‘ಡೆವಿಲ್’ ಮಂಗಳವಾರದ ಗಳಿಕೆ ಇಷ್ಟೇನಾ? ಮುಂದಿದೆ ದೊಡ್ಡ ಸವಾಲು
'ಡೆವಿಲ್' ಸಿನಿಮಾ ಆರಂಭಿಕ ಗಳಿಕೆ 10 ಕೋಟಿ ದಾಟಿದರೂ, ನಂತರ ಕಲೆಕ್ಷನ್ ಕುಸಿತ ಕಂಡಿದೆ. ಮಂಗಳವಾರದ ಗಳಿಕೆ ಕುಸಿತ ಕಂಡಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ 25 ಕೋಟಿ ದಾಟಿದೆ. ಮುಂಬರುವ ಕನ್ನಡ, ಹಿಂದಿ, ತೆಲುಗು ಚಿತ್ರಗಳಿಂದ 'ಡೆವಿಲ್' ದೊಡ್ಡ ಸ್ಪರ್ಧೆ ಎದುರಿಸಲಿದೆ.

‘ಡೆವಿಲ್’ ಸಿನಿಮಾ (Devil Movie) ಡಿಸೆಂಬರ್ 11ರಂದು ತೆರೆಗೆ ಬಂತು. ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಬರೋಬ್ಬರಿ 10 ಕೋಟಿ ರೂಪಾಯಿ. ಆ ಬಳಿಕ ದಿನ ಕಳೆದಂತೆ ಸಿನಿಮಾದ ಕಲೆಕ್ಷನ್ ತಗ್ಗುತ್ತಾ ಬಂದಿದೆ. ಈ ಸಿನಿಮಾ ವಾರದ ದಿನಗಳಲ್ಲಿ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಈ ಸಿನಿಮಾ ಡಿಸೆಂಬರ್ 16ರಂದು ಸಾಧಾರಣ ಗಳಿಕೆ ಮಾಡಿದೆ. ಚಿತ್ರಕ್ಕೆ ಮುಂದೆ ದೊಡ್ಡ ಸವಾಲಿದೆ.
‘ಡೆವಿಲ್’ ಚಿತ್ರವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಈ ಕಾರಣದಿಂದ ಸಿನಿಮಾನ ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ. ಇದು ಚಿತ್ರಕ್ಕೆ ಸಹಕಾರಿ ಆಗುತ್ತಿದೆ. ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಕೊಟ್ಟಿದ್ದಾರೆ. ಸದ್ಯ ಸಿನಿಮಾದ ಗಳಿಕೆ 25 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗುತ್ತಾ ಇದೆ.
ಮಂಗಳವಾರ (ಡಿಸೆಂಬರ್ 16) ಈ ಸಿನಿಮಾ ಕಲೆಕ್ಷನ್ ಮಾಡಿದ್ದು ಕೇವಲ 1 ಕೋಟಿ ರೂಪಾಯಿ ಎಂದು sacnilk ವರದಿ ಮಾಡಿದೆ. ಇಂದಿನ ಗಳಿಕೆ ಲಕ್ಷಕ್ಕೆ ಕುಸಿಯುವ ಎಲ್ಲಾ ಸಾಧ್ಯತೆ ಇದೆ. ಸಿನಿಮಾ ಕಲೆಕ್ಷನ್ ಮತ್ತೆ ಚೇತರಿಕೆ ಕಾಣಲು ವೀಕೆಂಡ್ ಬರಬೇಕಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ.
ಮುಂದಿನ ವಾರ ಕ್ರಿಸ್ಮಸ್ ಪ್ರಯುಕ್ತ ಕನ್ನಡದಲ್ಲಿ ಶಿವರಾಜ್ಕುಮಾರ್, ರಾಜ್ ಬಿ ಶೆಟ್ಟಿ, ಉಪೇಂದ್ರ ನಟನೆಯ ‘45’ ಹಾಗೂ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಎರಡೂ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ. ಟ್ರೇಲರ್ ಗಮನ ಸೆಳೆದಿದೆ. ಈ ಎರಡು ಚಿತ್ರಗಳು ಕಾಲಿಟ್ಟ ಬಳಿಕ ‘ಡೆವಿಲ್’ಗೆ ಹೆಚ್ಚಿನ ಸವಾಲು ಎದುರಾಗಲಿದೆ.
ಇದನ್ನೂ ಓದಿ: ಸೋಮವಾರ ‘ಧುರಂಧರ್’, ‘ಅಖಂಡ 2’ ಎದುರು ಮಂಕಾದ ‘ಡೆವಿಲ್’ ಕಲೆಕ್ಷನ್
ಇನ್ನು ಹಿಂದಿಯಲ್ಲಿ ಈಗಾಗಲೇ ‘ಧುರಂಧರ್’ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಮಲ್ಟಿಪ್ಲೆಕ್ಸ್ಗಳಲ್ಲಿ ಈ ಸಿನಿಮಾಗೆ ಹೆಚ್ಚಿನ ಸ್ಕ್ರೀನ್ ಸಿಗುತ್ತಿದೆ. ಅತ್ತ ತೆಲುಗಿನ ‘ಅಖಂಡ 2’ ಕೂಡ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದು ಡೆವಿಲ್ ಚಿತ್ರಕ್ಕೆ ಹಿನ್ನಡೆಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




