AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಿ’; ವಿನಯ್ ಗೌಡ ವಿಶೇಷ ಮನವಿ

ವಿನಯ್ ಗೌಡ ಅವರು ಈಗ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಎರಡು ಸಿನಿಮಾಗಳು ಕನ್ನಡದ್ದು. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಇವುಗಳಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಎರಡೂ ಸಿನಿಮಾಗಳಲ್ಲಿ ಕನ್ನಡದ ಬಿಗ್ ಸ್ಟಾರ್ಸ್ ನಟಿಸುತ್ತಿದ್ದಾರೆ.

‘ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಿ’; ವಿನಯ್ ಗೌಡ ವಿಶೇಷ ಮನವಿ
ವಿನಯ್
ರಾಜೇಶ್ ದುಗ್ಗುಮನೆ
|

Updated on:May 01, 2024 | 9:45 AM

Share

ಸ್ಯಾಂಡಲ್​ವುಡ್​ನ ಅನೇಕ ಕಲಾವಿದರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ಪರಭಾಷಾ ಕಲಾವಿದರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆಯುತ್ತಿದ್ದಾರೆ. ಕನ್ನಡದ ಕಲಾವಿದರಿಗೆ ಮೊದಲು ಅವಕಾಶ ಸಿಗುವಂತಾಗಬೇಕು ಎಂಬುದು ಹಲವರ ಕೋರಿಕೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಮೂಲಕ ಫೇಮಸ್ ಆದ ವಿನಯ್ ಗೌಡ ಅವರದ್ದೂ ಇದೇ ಬೇಡಿಕೆ ಇದೆ. ಕನ್ನಡದಲ್ಲಿ ಸಾಕಷ್ಟು ಖಡಕ್ ವಿಲನ್​ಗಳಿದ್ದಾರೆ. ಅವರಿಗೆ ಅವಕಾಶ ಸಿಗಬೇಕು ಎಂದು ವಿನಯ್ ಕೋರಿದ್ದಾರೆ.

ವಿನಯ್ ಗೌಡ ಅವರು ಈಗ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಎರಡು ಸಿನಿಮಾಗಳು ಕನ್ನಡದ್ದು. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಇವುಗಳಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಎರಡೂ ಸಿನಿಮಾಗಳಲ್ಲಿ ಕನ್ನಡದ ಬಿಗ್ ಸ್ಟಾರ್ಸ್ ನಟಿಸುತ್ತಿದ್ದಾರೆ. ಅವರ ಎದುರು ವಿಲನ್ ಆಗಿ ವಿನಯ್ ಮಿಂಚಲಿದ್ದಾರೆ. ಈ ಮಧ್ಯೆ ಅವರು ತಮ್ಮಲ್ಲಿರೋ ಬೇಸರ ತೋಡಿಕೊಂಡಿದ್ದಾರೆ.

‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿರೋ ಅವರು, ‘ಕನ್ನಡದಲ್ಲಿ ವಿಲನ್​ಗಳೇ ಕಡಿಮೆ. ಹೆಚ್ಚಿನ ವಿಲನ್​ಗಳನ್ನು ಪರಭಾಷೆಗಳಿಂದ ಕರೆದುಕೊಂಡು ಬರ್ತಾರೆ. ಕನ್ನಡ ಭಾಷೆ ತುಂಬಾನೇ ಸುಂದರವಾಗಿದೆ. ಪರಭಾಷೆಯಿಂದ ಜನರನ್ನು ಕರೆದುಕೊಂಡು ಬಂದು, ಲಿಪ್ ಸಿಂಕ್ ಆಗಿಲ್ಲ, ಹಾವ-ಭಾವ ಇಲ್ಲಿಗೆ ಮ್ಯಾಚ್ ಆಗಿಲ್ಲ ಅಂದ್ರೆ ಜನರಿಗೆ ಅರ್ಥ ಆಗಿ ಬಿಡುತ್ತದೆ. ಇತ್ತೀಚೆಗೆ ಕನ್ನಡದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಮಾತ್ರ ಯಶಸ್ಸು ಕಾಣುತ್ತಿವೆ. ದೊಡ್ಡ ಬಜೆಟ್​ ಸಿನಿಮಾಗಳಲ್ಲಿ ನಮ್ಮವರು ಇದ್ದರೆ ಮಾತ್ರ ಯಶಸ್ಸು ಕಾಣುತ್ತದೆ. ಕೆಜಿಎಫ್ ಇದಕ್ಕೆ ಉತ್ತಮ ಉದಾಹರಣೆ. ಅಲ್ಲಿ ಎಲ್ಲ ಸ್ಥಳೀಯ ಕಲಾವಿದರೇ ಇದ್ದರು. ಕಾಟೇರ ಹಳ್ಳಿ ಸೊಗಡಿನ ಸಿನಿಮಾ. ಅದು ಕೂಡ ಯಶಸ್ಸು ಕಂಡಿತು’ ಎಂದಿದ್ದಾರೆ ವಿನಯ್.

ಇದನ್ನೂ ಓದಿ: ಬ್ಯಾಕ್​ ಟು ಬ್ಯಾಕ್ ಮೂರು ಚಿತ್ರಕ್ಕೆ ವಿನಯ್ ಗೌಡ ಸಹಿ; ಸ್ಟಾರ್ ಹೀರೋಗೆ ಖಡಕ್ ವಿಲನ್

‘ಪಾತ್ರಕ್ಕೆ ಇದೇ ರೀತಿಯಲ್ಲಿ ಬೇಕು ಅಂದ್ರೆ ನಾವು ರೆಡಿ ಆಗ್ತೀವಿ. ಅವಕಾಶ ನೀಡೋಕೆ ಪ್ರೊಡಕ್ಷನ್ಸ್ ಹೌಸ್ ರೆಡಿ ಇರಬೇಕು. ನಾವು ಫ್ರೆಶರ್ಸ್​ ಅಲ್ಲ. ನಾವು ಹೇಗೆ ಬೇಕೋ ಹಾಗೆ ರೆಡಿ ಆಗ್ತೀವಿ. ಒಳ್ಳೆ ಬಾಡಿಗಳನ್ನು ಇಟ್ಟುಕೊಂಡು ವಿಲನ್ ಆಗಿ ನಟಿಸೋಕೆ ಸಾಕಷ್ಟು ಜನರಿದ್ದಾರೆ. ನಮ್ಮನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ತುಂಬಾ ಬೇಸರ ಇದೆ. ಕೆಲವೇ ಕೆಲವರು ಕನ್ನಡ ಆರ್ಟಿಸ್ಟ್​ ಬೆಳೆಯಲಿ ಎಂದು ನೋಡುತ್ತಿದ್ದಾರೆ. ಇನ್ನೂ ಕೆಲವರು ಆ ರೀತಿ ಆಲೋಚಿಸಲ್ಲ. ಅವಕಾಶ ಕೊಟ್ಟಾಗಲೇ ಅಲ್ಲವಾ ಯಾವ ರೀತಿಯಲ್ಲಿ ಆ್ಯಕ್ಟ್ ಮಾಡ್ತೀವಿ ಅನ್ನೋದು ಗೊತ್ತಾಗೋದು. ಆಡಿಷನ್ ಕರೆದು ನೋಡಿ. ಪ್ರೂವ್ ಮಾಡ್ತೀವಿ. ಒಂದೊಳ್ಳೆಯ ಪಾತ್ರ, ಚಾನ್ಸ್ ಸಿಗಬೇಕು’ ಎಂದಿದ್ದಾರೆ ವಿನಯ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:37 am, Tue, 30 April 24