ನಟ, ನಿರ್ದೇಶಕ ಗುರುಪ್ರಸಾದ್ (Guruprasad) ಅವರು ವಿವಾದದ ಮೂಲಕ ಸುದ್ದಿ ಆಗಿದ್ದಾರೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಅವರು ಅರೆಸ್ಟ್ ಆಗಿದ್ದಾರೆ. ಶ್ರೀನಿವಾಸ್ ಹೆಸರಿನ ವ್ಯಕ್ತಿಗೆ ಹಣ ಕೊಡುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಅವರಿಗೆ ಗುರುಪ್ರಸಾದ್ ಚೆಕ್ ನೀಡಿದ್ದರು. ಆದರೆ, ಅದು ಬೌನ್ಸ್ ಆಗಿದೆ. ವಂಚನೆ ಹಾಗು ಮೋಸ ಮಾಡಿದ ಪ್ರಕರಣದ ಅಡಿಯಲ್ಲಿ ಗುರುಪ್ರಸಾದ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಶ್ರೀನಿವಾಸ್ ಎಂಬುವವರ ಜತೆ ಗುರುಪ್ರಸಾದ್ ಹಣಕಾಸು ವ್ಯವಹಾರ ನಡೆಸಿದ್ದರು. ಗುರುಪ್ರಸಾದ್ ವಿರುದ್ಧ ವಂಚನೆ ಆರೋಪದಡಿ ಕೇಸ್ ದಾಖಲಾಗಿತ್ತು. ಚೆಕ್ಬೌನ್ಸ್ ಪ್ರಕರಣದಲ್ಲಿ ವಾರಂಟ್ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಂದ ಗುರುಪ್ರಸಾದ್ ಬಂಧನ ಆಗಿದೆ.
2015 ರಲ್ಲಿ ನಾನು ಅಭಿಮಾನಿ ಆಗಿ ಪರಿಚಯ ಆಗಿದ್ದು. 2016 ರಲ್ಲಿಸಾಲ ಅಂತ 30 ಲಕ್ಷ ರೂ. ಕೊಡಿಸಿದ್ದೆ. ಆದ್ರೆ, ಸಾಲ ವಾಪಸ್ ಕೇಳಿದಾಗ ಕೆಟ್ಟು ರೀತಿಯಲ್ಲಿ ವರ್ತಿಸಿದ್ರು. ಈ ಬಗ್ಗೆ ಕಳೆದ ಆಗಸ್ಟ್ನಲ್ಲಿ ಕೇಸ್ ಹಾಕಿದ್ದೆ. ಪೊಲೀಸರು ಇವತ್ತು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಮೂಲಕ ನ್ಯಾಯ ಕೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈಗಲೂ ದುಡ್ಡು ಕೊಟ್ರೆ ಅವರ ಕಾಲಿಗೆ ಬಿದ್ದು ಕೇಸ್ ವಾಪಸ್ ತೆಗೆದುಕೊಳ್ಳುತ್ತೇನೆ. ಚೆಕ್ ಬೌನ್ಸ್ ಕೇಸ್ ಹಾಕಿದ ಮೇಲೆ ನನ್ನ ಮೇಲೆ ಎರಡನೇ ಹೆಂಡತಿಯಿಂದ ನಾನು ಅನುಚಿತವಾಗಿ ವರ್ತಿಸಿದ್ದೀನಿ ಎಂದು ದುರು ದಾಖಲು ಮಾಡಿದ್ರು. ಗುರುಗಳನ್ನ ಇಲ್ಲಿಗೆ ತರುವುದಕ್ಕೆ ನನಗೆ ಈಗಲೂ ಬೇಜಾರಿದೆ, ಆದ್ರೆ, ಅವರಿಗೆ ಆ ಭಾವನೆ ಇಲ್ಲ ಎಂದರು.
2006ರಲ್ಲಿ ತೆರೆಗೆ ಬಂದ ‘ಮಠ’ ಸಿನಿಮಾಗೆ ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಅವರ ನಿರ್ದೇಶನದ ಮೊದಲ ಸಿನಿಮಾ ಇದು. ಈ ಚಿತ್ರದಲ್ಲಿ ಜಗ್ಗೇಶ್ ಮುಖ್ಯ ಪಾತ್ರ ಮಾಡಿದ್ದರು. ಈ ಸಿನಿಮಾ ಯಶಸ್ಸು ಕಂಡಿತು. ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಷನ್ನಲ್ಲಿ ಮೂಡಿಬಂದ 2009ರ ‘ಎದ್ದೇಳು ಮಂಜುನಾಥ’ ಸಿನಿಮಾ ಕೂಡ ಯಶಸ್ಸು ಕಂಡಿತು. 2013ರಲ್ಲಿ ‘ಡೈರೆಕ್ಟರ್ ಸ್ಪೆಷಲ್’ ನಿರ್ದೇಶನ ಮಾಡಿದರು. ಇನ್ನೂ ಕೆಲವು ಚಿತ್ರಗಳಿಗೆ ಅವರು ಆ್ಯಕ್ಷನ್ಕಟ್ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್ ಬಹಿರಂಗ ಡೆತ್ ನೋಟ್
ನಟನೆ ಮೂಲಕವೂ ಗುರುಪ್ರಸಾದ್ ಗುರುತಿಸಿಕೊಂಡಿದ್ದಾರೆ. ‘ಮಠ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಇತ್ತೀಚೆಗೆ ತೆರೆಗೆ ಬಂದ ‘ಮಠ’ ಸಿನಿಮಾದಲ್ಲೂ ಗುರುಪ್ರಸಾದ್ ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Fri, 13 January 23