ಧ್ರುವ ಸರ್ಜಾ ಅವರಿಗೆ ಇಂದು (ಅಕ್ಟೋಬರ್ 6) ಹುಟ್ಟುಹಬ್ಬ. ಅವರಿಗೆ ಇರುವ ಅಭಿಮಾನಿಗಳ ಸಂಖ್ಯೆ ಬಗ್ಗೆ ನಿಮಗೆ ಗೊತ್ತೇ ಇದೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರ ಜನ್ಮದಿನಕ್ಕೆ ಬಾಲಿವುಡ್ ಕಡೆಯಿಂದ ಗುಡ್ ನ್ಯೂಸ್ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರು ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಹೆಚ್ಚುತ್ತಿದೆ. ಅವರ ‘ಮಾರ್ಟಿನ್’ ಸಿನಿಮಾ ಮುಂದಿನ ವಾರ ಬಿಡುಗಡೆ ಕಾಣುತ್ತಿದೆ.
ಧ್ರುವ ಸರ್ಜಾ ಅವರ ಈ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆ ಕಾಣುತ್ತಿದೆ. ಹೀಗಾಗಿ, ಹುಟ್ಟುಹಬ್ಬ ವಿಶೇಷ ಎನಿಸಿಕೊಂಡಿದೆ ಎನ್ನಬಹುದು. ಇದರ ಜೊತೆಗೆ ಬಾಲಿವುಡ್ನತ್ತ ಫ್ಯಾನ್ಸ್ ಮುಖ ಮಾಡುತ್ತಿದ್ದಾರೆ.
ಹಿಂದಿಯಲ್ಲಿ ‘ವಾರ್ 2’ ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲಿ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಕೂಡ ನಿರೀಕ್ಷೆ ಇಟ್ಟುಕೊಳ್ಳುವಂತೆ ಆಗಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಧ್ರುವ ಸರ್ಜಾ ಕೂಡ ನಟಿಸೋ ಸಾಧ್ಯತೆ ಇದೆಯಂತೆ. ಈ ಬಗ್ಗೆ ಏನಾದರೂ ಅಪ್ಡೇಟ್ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ತೆಲುಗು ಪ್ರೇಕ್ಷಕರ ಮುಂದೆ ಭಾವುಕವಾಗಿ ಮನವಿ ಮಾಡಿದ ಧ್ರುವ ಸರ್ಜಾ
ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರಿಗೆ ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿ ಆಗಿದ್ದು, ಅಲ್ಲಿಯೂ ಸಿನಿಮಾ ಮಾಡುತ್ತಿದ್ದಾರೆ. ಅವರು ಹಿಂದಿಯಲ್ಲಿ ‘ರಾಮಾಯಣ’ ಸಿನಿಮಾ ಮಾಡುತ್ತಿದ್ದಾರೆ. ಈ ರೀತಿ ಹಿಂದಿ ಚಿತ್ರರಂಗದಲ್ಲಿ ಮಿಂಚಿದವರ ಸಂಖ್ಯೆ ಕಡಿಮೆ. ಹೀಗಾಗಿ, ಧ್ರುವ ಸರ್ಜಾ ಅವರು ಹಿಂದಿ ಚಿತ್ರರಂಗಕ್ಕೆ ಹೋದರೆ ಫ್ಯಾನ್ಸ್ ಖುಷಿ ಹೆಚ್ಚಲಿದೆ.
ಕೆಲವು ವರದಿಗಳ ಪ್ರಕಾರ ಧ್ರುವ ಸರ್ಜಾ ಅವರು ಈಗಾಗಲೇ ಮಾತುಕತೆ ನಡೆಸುತ್ತಿದ್ದಾರಂತೆ. ಎಲ್ಲವೂ ಫೈನಲ್ ಆದ ಬಳಿಕ ಧ್ರುವ ಸರ್ಜಾ ಅವರು ಈ ಬಗ್ಗೆ ಘೋಷಣೆ ಮಾಡಬಹುದು ಎನ್ನಲಾಗಿದೆ. ಅದು ಅವರು ಜನ್ಮದಿನದಂದೇ ಆಗಲಿ ಎಂಬುದು ಫ್ಯಾನ್ಸ್ ಆಶಯ. ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಎಪಿ ಅರ್ಜುನ್ ನಿರ್ದೇಶನದ ಈ ಚಿತ್ರಕ್ಕೆ, ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ