ದರ್ಶನ್ ಹಾಡಿದ್ದ ‘ಹೊಸ ಬೆಳಕು..’ ಹಾಡು ಮತ್ತೆ ವೈರಲ್; ಮ್ಯೂಸಿಕ್ ಕೊಟ್ಟು ಹಾಡಿದ್ದ ದಾಸ

ದರ್ಶನ್ ಅವರ ಹಾಡು ‘ಹೊಸ ಬಳೆಕು’ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ರಾಜ್ ಕಪ್ ಸಮಯದಲ್ಲಿ ದರ್ಶನ್ ಮತ್ತು ಶಿವಣ್ಣ ಒಟ್ಟಾಗಿ ಹಾಡಿದ ಹಾಡು. ದರ್ಶನ್ ಅವರು ಸದ್ಯ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ಕೇರಳದ ಕಣ್ಣೂರಿನಲ್ಲಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ದರ್ಶನ್ ಹಾಡಿದ್ದ ‘ಹೊಸ ಬೆಳಕು..’ ಹಾಡು ಮತ್ತೆ ವೈರಲ್; ಮ್ಯೂಸಿಕ್ ಕೊಟ್ಟು ಹಾಡಿದ್ದ ದಾಸ
ದರ್ಶನ್

Updated on: Jun 18, 2025 | 8:48 AM

ದರ್ಶನ್ (Darshan) ಅವರು ಸ್ಟಾರ್ ಹೀರೋ. ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಭರ್ಜರಿ ಬೇಡಿಕೆ ಇದೆ. ಈ ಮೊದಲು ಅವರು ಹಾಡಿದ್ದ ‘ಹೊಸ ಬಳೆಕು..’ ಸಾಂಗ್​ನ ಮತ್ತೆ ವೈರಲ್ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾ ಪೇಜ್​ಗಳಲ್ಲಿ ಈ ಹಾಡನ್ನು ಹಾಕಿ ರೀಲ್ಸ್​ಗಳನ್ನು ಮಾಡಲಾಗುತ್ತಿದೆ. ಇನ್​ಸ್ಟಾಗ್ರಾಮ್ ರೀಲ್ಸ್​ಗಳನ್ನು ಓಪನ್ ಮಾಡಿದರೆ ಇದೇ ಹಾಡು ಕಾಣುತ್ತಿದೆ. ಈ ಹಾಡನ್ನು ದರ್ಶನ್ ಹಾಡಿದ್ದು ಎಲ್ಲಿ ಮತ್ತು ಯಾವಾಗ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ದರ್ಶನ್ ಹಾಗೂ ರಾಜ್​ಕುಮಾರ್ ಕುಟುಂಬದ ಮಧ್ಯೆ ಒಳ್ಳೆಯ ಒಡನಾಟ ಇತ್ತು. ರಾಜ್​ಕುಮಾರ್ ಅವರನ್ನು ದರ್ಶನ್ ತುಂಬಾನೇ ಗೌರವಿಸುತ್ತಾರೆ. ಆರಂಭದಲ್ಲಿ ರಾಜ್​ಕುಮಾರ್ ಕುಟುಂಬದ ನಿರ್ಮಾಣ ಸಂಸ್ಥೆ ಜೊತೆ ದಾಸ ಕೆಲಸ ಮಾಡಿದ್ದರು. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರಿಗೂ ರಾಜ್​ಕುಮಾರ್​ಗೂ ಒಳ್ಳೆಯ ಒಡನಾಟ ಇತ್ತು. ದರ್ಶನ್ ಇದೇ ಗೌರವವನ್ನು ಮುಂದುವರಿಸಿಕೊಂಡು ಬಂದಿದ್ದರು.

ಇದನ್ನೂ ಓದಿ
ಅಂಬಿ ಬೈಕ್ ಮೇಲೆ ಸುದೀಪ್; ಅಪರೂಪದ ಫೋಟೋ ಇಲ್ಲಿದೆ
ಮುಚ್ಚುಮರೆ ಇಲ್ಲ; ಒಂದೇ ಕಾರಲ್ಲಿ ರಶ್ಮಿಕಾ-ವಿಜಯ್ ಜಾಲಿ ರೈಡ್
ಕೇವಲ 25 ಲಕ್ಷ ರೂ. ಗಳಿಸಿದ ‘ಥಗ್ ಲೈಫ್; ಕರ್ನಾಟಕದಲ್ಲಿ ರಿಲೀಸ್ ಆದರೆ ನಷ್ಟ
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

ದರ್ಶನ್ ಅವರು ‘ಹೊಸ ಬೆಳಕು’ ಚಿತ್ರದ ಟೈಟಲ್ ಹಾಡನ್ನು ಶಿವಣ್ಣ ಜೊತೆಗೂಡಿ ಹಾಡಿದ್ದರು. ಈ ಮೊದಲು ನಡೆದ ರಾಜ್​ ಕಪ್​ನಲ್ಲಿ ದರ್ಶನ್, ಶಿವಣ್ಣ ಮೊದಲಾದವರು ಒಟ್ಟಾಗಿ ಆಡುತ್ತಿದ್ದರು. ಆ ಸಂದರ್ಭದಲ್ಲಿ ದರ್ಶನ್ ಹಾಗೂ ಶಿವಣ್ಣ ಒಟ್ಟಿಗೆ ಕುಳಿತು ಈ ಹಾಡನ್ನು ಹಾಡಿದ್ದರು.

‘ಒನ್ ಟೂ ಥ್ರಿ.. ಹೊಸ ಬೆಳಕು ಮೂಡುತಿದೆ..’ ಎಂದು ಹಾಡಿದ್ದೂ ಅಲ್ಲದೆ, ಅದಕ್ಕೆ ಮ್ಯೂಸಿಕ್ ಬೇರೆ ನೀಡಿದ್ದರು. ಈ ವಿಡಿಯೋನ ಈಗ ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಬಳಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಆರ್​ಸಿಬಿ ಕಪ್ ಗೆದ್ದಿತ್ತು. ಈ ವೇಳೆ, ಕೊಹ್ಲಿ, ಎಬಿಡಿ ಹಾಗೂ ಕ್ರಿಸ್ ಗೇಲ್ ಒಟ್ಟಾಗಿ ಮಾತನಾಡಿದ್ದರು. ಈ ಮೂವರು ಈ ಹಾಡನ್ನು ಹಾಡಿದಂತೆಲ್ಲ ವಿಡಿಯೋನ ಎಡಿಟ್ ಮಾಡಲಾಗಿದೆ.

ಇದನ್ನೂ ಓದಿ: ‘ಶಿವಣ್ಣ-ದರ್ಶನ್​ ಸರ್​ಗೆ ಕ್ಷಮೆ ಕೇಳು’; ಸಾರಿ ಕೇಳಿದ ಮಡೆನೂರು ಮನುಗೆ ಧ್ರುವ ಸರ್ಜ ಕಿವಿಮಾತು  

ದರ್ಶನ್ ಅವರು ಸದ್ಯ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ಕೇರಳದ ಕಣ್ಣೂರಿನಲ್ಲಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ಸಿನಿಮಾ ಯಾವಗ ರಿಲೀಸ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.