ದುಬಾರಿ ನಿರೀಕ್ಷೆಯಲ್ಲಿದ್ದ ಧ್ರುವ ಸರ್ಜಾ ಅಭಿಮಾನಿಗಳಿಗೆ ಈ ಸುದ್ದಿ ಓದಿದ್ರೆ ಶ್ಯಾನೇ ಬೇಜಾರಾಗಬಹುದು!

|

Updated on: Apr 09, 2021 | 7:55 PM

ಧ್ರುವ ಸರ್ಜಾ ಅವರ ಮುಂದಿನ ಚಿತ್ರ ದುಬಾರಿ. ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರಕ್ಕೂ ಮೂರೇ ಅಕ್ಷರ. ಅಲ್ಲದೆ, ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ಇರಲಿದೆ ಎನ್ನುವ ಮಾಹಿತಿ ಈಗಾಗಲೇ ಅಭಿಮಾನಿ ವಲಯದಲ್ಲಿ ಸುದ್ದಿಯಾಗಿದೆ.

ದುಬಾರಿ ನಿರೀಕ್ಷೆಯಲ್ಲಿದ್ದ ಧ್ರುವ ಸರ್ಜಾ ಅಭಿಮಾನಿಗಳಿಗೆ ಈ ಸುದ್ದಿ ಓದಿದ್ರೆ ಶ್ಯಾನೇ ಬೇಜಾರಾಗಬಹುದು!
ಧ್ರುವ ಸರ್ಜಾ
Follow us on

ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆಕಂಡು ಸ್ಯಾಂಡಲ್​ವುಡ್​​ನಲ್ಲಿ​ ಸದ್ದು ಮಾಡಿದ್ದು ಮಾತ್ರವಲ್ಲ, 50 ಕೋಟಿ ರೂಪಾಯಿ ಕಲೆಕ್ಷನ್​ ಕೂಡ ಮಾಡಿತ್ತು. ಈಗ ಧ್ರುವ ಸರ್ಜಾ ಅವರು ಮುಂದಿನ ಸಿನಿಮಾದ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಅವರ ಮುಂದಿನ ಚಿತ್ರದ ಅಪ್​ಡೇಟ್​ ತಿಳಿದುಕೊಳ್ಳೋಕೆ ಕಾತುರರಾಗಿದ್ದಾರೆ. ಧ್ರುವ ಸರ್ಜಾ ಮುಂದಿನ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ ಏನೋ ಸಿಕ್ಕಿದೆ. ಆದರೆ, ಫ್ಯಾನ್ಸ್​​ಗೆ ಇಲ್ಲೊಂದು ಕಹಿ ವಿಚಾರ ಇದೆ.

ಧ್ರುವ ಸರ್ಜಾ ಅವರ ಮುಂದಿನ ಚಿತ್ರ ದುಬಾರಿ. ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರಕ್ಕೂ ಮೂರೇ ಅಕ್ಷರ. ಅಲ್ಲದೆ, ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ಇರಲಿದೆ ಎನ್ನುವ ಮಾಹಿತಿ ಈಗಾಗಲೇ ಅಭಿಮಾನಿ ವಲಯದಲ್ಲಿ ಸುದ್ದಿಯಾಗಿದೆ. ಆದರೆ, ಈಗ ಸಿನಿಮಾದ ಶೂಟಿಂಗ್​ ಮುಂದೂಡಲ್ಪಟ್ಟಿದೆಯಂತೆ!

ಪೊಗರು ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದ ನಂದಕಿಶೋರ್​ ದುಬಾರಿ ಸಿನಿಮಾಗೂ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಶೂಟಿಂಗ್​ ಕೂಡ ಈಗಾಗಲೇ ಆರಂಭಗೊಳ್ಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಶೂಟಿಂಗ್​ ಮುಂದೂಡಲ್ಪಟ್ಟಿದೆಯಂತೆ. ಇದು ಅಭಿಮಾನಿಗಳಿಗೆ ಸಾಕಷ್ಟು​ ಬೇಸರ ಮೂಡಿಸಿದೆ.

ಮೂಲಗಳ ಪ್ರಕಾರ ಕೆ. ಮಂಜು ಪುತ್ರನ ಚಿತ್ರಕ್ಕೆ ನಂದಕಿಶೋರ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ಪೂರ್ಣಗೊಂಡ ನಂತರದಲ್ಲಿ ನಂದಕಿಶೋರ್​ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಹೀಗಾಗಿ, ದುಬಾರಿ ಚಿತ್ರದ ಶೂಟಿಂಗ್​ ವಿಳಂಬವಾಗಬಹುದು ಎನ್ನಲಾಗುತ್ತಿದೆ.

ಇನ್ನು, ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ನಿರ್ದೇಶನದ ಸಿನಿಮಾಗೆ ಧ್ರುವ ನಾಯಕ ಎನ್ನುವ ಮಾತು ಕೇಳಿ ಬಂದಿದೆ. ಒಂದೊಮ್ಮೆ ಇದು ಸತ್ಯವಾದರೆ, ಈ ಸಿನಿಮಾ ಪ್ಯಾನ್​ ಇಂಡಿಯಾ ಚಿತ್ರವಾಗಲಿದೆ.

ಫೆಬ್ರವರಿ ತಿಂಗಳಲ್ಲಿ ಪೊಗರು ಸಿನಿಮಾ ತೆರೆಗೆ ಬಂದಿತ್ತು. ಮೊದಲ ಮೂರು ದಿನಕ್ಕೆ ಈ ಚಿತ್ರ 30 ಕೋಟಿ ರೂ. ಕಲೆಕ್ಷನ್​ ಮಾಡಿತು. 6 ದಿನಗಳಲ್ಲಿ 46 ಕೋಟಿ ರೂ. ಗಳಿಸಿರುವ ಬಗ್ಗೆ ಮಾಹಿತಿ ಕೇಳಿಬಂದಿತ್ತು. ಒಟ್ಟಾರೆಯಾಗಿ ಈ ಚಿತ್ರಕ್ಕೆ 50 ಕೋಟಿಗೂ ಹೆಚ್ಚು ಕಲೆಕ್ಷನ್​ ಆಗಿದೆ ಎನ್ನಲಾಗುತ್ತಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಈ ಚಿತ್ರ ತೆರೆಕಂಡಿತ್ತು. ಈ ಚಿತ್ರ ತೆರೆಕಂಡಿತ್ತು. ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಅವರ ಖಾತೆಗೆ ಮತ್ತೊಂದು ಹಿಟ್​ ಸಿನಿಮಾ ಸೇರಿಕೊಂಡಂತಾಗಿದೆ.

ಇದನ್ನೂ ಓದಿ: 50 ದಿನ ಪೂರೈಸಿದ ಪೊಗರು! ಧ್ರುವ ಸರ್ಜಾ ನಟನೆಯ ಈ ಚಿತ್ರ ಮಾಡಿದ ಕಲೆಕ್ಷನ್​ ಎಷ್ಟು?