ಮತ್ತೆ ಒಂದಾಗಲಿದೆ ದಿಯಾ ಜೋಡಿ; ಹೇಗಿರಲಿದೆ ಈ ಸಿನಿಮಾ ಕಥೆ?

|

Updated on: May 20, 2021 | 6:42 PM

ಕೊವಿಡ್ ಕಾರಣದಿಂದ ಸಾಕಷ್ಟು ಸಿನಿಮಾಗಳ ಶೂಟಿಂಗ್​ ವಿಳಂಬವಾಗುತ್ತಿದೆ. ಅಷ್ಟೇ ಅಲ್ಲ, ಸಿನಿಮಾ ಬಿಡುಗಡೆ ಕೂಡ ವಿಳಂಬವಾಗುತ್ತಿದೆ. ಕೊವಿಡ್​ ಎರಡನೇ ಅಲೆ ಕಡಿಮೆ ಆದ ನಂತರವೇ ಚಿತ್ರಗಳು ರಿಲೀಸ್​ ಆಗಲಿವೆ.

ಮತ್ತೆ ಒಂದಾಗಲಿದೆ ದಿಯಾ ಜೋಡಿ; ಹೇಗಿರಲಿದೆ ಈ ಸಿನಿಮಾ ಕಥೆ?
ಪೃಥ್ವಿ ಅಂಬರ್​-ಖುಷಿ ರವಿ
Follow us on

2020ರಲ್ಲಿ ರಿಲೀಸ್​ ಆಗಿದ್ದ ದಿಯಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ದುರಂತ ಪ್ರೇಮಕಥೆ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿತ್ತು. ಪೃಥ್ವಿ ಅಂಬರ್, ಖುಷಿ ರವಿ ಮತ್ತು ದೀಕ್ಷಿತ್​ ಶೆಟ್ಟಿ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಸಿಕೊಂಡಿದ್ದರು. ಈಗ ಪೃಥ್ವಿ-ಖುಷಿ ಮತ್ತೆ ತೆರೆಮೇಲೆ ಒಂದಾಗಲಿದ್ದಾರೆ. ಸಿನಿಮಾ ಕಥೆ ಕೂಡ ರೆಡಿ ಇದ್ದು, ಶೂಟಿಂಗ್​ ಆರಂಭವಾಗುವುದೊಂದೇ ಬಾಕಿ ಇದೆ.

ಪೃಥ್ವಿ ಅಂಬರ್ ಕೊವಿಡ್​ ಲಾಕ್​ಡೌನಿಂದ್​ ತಮ್ಮ ಹುಟ್ಟೂರಾದ ಕಾಸರಗೋಡು ಸೇರಿದ್ದಾರೆ. ಅಲ್ಲಿದ್ದುಕೊಂಡೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ವಿಶೇಷ ಎಂದರೆ, ಅವರು ಸಿನಿಮಾ ಒಂದಕ್ಕೆ ಕಥೆ ಹಾಗೂ ಸ್ಕ್ರಿಪ್ಟ್​ ಬರೆದಿದ್ದಾರೆ. ಈ ಸಿನಿಮಾದಲ್ಲಿ ಪೃಥ್ವಿ ಹಾಗೂ ಖುಷಿ ನಟಿಸುತ್ತಿದ್ದಾರೆ.

ಸಿನಿಮಾ ಹೇಗಿದೆ, ಯಾವ ಹಂತದಲ್ಲಿದೆ? ಎನ್ನುವ ಬಗ್ಗೆ ಪೃಥ್ವಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಸ್ಕ್ರಿಪ್ಟ್​ ಕೆಲಸ ಮಾಡಿದ ಒಂದು ಪ್ರಾಜೆಕ್ಟ್​ ಶೂಟ್​ಗೆ ರೆಡಿ ಇದೆ. ಈ ಸಿನಿಮಾದಲ್ಲಿ ನಾನು ಮತ್ತು ಖುಷಿ ನಟಿಸುತ್ತಿದ್ದೇವೆ. ಇದೊಂದು ಲವ್​ ಸ್ಟೋರಿ. ದಿಯಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ದರ್ಶನ್​ ಅಪೂರ್ವ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ ಎಂದು ಪೃಥ್ವಿ ಮಾಹಿತಿ ನೀಡಿದ್ದಾರೆ.

ಜೂನ್​ನಲ್ಲಿ ಸಿನಿಮಾ ಶೂಟಿಂಗ್​ ಮಾಡಬೇಕು ಎನ್ನುವುದು ಚಿತ್ರತಂಡದ ಪ್ಲ್ಯಾನ್​ ಆಗಿತ್ತು. ಆದರೆ, ಕೊರೊನಾ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಲಾಕ್​ಡೌನ್​ ಕೂಡ ಘೋಷಣೆ ಮಾಡಲಾಗಿದೆ. ಹೀಗಾಗಿ ಸಿನಿಮಾ ಶೂಟಿಂಗ್​ ಮುಂದೂಡಲ್ಪಟ್ಟಿದೆ. ದುಬೈನಲ್ಲಿ ನೆಲೆಸಿರುವ ಪೂರ್ಣಿಮಾ ರಾಜೀವ್​ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

‘ಫ್ರೆಂಡ್ಸ್​ ಜತೆ ಸೇರಿ ಹಾರರ್​ ಸಿನಿಮಾ ಮಾಡ್ತಾ ಇದೀನಿ. ಇದರ ಕೆಲಸ ಕೂಡ ಶುರುವಾಗಬೇಕಿದೆ.  ‘ಶುಗರ್​ಲೆಸ್’​, ‘ಲೈಫ್​ ಈಸ್​ ಬ್ಯೂಟಿಫುಲ್’ ಚಿತ್ರದ​ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ನಡೆಯುತ್ತಿದೆ ಎಂದು ಪೃಥ್ವಿ ಅಂಬರ್ ಮಾಹಿತಿ ನೀಡಿದ್ದಾರೆ.

ಕೊವಿಡ್ ಕಾರಣದಿಂದ ಸಾಕಷ್ಟು ಸಿನಿಮಾಗಳ ಶೂಟಿಂಗ್​ ವಿಳಂಬವಾಗುತ್ತಿದೆ. ಅಷ್ಟೇ ಅಲ್ಲ, ಸಿನಿಮಾ ಬಿಡುಗಡೆ ಕೂಡ ವಿಳಂಬವಾಗುತ್ತಿದೆ. ಕೊವಿಡ್​ ಎರಡನೇ ಅಲೆ ಕಡಿಮೆ ಆದ ನಂತರವೇ ಚಿತ್ರಗಳು ರಿಲೀಸ್​ ಆಗಲಿವೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಅನುಷ್ಕಾ ಶರ್ಮಾ ನಟಿಸಿರುವ ಯಾವ ಸಿನಿಮಾ ಫೆವರೆಟ್ ಗೊತ್ತಾ?

ಕೃಷಿ ಹಾಗೂ ಸ್ಕ್ರಿಪ್ಟ್​ ಕೆಲಸಗಳಲ್ಲಿ ಬ್ಯುಸಿಯಾದ ‘ದಿಯಾ’ ಪೃಥ್ವಿ ಅಂಬರ್; ಇದು ಲಾಕ್​ಡೌನ್​ ದಿನಚರಿ