ಬೆಂಗಳೂರು: ನವೆಂಬರ್ 8ರಂದು (ಸೋಮವಾರ) ನಟ ಪುನೀತ್ ರಾಜಕುಮಾರ್ ಅವರ 11ನೇ ದಿನದ ಕಾರ್ಯ ನಡೆಯಲಿದ್ದು, ಅದಕ್ಕೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ನವೆಂಬರ್ 9ರಂದು 12ನೇ ದಿನದ ಕಾರ್ಯ ನಡೆಯಲಿದ್ದು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ. ಡಾ.ರಾಜ್ ಕುಟುಂಬವು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ 12ನೇ ದಿನದ ಕಾರ್ಯವನ್ನು ಹಮ್ಮಿಕೊಂಡಿದೆ. ಆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಪ್ಪು ನೆನಪಿನಲ್ಲಿ ಅನ್ನದಾನ ವ್ಯವಸ್ಥೆ ಏರ್ಪಡಿಸಲಾಗಿದೆ.
ಮುಂದಿನ ವಾರ ಪುನೀತ್ ಮನೆಗೆ ರಜಿನಿಕಾಂತ್ ಭೇಟಿ ಸಾಧ್ಯತೆ: ರಜಿನಿ ಸ್ನೇಹಿತ ರಾಜ್ ಬಹದ್ದೂರ್:
ಮುಂದಿನ ವಾರ ಪುನೀತ್ ಮನೆಗೆ ರಜಿನಿಕಾಂತ್ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಟಿವಿ9ಗೆ ರಜಿನಿಕಾಂತ್ ಸ್ನೇಹಿತ ರಾಜ್ ಬಹದ್ದೂರ್ ಹೇಳಿಕೆ ನೀಡಿದ್ದಾರೆ. ಅಪ್ಪುಗೆ ಹೀಗಾಗಿದೆ ಎಂದು ಕೇಳಿ ಬೇಜಾರು ಮಾಡಿಕೊಂಡರು. ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಯ್ತು ಎಂದು ನೊಂದುಕೊಂಡರು. ಆಸ್ಪತ್ರೆಯಲ್ಲಿ ಇದ್ದಿದ್ದರಿಂದ ರಜಿನಿಕಾಂತ್ ಬರಲು ಆಗಿರಲಿಲ್ಲ ಎಂದು ಅವರು ನುಡಿದಿದ್ದಾರೆ.
ಪುನೀತ್ ಸಮಾಧಿ ದರ್ಶನಕ್ಕೆ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಅಭಿಮಾನಿಗಳು:
ಬೆಳಗ್ಗೆ 9ರಿಂದ ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶ ಹಿನ್ನೆಲೆಯಲ್ಲಿ, ರಾಜ್ಯದ ವಿವಿಧೆಡೆಯಿಂದ ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳು ಆಗಮಿಸಿದ್ದಾರೆ. ದೀಪಾವಳಿ ಹಬ್ಬ ಇದ್ದರೂ, ಅಪ್ಪು ದರ್ಶನಕ್ಕೆ ಫ್ಯಾನ್ಸ್ ಆಗಮಿಸಿದ್ದು, ಸಾಲುಗಟ್ಟಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಪಕ್ಕದಲ್ಲಿರುವ ಡಾ.ರಾಜ್ ಹಾಗೂ ಪಾರ್ವತಮ್ಮ ಸಮಾಧಿಗೂ ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ. ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಅಭಿಮಾನಿಗಳು ಕೂಡ, ಮತ್ತೆ ಆಗಮಿಸಿ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ದಾವಣಗೆರೆ , ಅನೇಕಲ್, ಚನ್ನಗಿರಿಯಿಂದ ಕೂಡ ಅಭಿಮಾನಿಗಳು ಆಗಮಿಸಿದ್ದಾರೆ.
ಪುನೀತ್ ಸಮಾಧಿ ದರ್ಶನಕ್ಕೆ ಆಗಮಿಸುತ್ತಿರುವ ಅಭಿಮಾನಿಗಳು; ಲೈಬವ್ ಇಲ್ಲಿ ಲಭ್ಯವಿದೆ:
ಇದನ್ನೂ ಓದಿ:
ರಜಿನೀಕಾಂತ್ಗೆ ಪುನೀತ್ ಸಾವಿನ ಸುದ್ದಿ ನಂಬಲಾಗುತ್ತಿಲ್ಲ, ಅವರಿಗೆ ಅಪ್ಪು ಮೇಲೆ ಬಹಳ ಪ್ರೀತಿ: ಶಿವರಾಜಕುಮಾರ್
ಬೆಂಗಳೂರಿನ ಎಸ್ಆರ್ವಿ ಥಿಯೇಟರ್ನಲ್ಲಿ ಕೊನೆಯದಾಗಿ ಅಟೆಂಡ್ ಮಾಡಿದ್ದ ಪುನೀತ್; ಇಲ್ಲಿದೆ ಸಿಸಿಟಿವಿ ವಿಡಿಯೋ
Published On - 11:47 am, Thu, 4 November 21