ರೌಡಿಯಾದ ‘ಕ್ಯಾಡ್ಬರೀಸ್’, ‘ತಲ್ವಾರ್’ ಹಿಡಿದ ಧರ್ಮ ಕೀರ್ತಿರಾಜ್

|

Updated on: Aug 20, 2023 | 11:32 PM

Dharma Keerthiraj: ಕ್ಯೂಟ್ ಚಾಕಲೇಟ್ ಬಾಯ್ ಆಗಿದ್ದ, ಕ್ಯಾಡ್ಬರೀಸ್ ಎಂದು ಹುಡುಗಿಯರಿಂದ ಕರೆಸಿಕೊಳ್ಳುತ್ತಿದ್ದ ನಟ ಧರ್ಮ ಕೀರ್ತಿರಾಜ್ ಮಾಸ್ ಅವತಾರ ತಾಳಿದ್ದಾರೆ.

ರೌಡಿಯಾದ ಕ್ಯಾಡ್ಬರೀಸ್, ತಲ್ವಾರ್ ಹಿಡಿದ ಧರ್ಮ ಕೀರ್ತಿರಾಜ್
ಧರ್ಮ ಕೀರ್ತಿರಾಜ್
Follow us on

ಚಾಕಲೇಟ್ ಬಾಯ್ ಆಗಿದ್ದ, ಹುಡುಗಿಯರ ಕೈಲಿ ‘ಕ್ಯಾಡ್ಬರೀಸ್’ ಅನಿಸಿಕೊಳ್ಳುತ್ತಿದ್ದ ನಟ ಧರ್ಮ ಕೀರ್ತಿರಾಜ್ (Dharma Keerthiraj) ಈಗ ಒಮ್ಮೆಲೆ ಖಡಕ್ ಅವತಾರ ಎತ್ತಿದ್ದಾರೆ. ‘ತಲ್ವಾರ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರುವ ಧರ್ಮ, ಕೈಯಲ್ಲಿ ಕತ್ತಿ ಹಿಡಿದು ಖಡಕ್ ಆಗಿ ಫೋಸು ಕೊಟ್ಟಿದ್ದಾರೆ. ಸಿನಿಮಾ ಇತ್ತೀಚೆಗೆ ಸಿಬಿಎಫ್​ಸಿ ಮುಂದೆ ಹೋಗಿದ್ದು, ಯಾವುದೇ ಕಟ್-ಮ್ಯೂಟ್ ಇಲ್ಲದೆ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.

‘ತಲ್ವಾರ್’ ವಿಭಿನ್ನವಾದ ರೌಡಿಸಂ ಕಥಾಹಂದರ ಇರುವ ಸಿನಿಮಾ. ಇಷ್ಟು ದಿನ ಚಾಕಲೇಟ್ ಬಾಯ್ ಆಗಿದ್ದ ನಟ ಧರ್ಮ ಕೀರ್ತಿರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ತಮಗೆ ಹೊಸದೊಂದು ಇಮೇಜ್ ನೀಡಲಿದೆ ಎಂಬ ಉಮೇದಿನಲ್ಲಿದ್ದಾರೆ ಧರ್ಮ. ಈ ಹಿಂದೆ ಮುಮ್ತಾಜ್ ಚಿತ್ರ ನಿರ್ದೇಶಿಸಿದ್ದ ರಾಘವ ಮುರಳಿ, ಇದೀಗ ತಲ್ವಾರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಖ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಧರ್ಮ ಕೀರ್ತಿರಾಜ್ ಜೊತೆಗೆ ಅವರ ಎರಡನೇ ಸಿನಿಮಾ ಇದು.

ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (JK) ಕಾಣಿಸಿಕೊಂಡಿದ್ದಾರೆ. ಜೆಕೆ ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿದ್ದು, ಅವರ ಪಾತ್ರ ಬಹಳ ವಿಶೇಷವಾಗಿರಲಿದೆಯಂತೆ.

ಇದನ್ನೂ ಓದಿ:‘ಗೌರವ ಇಲ್ಲದ ಕಡೆ ಇರಲ್ಲ, ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡ್ತಾ ಇದೀನಿ’; ಗಟ್ಟಿ ನಿರ್ಧಾರ ಮಾಡಿದ ಜೆಕೆ

ಈ ಚಿತ್ರ ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ಸುರ್ನಳ್ಳಿ ಜಯರಾಮ್ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬೈರಸಂದ್ರ ಬಂಡವಾಳ ಹಾಕಿದ್ದಾರೆ, ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರಕ್ಕೆ ಸಹ ನಿರ್ಮಾಪಕರಗಿದ್ದ ಇವರು ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಇವರು ಅನುಭವ ಇರುವ ಛಾಯಾಗ್ರಾಹಕರು ಆಗಿರುವುದರಿಂದ ಈ ಚಿತ್ರಕ್ಕೆ ತಾವೇ ಕ್ಯಾಮರಮಾನ್ ಆಗಿ ತಮ್ಮ ಕೈ ಚಳಕ ತೋರಿಸಿರುವುದು ಮತ್ತೊಂದು ವಿಶೇಷ.

‘ಗುಲಾಬಿ ಹಿಡಿದು ಪ್ರೀತಿ ಮಾಡಿದರೆ ಹೆಚ್ಚೆಂದರೆ ಪ್ರೀತಿಸಿದ ಎರಡು ಜೀವಗಳು ನೋವು ಪಡಬಹುದು, ಆದರೆ ಲಾಂಗ್ ಹಿಡಿದುಕೊಂಡು ರೌಡಿಸಂ ನೆಚ್ಚಿಕೊಂಡು ಜೀವನ ಮಾಡಿದರೆ ಸಾಕಷ್ಟು ಕುಟುಂಬಗಳು ಹಾಳಾಗುತ್ತವೆ ಎಂಬ ಸಂದೇಶವನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ‘ತಲ್ವಾರ್’ ರಕ್ತ ಹರಿಸುವ ರೌಡಿಸಂ ಚಿತ್ರವಾಗಿದ್ದರೂ, ಅಲ್ಲಲ್ಲಿ, ಎಮೋಷನಲ್ ಟಚ್ ಇದೆ ಎಂಬುದು ಚಿತ್ರ ತಂಡದ ಮಾತು. ಸಿಬಿಎಫ್​ಸಿಯಿಂದ ಯು/ಎ ಪ್ರಮಾಣ ಪತ್ರ ಪಡೆದಿರುವ ಈ ಸಿನಿಮಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಸರ್ ರಿಲೀಸ್ ಬಿಡುಗಡೆ ಮಾಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ