ಹುಟ್ಟುಹಬ್ಬದ ದಿನವೇ ಧೀರೇನ್​ ರಾಮ್​ಕುಮಾರ್​ ಹೆಸರು ಬದಲು; ಹೊಸ ಹೆಸರು ಏನು?

|

Updated on: Apr 29, 2024 | 7:16 PM

‘ತಾತನ ಹೆಸರು ಇಟ್ಟುಕೊಳ್ಳಬೇಕು ಎಂಬ ಆಲೋಚನೆ ನನಗೆ ಮೊದಲೇ ಇತ್ತು. ನಮ್ಮ ತಾತನ ಹೆಸರನ್ನು ನಾನು ಇಟ್ಟುಕೊಂಡಿದ್ದೇನೆ. ಬೇರೆಯವರ ಹೆಸರು ಇಟ್ಟುಕೊಂಡಿಲ್ಲ’ ಎಂದು ಧೀರೇನ್​ ಆರ್​. ರಾಜ್​ಕುಮಾರ್​ ಹೇಳಿದ್ದಾರೆ. ಕೊರಗಜ್ಜನ ದೇವಸ್ಥಾನಕ್ಕೆ ಹೋದಾಗಲೂ ಅವರಿಗೆ ಹೆಸರು ಬದಲಾವಣೆ ಬಗ್ಗೆ ಸಲಹೆ ಸಿಕ್ಕಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ದಿನವೇ ಧೀರೇನ್​ ರಾಮ್​ಕುಮಾರ್​ ಹೆಸರು ಬದಲು; ಹೊಸ ಹೆಸರು ಏನು?
ಕಾರ್ತಿಕ್​ ಗೌಡ, ಧೀರೇನ್​, ಯೋಗಿ ಜಿ. ರಾಜ್​
Follow us on

ಚಿತ್ರರಂಗಕ್ಕೆ ಕಾಲಿಡುವಾಗ ಕೆಲವರು ಹೆಸರು ಬದಲಾವಣೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ನಂತರದಲ್ಲಿ ಹೆಸರು ಬದಲಾವಣೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗ ನಟ ಧೀರೇನ್​ ರಾಮ್​ಕುಮಾರ್​ (Dheeren Ramkumar) ಕೂಡ ಅಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು (ಏಪ್ರಿಲ್​ 29) ಅವರ ಜನ್ಮದಿನ. ಈ ವಿಶೇಷ ದಿನದಂದೇ ಅವರು ಹೊಸ ಸುದ್ದಿ ನೀಡಿದ್ದಾರೆ. ಅವರ ಹೆಸರು ಬದಲಾಗಿದೆ. ಧೀರೇನ್ ರಾಮ್ ಕುಮಾರ್ ಅವರ ಹೆಸರು ಧೀರೇನ್ ಆರ್. ರಾಜ್​ಕುಮಾರ್ (Dheeren R. Rajkumar) ಆಗಿ ಬದಲಾಗಿದೆ. ಡಾ. ರಾಜ್​ಕುಮಾರ್​ (Dr Rajkumar) ಕುಟುಂಬದ ಕುಡಿ ಆಗಿರುವ ಅವರು ತಾತನ ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿದ್ದಾರೆ.

ಎರಡು ಸಿನಿಮಾಗಳಲ್ಲಿ ಧೀರೇನ್​ ಆರ್​. ರಾಜ್​ಕುಮಾರ್​ ಅವರು ಬ್ಯುಸಿ ಆಗಿದ್ದಾರೆ. ‘ಕೊರಗಜ್ಜನ ದೇವಸ್ಥಾನಕ್ಕೆ ಹೋದಾಗ ತಾತನ ಹೆಸರು ಇಟ್ಟುಕೊಳ್ಳಿ ಎಂದು ಅರ್ಚಕರು ಸಲಹೆ ನೀಡಿದ್ದರು. ನನಗೂ ಸರಿ ಎನಿಸಿತು. ಅದಕ್ಕೆ ಒಂದು ಸಂದರ್ಭ ಬೇಕಿತ್ತು. ಈ ಸಿನಿಮಾ ಮೂಲಕ ಹೆಸರು ಬದಲಾಯಿಸಿಕೊಂಡಿದ್ದೇನೆ. ತಾತನ ಹೆಸರಿನ ಜೊತೆ ಮುಂದುವರಿಯುತ್ತೇನೆ. ಈ ಹೆಸರಿನಲ್ಲಿ ತೂಕ ಇದೆ, ಏಳಿಗೆ ಇದೆ. ಇದರಿಂದ ಪಾಸಿಟಿವ್​ ಆಗಿ ಒಂದು ಹೊಸ ಅಧ್ಯಾಯ ಆರಂಭ ಆಗಿದೆ’ ಎಂದು ಧೀರೇನ್​ ಅವರು ಹೇಳಿದ್ದಾರೆ.

‘ಕೆಆರ್​ಜಿ ಸ್ಟೂಡಿಯೋಸ್’ ಸಂಸ್ಥೆಯು ಧೀರೇನ್​ ಅವರು ಹೊಸ ಹೆಸರಿನ ಮೂಲಕ ಮರುಪರಿಚಯಿಸುತ್ತಿದೆ. ಧೀರೇನ್ ಆರ್​. ರಾಜ್​ಕುಮಾರ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ಹೊಸ ಸಿನಿಮಾವನ್ನು ಕೂಡ ‘ಕೆಆರ್​ಜಿ ಸ್ಟುಡಿಯೋಸ್​’ ಘೋಷಿಸಿದೆ. ಈ ಸಿನಿಮಾದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹೊರಬರಲಿದೆ. ಅದಕ್ಕಾಗಿ ಧೀರೇನ್​ ಅವರ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ಡಾ. ರಾಜ್​ಕುಮಾರ್​ ಹೇಳಿಕೊಟ್ಟ ಪಾಠ ಕಲಿಯಲೇ ಇಲ್ವಾ ಸ್ಯಾಂಡಲ್​ವುಡ್​ ನಟರು?

ಸ್ಯಾಂಡಲ್​ವುಡ್​ನಲ್ಲಿ ಹೊಸ ಪ್ರತಿಭೆಗಳಿಗೆ ‘ಕೆಆರ್​ಜಿ ಸ್ಟುಡಿಯೋಸ್​’ ಸಂಸ್ಥೆಯು ಅವಕಾಶ ನೀಡುವ ಉದ್ದೇಶ ಹೊಂದಿದೆ. ಅದಕ್ಕೆ ಒಂದಷ್ಟು ಉದಾಹರಣೆಗಳು ಕೂಡ ಸಿಗುತ್ತವೆ. ಇದೀಗ ಈ ನಿಟ್ಟಿನಲ್ಲಿ ಇನ್ನಷ್ಟು ಹೊಸ ಹೆಜ್ಜೆಗಳನ್ನು ಇಡುತ್ತಿದೆ. ಧೀರೇನ್ ಆರ್​. ರಾಜ್​ಕುಮಾರ್​ ಅವರ ಜೊತೆಗೆ ‘ಕೆಆರ್​ಜಿ ಸ್ಟುಡಿಯೋಸ್​’ ಮಾಡಲಿರುವ ಹೊಸ ಸಿನಿಮಾ ಬಗ್ಗೆ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.