ಬುಧವಾರ ಕೋಟಿಯಿಂದ ಲಕ್ಷಕ್ಕೆ ಕುಸಿದ ‘ಡೆವಿಲ್’ ಸಿನಿಮಾ ಕಲೆಕ್ಷನ್; ವಾರದ ಗಳಿಕೆ ಎಷ್ಟು?

ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಮಧ್ಯೆ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಕುಸಿತ ಕಂಡಿದೆ. ಮೊದಲ ವಾರದಲ್ಲಿ 25 ಕೋಟಿ ರೂಪಾಯಿ ಗಳಿಸಿದ್ದರೂ, ದಿನದಿಂದ ದಿನಕ್ಕೆ ಕಲೆಕ್ಷನ್ ಇಳಿಕೆಯಾಗಿದೆ. ಹೊಸ ಚಿತ್ರಗಳ ಸ್ಪರ್ಧೆ ಮತ್ತು ದೊಡ್ಡ ಬಜೆಟ್ ಕಾರಣ, ಸಿನಿಮಾ ಲಾಭದ ಹಾದಿ ಕಂಡುಕೊಳ್ಳಲು ಮುಂದಿನ ದಿನಗಳು ನಿರ್ಣಾಯಕವಾಗಿವೆ.

ಬುಧವಾರ ಕೋಟಿಯಿಂದ ಲಕ್ಷಕ್ಕೆ ಕುಸಿದ ‘ಡೆವಿಲ್’ ಸಿನಿಮಾ ಕಲೆಕ್ಷನ್; ವಾರದ ಗಳಿಕೆ ಎಷ್ಟು?
ದರ್ಶನ್

Updated on: Dec 18, 2025 | 6:58 AM

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ (Devil Movie) ಮಿಶ್ರ ಪ್ರತಿಕ್ರಿಯೆ ಪಡೆದಿದೆ. ದ್ವಿಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ವೀರ್ ನಿರ್ದೇಶನ ಚಿತ್ರಕ್ಕೆ ಇದೆ. ಒಳ್ಳೆಯ ಕಥೆಯಾಗಿದ್ದರೂ ಅದನ್ನು ಸರಿಯಾಗಿ ನಿರೂಪಿಸಿ ಜನರ ಮುಂದಿಡಲು ಅವರು ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ. ಈಗ ‘ಡೆವಿಲ್’ ಸಿನಿಮಾ ಕಲೆಕ್ಷನ್ ವಿವರ ಸಿಕ್ಕಿದೆ. ದಿನ ಕಳೆದಂತೆ ಸಿನಿಮಾದ ಗಳಿಕೆ ಕುಸಿಯುತ್ತಿದೆ. ಬುಧವಾರ (ಡಿಸೆಂಬರ್ 17) ಈ ಸಿನಿಮಾ ಕೇವಲ ಲಕ್ಷಗಳಲ್ಲಿ ಕಲೆಕ್ಷನ್ ಮಾಡಿದೆ. ಸಿನಿಮಾ ಪಾಲಿಗೆ ವೀಕೆಂಡ್ ತುಂಬಾನೇ ಮುಖ್ಯವಾಗಲಿದೆ.

‘ಡೆವಿಲ್’ ಚಿತ್ರ ರಿಲೀಸ್ ಆಗಿದ್ದು ಕಳೆದ ಗುರುವಾರ (ಡಿಸೆಂಬರ್ 5). ಅಂದರೆ ಸಿನಿಮಾ ರಿಲೀಸ್ ಆಗಿ ಸರಿಯಾಗಿ ಒಂದು ವಾರ ಕಳೆದಿದೆ. sacnilk ವರದಿ ಪ್ರಕಾರ ಈ ಚಿತ್ರ ಒಂದು ವಾರಕ್ಕೆ ಸರಿ ಸುಮಾರು 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನದ ಅದ್ದೂರಿ ಕಲೆಕ್ಷನ್​ನಿಂದಾಗಿ ಸಿನಿಮಾಗೆ ಸಖತ್ ಮೈಲೇಜ್ ಸಿಕ್ಕಿತ್ತು. ಆದರೆ, ನೆಗೆಟಿವ್ ವಿಮರ್ಶೆ ಹಿನ್ನೆಲೆಯಲ್ಲಿ ಸಿನಿಮಾದ ಗಳಿಕೆ ಕುಸಿತ ಕಂಡಿದೆ.

ಡಿಸೆಂಬರ್ 17ರಂದು ಸಿನಿಮಾ ಕೇವಲ 80 ಲಕ್ಷ ರೂಪಾಯಿ ಗಳಿಸಿದೆ ಎಂದು sacnilk ವರದಿ ಹೇಳಿದೆ. ಮಂಗಳವಾರ ಈ ಚಿತ್ರ 1.05 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ವಾರದ ದಿನ ಆಗಿರುವುದರಿಂದ ಇಂದು ಸಿನಿಮಾ ನೋಡುವವರ ಸಂಖ್ಯೆ ಮತ್ತಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ ಇಂದಿನ ಕಲೆಕ್ಷನ್ ಕೂಡ ಲಕ್ಷದಲ್ಲೇ ಇರೋ ಸಾಧ್ಯತೆ ಇದೆ.

‘ಡೆವಿಲ್’ ಸಿನಿಮಾಗೆ ಮುಂದಿನವಾರ ಅಗ್ನಿಪರೀಕ್ಷೆ ಇದೆ. ‘ಡೆವಿಲ್’ ಹೆಚ್ಚು ಜನರನ್ನು ಸೆಳೆಯುತ್ತಿರುವುದು ಸಿಂಗಲ್​ ಸ್ಕ್ರೀನ್​ಗಳಲ್ಲಿ. ಆದರೆ, ಡೆಸೆಂಬರ್ 25ರಂದು ಕನ್ನಡದಲ್ಲಿ ‘ಮಾರ್ಕ್’ ಹಾಗೂ ‘45’ ಸಿನಿಮಾ ರಿಲೀಸ್ ಆಗಲಿದೆ. ಎರಡೂ ಸ್ಟಾರ್ ಸಿನಿಮಾಗಳು. ಹೀಗಾಗಿ ಈ ಚಿತ್ರಗಳಿಗೆ ಥಿಯೇಟರ್​ಗಳು ಹಂಚಿಕೆ ಆಗುವುದರಿಂದ ‘ಡೆವಿಲ್’ ಸಂಕಷ್ಟ ಎದುರಿಸಬಹುದು.

ಇದನ್ನೂ ಓದಿ: ‘ಡೆವಿಲ್’ ಮಂಗಳವಾರದ ಗಳಿಕೆ ಇಷ್ಟೇನಾ? ಮುಂದಿದೆ ದೊಡ್ಡ ಸವಾಲು

‘ಡೆವಿಲ್’ ನಿರ್ಮಾಣಕ್ಕೆ ದೊಡ್ಡ ಬಜೆಟ್ ಮೀಸಲಿಡಲಾಗಿದೆ ಎನ್ನಲಾಗಿದೆ. ಹೀಗಾಗಿ, ಸಿನಿಮಾ ಮತ್ತಷ್ಟು ಗಳಿಕೆ ಮಾಡಿದರೆ ಮಾತ್ರ ಚಿತ್ರಕ್ಕೆ ಲಾಭದಾಯಕವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.