AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮದ ಹಾದಿಯಲ್ಲಿ ‘ಕೆಟಿಎಂ’ ಸವಾರಿ: ಪ್ರಯಾಣಕ್ಕೆ ತಯಾರಾಗಿ

KTM: ‘ದಿಯಾ’ ಸಿನಿಮಾ ಮೂಲಕ ಭರವಸೆ ಮೂಡಿಸಿ, ಈಗ ಪರಭಾಷೆಗಳಲ್ಲಿಯೂ ನಟಿಸಿ ಜನಪ್ರಿಯತೆ ಗಳಿಸಿರುವ ದೀಕ್ಷಿತ್ ಶೆಟ್ಟಿ ನಟಿಸಿರುವ ಕನ್ನಡ ಸಿನಿಮಾ ‘ಕೆಟಿಎಂ’ ಫೆಬ್ರವರಿ 16ಕ್ಕೆ ಬಿಡುಗಡೆ ಆಗುತ್ತಿದೆ.

ಪ್ರೇಮದ ಹಾದಿಯಲ್ಲಿ ‘ಕೆಟಿಎಂ’ ಸವಾರಿ: ಪ್ರಯಾಣಕ್ಕೆ ತಯಾರಾಗಿ
ಮಂಜುನಾಥ ಸಿ.
|

Updated on: Feb 15, 2024 | 10:50 PM

Share

ದಿಯಾ’ (Dia) ಸಿನಿಮಾ ಮೂಲಕ ಜನಪ್ರಿಯತೆ ಪಡೆದ ದೀಕ್ಷಿತ್ ಶೆಟ್ಟಿ ಈಗ ಪರಭಾಷೆಗಳಲ್ಲಿಯೂ ಜನಪ್ರಿಯರಾಗಿದ್ದಾರೆ. ಪರಭಾಷೆಯ ಸಿನಿಮಾಗಳ ಜೊತೆಗೆ ಕನ್ನಡ ಸಿನಿಮಾಗಳಲ್ಲಿಯೂ ನಟಿಸುತ್ತಲೇ ಇದ್ದಾರೆ. ಇದೀಗ ಅವರು ‘ಕೆಟಿಎಂ’ ಕನ್ನಡ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ‘ದಿಯಾ’ ಸಿನಿಮಾಕ್ಕಿಂತಲೂ ಭಿನ್ನವಾದ ಕತೆಯನ್ನು ‘ಕೆಟಿಎಂ’ ಹೊಂದಿದ್ದು, ಬಹಳಷ್ಟು ಕಷ್ಟಪಟ್ಟು ಈ ಸಿನಿಮಾ ನಿರ್ಮಿಸಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀಕ್ಷಿತ್ ಶೆಟ್ಟಿ, ‘ಸಿನಿಮಾದ 3 ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಟ್ರೇಲರ್ ಗೂ ಸಹ ಒಂದು ಋಣಾತ್ಮಕ ಕಮೆಂಟ್ ಕೂಡ ಬಂದಿಲ್ಲ. ಎಲ್ಲರೂ ಬಹಳ ಇಷ್ಟಪಟ್ಟಿದ್ದಾರೆ. ‘ದಿಯಾ’, ‘ದಸರಾ’ ಹೀಗೆ ಪ್ರತಿ ಸಿನಿಮಾದಲ್ಲಿ ರಂಜಿಸಿಕೊಂಡು ಬರುತ್ತಿದ್ದೇನೆ. ಈ ಸಿನಿಮಾಗೆ ಜೀವ ಕೊಟ್ಟು ಕೆಲಸ ಮಾಡಿದ್ದೇನೆ. ಬೆವರಿನ ಜೊತೆಗೆ ರಕ್ತನೂ ಸುರಿಸಿದ್ದೇನೆ. ತುಂಬಾ ಪ್ರಾಮಾಣಿಕವಾದ ಪ್ರಯತ್ನ. ಟ್ರೇಲರ್ ಮೂಲಕ ಭರವಸೆ ಮೂಡಿಸಿದ್ದೇವೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾದರೂ ಸಿನಿಮಾ ಬಂದು ನೋಡಿ, ನಿಮಗೆ ನಿರಾಸೆಯಾಗುವುದಿಲ್ಲ. ಥಿಯೇಟರ್ ನಲ್ಲಿ ನೋಡುವ ಯೋಗ್ಯತೆ ನನಗೆ ಇದೆ ಎನಿಸಿದರೆ ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ಮನವಿ ಮಾಡಿದರು.

ಇದನ್ನೂ ಓದಿ:‘ಕೆಟಿಎಂ’ ಚಿತ್ರಕ್ಕೆ ಸಿಕ್ತು ರಿಷಬ್, ರಶ್ಮಿಕಾ ಬೆಂಬಲ; ಮತ್ತೊಂದು ಭಗ್ನ ಪ್ರೇಮ ಕಥೆ?

ನಟಿ ಸಂಜನಾ ದಾಸ್ ಮಾತನಾಡಿ, ‘ನನ್ನ ಮೊದಲ ಕಮರ್ಷಿಯಲ್ ಸಿನಿಮಾ ಕೆಟಿಎಂ. ದೀಕ್ಷಿತ್ ಶೆಟ್ಟಿ ಅವರ ಜೊತೆ ಮಾಡಬೇಕು ಎಂದಾಗ ನಾನು ಅವರಿಗೆ ಮ್ಯಾಚ್ ಆಗುತ್ತೇನೆಯೇ ಎಂಬ ಅನುಮಾನವಿತ್ತು. ರೋಮ್ಯಾಂಟಿಕ್ ಸೀನ್ಸ್ ಮಾಡಬೇಕಿತ್ತು. ಹೇಗೆ ಮಾಡಬಹುದು ಎಂಬ ಭಯ ಇತ್ತು. ನಿರ್ದೇಶಕರಾದ ಅರುಣ್ ಸರ್ ರಿಹರ್ಸಲ್ ಮಾಡಿಸಿದ ಮೇಲೆ ಧೈರ್ಯ ಬಂತು. ನನ್ನದು ವಿಭಿನ್ನವಾದ ಪಾತ್ರ. ಟ್ರೇಲರ್ ನೋಡಿದರೆ ಅಷ್ಟು ಗೊತ್ತಾಗುವುದಿಲ್ಲ. ಸಿನಿಮಾ ನೋಡಿದರೆ ಗೊತ್ತಾಗುತ್ತದೆ ನನ್ನ ಪಾತ್ರ ಏನೂ ಅನ್ನೋದು. ಈ ಪಾತ್ರಕ್ಕೆ ತುಂಬಾ ಶೇಡ್ಸ್ ಇದೆ’ ಎಂದು ತಿಳಿಸಿದರು.

ಮತ್ತೊಬ್ಬ ನಾಯಕಿ ಕಾಜಲ್ ಕುಂದರ್ ಮಾತನಾಡಿ, ‘ನನ್ನದು ಸರಳವಾದ ಕಾಲೇಜು ಹುಡುಗಿಯ ಪಾತ್ರ. ಅವಳಿಗೆ ಜೀವನದಲ್ಲಿ ಏನು ಆಗಬೇಕು ಎಂಬ ಗುರಿ ಇರುತ್ತದೆ. ಆ ಗುರಿ ಮುಟ್ಟಲು ಆಕೆ ಶ್ರಮಿಸುತ್ತಿರುತ್ತಾಳೆ. ದೀಕ್ಷಿತ್ ಅವರ ಲೈಫ್ ನಲ್ಲಿ ನನ್ನ ಪಾತ್ರ ಬಂದಾಗ ಏನು ಬದಲಾಗುತ್ತದೆ. ಇದೆಲ್ಲವನ್ನೂ ಸಿನಿಮಾದಲ್ಲಿ ನೋಡಬಹುದು. ‘ಕೆಟಿಎಂ’ ಒಂದು ಬ್ಯೂಟಿಫುಲ್ ಲವ್ ಸ್ಟೋರಿ. ಪ್ರೀತಿ ಅನ್ನೋದು ಬರೀ ಹುಡುಗ ಹುಡುಗಿ ನಡುವೆ ನಡೆಯುವುದಲ್ಲ. ತಂದೆ ತಾಯಿ ನಡುವೆಯೂ ಆಗುತ್ತದೆ. ಈ ರೀತಿಯ ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಫೆ.16ಕ್ಕೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದರು.

ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ‘ಇದು ನನ್ನ ಎರಡನೇ ಸಿನಿಮಾ. ಒಂದೊಳ್ಳೆ ಕಥೆಗೆ ಒಂದೊಳ್ಳೆ ನಾಯಕ ಬೇಕು. ನಾವು ಏನೂ ಕನಸು ಕಂಡಿದ್ದೇವೋ ಅದಕ್ಕಿಂತ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ. ಕಾರಣ ಅದಕ್ಕೆ ದೀಕ್ಷಿತ್. ಪಾತ್ರಗಳನ್ನು ಬರೆಯುವುದು ಸುಲಭ. ಆದರೆ ತೆರೆಮೇಲೆ ತರಬೇಕು ಎಂದರೆ ಅದಕ್ಕೆ ಡಿಡಿಕೇಷನ್ ಬೇಕು. ತಾರಾಬಳಗ ಹಾಗೂ ತಾಂತ್ರಿಕ ಬಳಗ ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ಎಲ್ಲಾ ಬೆಂಬಲದಿಂದ ಕೆಟಿಎಂ ಸಿನಿಮಾವಾಗಿದೆ. ಒಂದೊಳ್ಳೆ ಚಿತ್ರ ಮಾಡಿದ್ದೇವೆ. ಇದು ನೋಡುವ ಸಿನಿಮಾವಲ್ಲ. ಕಾಡುವ ಸಿನಿಮಾ ಎಂದರು. ಸಿನಿಮಾ ಫೆಬ್ರವರಿ 16ಕ್ಕೆ ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ