ನಟ ಧನಂಜಯ ಅವರಿಗೆ ಇಂದು (ಆಗಸ್ಟ್ 23) ಜನ್ಮದಿನದ ಸಂಭ್ರಮ. ‘ಟಗರು’ ತೆರೆಕಂಡ ನಂತರದಲ್ಲಿ ಡಾಲಿ ಎಂದೇ ಖ್ಯಾತಿ ಪಡೆದ ಧನಂಜಯ ಅವರು ಕನ್ನಡದ ಬಹುಬೇಡಿಕೆಯ ಕಲಾವಿದ. ಪ್ರತಿ ಸಿನಿಮಾಗೂ ಬೇರೆಬೇರೆ ರೀತಿಯ ಪಾತ್ರ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನಂಜಯ ಹತ್ತಿವಾಗಿದ್ದಾರೆ. ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬರುತ್ತಿವೆ.
ನೆಚ್ಚಿನ ನಟನ ಜನ್ಮದಿನ ಬಂದರೆ ಅಭಿಮಾನಿಗಳು ಅವರ ಮನೆ ಎದುರು ಹಾಜರಿ ಹಾಕುತ್ತಾರೆ. ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ ಕಳೆದ ವರ್ಷದಿಂದ ಇದು ಸಾಧ್ಯವಾಗುತ್ತಿಲ್ಲ. ಕೊರೊನಾ ವೈರಸ್ ಕಾಡುತ್ತಿದೆ. ಈ ಆತಂಕದ ಹಿನ್ನೆಲೆಯಲ್ಲಿ ಸ್ಟಾರ್ ನಟರು ತಮ್ಮ ಜನ್ಮದಿನ ಆಚರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಧನಂಜಯ ಕೂಡ ಈ ಬಾರಿ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ. ಇದರ ಹಿಂದೆ ಒಂದು ಸಾಮಾಜಿಕ ಹಿತಾಸಕ್ತಿ ಕೂಡ ಇದೆ.
ಧನಂಜಯ ಕನ್ನಡ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಶೂಟಿಂಗ್ ಒಂದಕ್ಕಾಗಿ ಅವರು ಚೆನ್ನೈಗೆ ತೆರಳಿದ್ದಾರೆ. ಇಂದು ಅವರು ಅಲ್ಲಿಯೇ ಇರಲಿದ್ದಾರೆ. ಹೀಗಾಗಿ, ಅಭಿಮಾನಿಗಳನ್ನು ಭೇಟಿ ಮಾಡದೆ ಇರಲು ಇದು ಕೂಡ ಕಾರಣ. ಇತ್ತೀಚೆಗೆ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೆ, ಮುಂದಿನ ವರ್ಷ ಎಲ್ಲವೂ ಸರಿಯಾದರೆ ಅಭಿಮಾನಿಗಳ ಜತೆ ಬರ್ತ್ಡೇ ಆಚರಿಸಿಕೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.
ಸ್ಟಾರ್ ನಟರ ಜನ್ಮದಿನ ಇದ್ದಾಗ ಸಿನಿಮಾ ತಂಡದಿಂದ ಪೋಸ್ಟರ್ ಟ್ರೇಲರ್ ರಿಲೀಸ್ ಆಗುತ್ತವೆ. ಧನಂಜಯ್ ಜನ್ಮದಿನಕ್ಕೂ ಮೊದಲೇ ಚಿತ್ರತಂಡಗಳು ಈ ಕೆಲಸದಲ್ಲಿ ತೊಡಗಿಕೊಂಡಿವೆ. ಇತ್ತೀಚೆಗೆ ‘ರತ್ನನ್ ಪ್ರಪಂಚ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಇಂದು ಕೂಡ ಅವರ ನಟನೆಯ ವಿವಿಧ ಸಿನಿಮಾಗಳ ಟೀಸರ್, ಟ್ರೇಲರ್ ಹಾಗೂ ಪೋಸ್ಟರ್ ರಿಲೀಸ್ ಆಗುವ ನಿರೀಕ್ಷೆ ಇದೆ. ಇನ್ನು, ಸಾಕಷ್ಟು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಧನಂಜಯಗೆ ಶುಭಾಶಯ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: DDhananjay: ಧನಂಜಯ್ ಬತ್ತಳಿಕೆ ಸೇರಿತು ಹೊಸ ಸಿನಿಮಾ; ಕುತೂಹಲ ಮೂಡಿಸುವ ಪೋಸ್ಟರ್ ಇಲ್ಲಿದೆ
Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್ ತೋರಿಸಿದ ಧನಂಜಯ್
Published On - 7:29 am, Mon, 23 August 21