ರವೇ ಬಿಗ್ ಶಾಕ್; ಬೆಂಗಳೂರು ಪೊಲೀಸರಿಂದ ಮಹತ್ವದ ನಿರ್ಧಾರ
‘ಕರ್ನಾಟಕದವರು ಪ್ರೀತಿಗೆ ಗೌರವ ನೀಡುತ್ತೇವೆ. ಒಳ್ಳೆಯ ನಟ ಎಂಬ ಅವರಿಗೆ ಪ್ರೀತಿ ಇದೆ. ಸಾಕಷ್ಟು ಜನರಿಗೆ ಮನೆ ಕಟ್ಟಿ ಕೊಟ್ಟಿದ್ದಾರೆ. ಮಾಡಿದ್ದು ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದಾರೆ. ಅವರು ಕೂಡ ಉತ್ತಮ ಪ್ರಜೆ ಆಗುತ್ತಾರೆ’ ಎಂದಿದ್ದಾರೆ ಗುರೂಜಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.