
‘ಡೆವಿಲ್’ ಸಿನಿಮಾವು ಡಿಸೆಂಬರ್ 11ರಂದು ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಂದುಕೊಂಡ ಮಟ್ಟಿಗೆ ಸಿನಿಮಾ ಗಳಿಕೆ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಹೀಗಿರುವಾಗಲೇ ಈ ಸಿನಿಮಾ ನಿರ್ಮಾಣ ಮಾಡಿದ ಸಂಸ್ಥೆ ಕಡೆಯಿಂದ ಒಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಒಂದಲ್ಲ, ಎರಡಲ್ಲ, ಡೆವಿಲ್ ಸಿನಿಮಾದ 10 ಸಾವಿರ ಪೈರಸಿ ಲಿಂಕ್ನ ಡಿಲೀಟ್ ಮಾಡಲಾಗಿದೆಯಂತೆ.
ಕನ್ನಡ ಸಿನಿಮಾಗಳು ಓಡುತ್ತಿಲ್ಲ ಎಂಬ ಮಾತು ಆಗಾಗ ಹೇಳುವುದನ್ನು ಕೇಳಿರಬಹುದು. ಈ ಮಧ್ಯೆ ಸಿನಿಮಾಗಳಿಗೆ ಪೈರಸಿ ಮಾರಕವಾಗುತ್ತಾ ಇದೆ. ಥಿಯೇಟರ್‌ನಲ್ಲಿ ಜನರು ಸಿನಿಮಾ ನೋಡಲಿ ಎಂದು ಮಾಡಲಾಗುತ್ತದೆ. ಆದರೆ, ಕೆಲವರು ಪೈರಸಿ ಮಾಡುತ್ತಾರೆ. ಸಿನಿಮಾ ಥಿಯೇಟರ್‌ನಲ್ಲಿ ಇರುವಾಗಲೇ ಚಿತ್ರವನ್ನು ರೆಕಾರ್ಡ್ ಮಾಡಿ ಹರಿಬಿಡುತ್ತಾರೆ. ‘ಡೆವಿಲ್’ಗೂ ಪೈರಸಿ ಕಾಟ ತಾಗಿದೆ.
‘ಡೆವಿಲ್’ ಸಿನಿಮಾ ರಿಲೀಸ್ ಆದ ಮರುದಿನವೇ ಎಚ್ಡಿ ಪ್ರಿಂಟ್ ಲೀಕ್ ಆಗಿದೆ. ಇದು ತಂಡಕ್ಕೆ ಚಿಂತೆ ಉಂಟು ಮಾಡಿದೆ. ಆ ಬಳಿಕ ನಿರಂತರವಾಗಿ ಪೈರಸಿ ಲಿಂಕ್ನ ತೆಗೆಸೋ ಕೆಲಸ ಆಗಿದೆ. ಡೆವಿಲ್ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಪೋಸ್ಟ್ ಹಾಕಲಾಗಿದೆ.
ಇದನ್ನೂ ಓದಿ: ಭಾನುವಾರ ಕೋಟಿಯಲ್ಲಿ ವ್ಯವಹಾರ ಮಾಡಿದ ‘ಡೆವಿಲ್’; ಒಟ್ಟಾರೆ ಕಲೆಕ್ಷನ್ ಎಷ್ಟು?
‘ಪೈರಸಿ ಅನ್ನೋದು ವೈರಸ್. ಇದು ಸಿನಿಮಾನ ಕೊಲ್ಲುತ್ತದೆ. ನಾವು ಇನ್ನೂ ಯುದ್ಧ ಮಾಡುತ್ತಲೇ ಇದ್ದೇವೆ. ಈವರೆಗೂ 10500ಕ್ಕೂ ಹೆಚ್ಚು ಪೈರಸಿ ಲಿಂಕ್ ಗಳನ್ನ ಡಿಲಿಟ್ ಮಾಡುವ ಕೆಲಸ ಆಗಿದೆ. ದಯವಿಟ್ಟು ಪೈರಸಿ ಮಾಡಬೇಡಿ. ಸಿನಿಮಾ ಥಿಯೇಟರ್ ನಲ್ಲಿ ನೋಡಿ’ ಎಂದು ತಂಡ ಮನವಿ ಮಾಡಿದೆ. ಸಿನಿಮಾ ಒಂದಕ್ಕೆ ಇಷ್ಟು ಪೈರಸಿ ಲಿಂಕ್ ಸೃಷ್ಟಿ ಆಗಿರೋದು ವಿಶ್ವ ಮಟ್ಟದಲ್ಲಿ ಇದೇ ಮೊದಲು ಎಂದು ತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.