ರಾಜ್​ಕುಮಾರ್​ ಸಿನಿಮಾ ಟೈಟಲ್​ ಮರುಬಳಕೆ ಮಾಡದಂತೆ ಅಭಿಮಾನಿಗಳ ಆಗ್ರಹ; ಸ್ಪಂದಿಸಿದ ಫಿಲ್ಮ್​ ಚೇಂಬರ್

| Updated By: ರಾಜೇಶ್ ದುಗ್ಗುಮನೆ

Updated on: Aug 30, 2021 | 2:43 PM

ರಾಜ್​ಕುಮಾರ್​ ನಟನೆಯ ಬಹುತೇಕ ಚಿತ್ರಗಳು ಹಿಟ್​ ಲಿಸ್ಟ್​ನಲ್ಲಿವೆ. ಈ ಸಿನಿಮಾದ ಟೈಟಲ್​ ಮರುಬಳಕೆಯಾದರೆ ಹೊಸ ಚಿತ್ರಕ್ಕೆ ಇದು ಪ್ಲಸ್​ ಪಾಯಿಂಟ್​ ಆಗುವುದರಲ್ಲಿ ಅನುಮಾನವಿಲ್ಲ.

ರಾಜ್​ಕುಮಾರ್​ ಸಿನಿಮಾ ಟೈಟಲ್​ ಮರುಬಳಕೆ ಮಾಡದಂತೆ ಅಭಿಮಾನಿಗಳ ಆಗ್ರಹ; ಸ್ಪಂದಿಸಿದ ಫಿಲ್ಮ್​ ಚೇಂಬರ್
ಡಾ. ರಾಜ್​ಕುಮಾರ್​
Follow us on

ಡಾ. ರಾಜ್​ಕುಮಾರ್​ ಸಿನಿಮಾಗಳಿಗೆ ಈಗಲೂ ಬೇಡಿಕೆ ಇದೆ. ಅವರ ಸಿನಿಮಾ ಸಾಕಷ್ಟು ಜನರಿಗೆ ಸ್ಫೂರ್ತಿ. ಈ ಕಾರಣಕ್ಕೆ ಅನೇಕ ನಿರ್ಮಾಪಕರು ರಾಜ್​ಕುಮಾರ್​ ಸಿನಿಮಾ ಹೆಸರನ್ನು ಮರುಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇನ್ನುಮುಂದೆ ಇದು ಸಾಧ್ಯವಿಲ್ಲ. ಏಕೆಂದರೆ, ಅಭಿಮಾನಿಗಳು ಈ ಬಗ್ಗೆ ನೀಡಿದ ಮನವಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಂದಿಸಿದೆ. 

ರಾಜ್​ಕುಮಾರ್​ ನಟನೆಯ ಬಹುತೇಕ ಚಿತ್ರಗಳು ಹಿಟ್​ ಲಿಸ್ಟ್​ನಲ್ಲಿವೆ. ಈ ಸಿನಿಮಾದ ಟೈಟಲ್​ ಮರುಬಳಕೆಯಾದರೆ ಹೊಸ ಚಿತ್ರಕ್ಕೆ ಇದು ಪ್ಲಸ್​ ಪಾಯಿಂಟ್​ ಆಗುವುದರಲ್ಲಿ ಅನುಮಾನವಿಲ್ಲ. ಆದರೆ, ರಾಜ್​​ಕುಮಾರ್ ಅವರ ಚಿತ್ರದ ಟೈಟಲ್‌ಗಳಿಗೆ ತಕ್ಕಂತೆ ಸಿನಿಮಾಗಳು ಸಿದ್ಧವಾಗುತ್ತಿಲ್ಲ ಎಂಬುದು ರಾಜ್ ಕುಮಾರ್ ಅಭಿಮಾನಿ ಸಂಘಗಳ ಅಭಿಪ್ರಾಯ. ರಾಜ್​ಕುಮಾರ್​ ಸಿನಿಮಾ ಬಗ್ಗೆ ಯೂಟ್ಯೂಬ್​ ಮೊದಲಾದ ಕಡೆ ಹುಡುಕಾಟ ನಡೆಸಿದರೆ ಮರುಬಳಕೆಯಾದ ಸಿನಿಮಾಗಳ ಟೈಟಲ್​​ ರಾರಾಜಿಸುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಅನ್ನೋ ಉದ್ದೇಶವೂ ಇದರಲ್ಲಿ ಸೇರಿದೆ.

ಈ ಕಾರಣಕ್ಕೆ ರಾಜ್​ಕುಮಾರ್ ಅವರ ಹಳೆಯ ಸಿನಿಮಾದ ಟೈಟಲ್​​ಗಳ ಮರು ಬಳಕೆಗೆ ಬ್ರೇಕ್ ಬೀಳಬೇಕು ಎಂದು ಅಣ್ಣಾವ್ರ ಅಭಿಮಾನಿ ಸಂಘದವರು ಒತ್ತಾಯಿಸಿದ್ದಾರೆ. ಇಂದು (ಆಗಸ್ಟ್ 30) ಕರ್ನಾಕಟ ಚಲನ‌ಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ. ಈ ಮನವಿಗೆ ವಾಣಿಜ್ಯ ಮಂಡಳಿ ಸ್ಪಂದಿಸಿದೆ. ರಾಜ್​ಕುಮಾರ್​ ಟೈಟಲ್​ ಮರುಬಳಕೆಗೆ ಅವಕಾಶ ನೀಡುವುದಿಲ್ಲ ಎನ್ನುವ ಭರವಸೆ ನೀಡಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ರಾಜ್​ಕುಮಾರ್​ ಅಭಿಮಾನಿ ಸಂಘದವರು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಶಿವಣ್ಣ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿರುವ ‘ನೀ ಸಿಗೋವರೆಗೂ’ ಚಿತ್ರಕ್ಕೆ ಕಿಚ್ಚ ಸುದೀಪ್ ಶುಭಕೋರಿದ್ದು ಹೀಗೆ!

ಕ್ಯಾಬ್​ ಡ್ರೈವರ್​ಗಳ ಕಥೆ ಹೇಳುವ ‘ಯೆಲ್ಲೋ ಬೋರ್ಡ್​’; ಕಿಚ್ಚ ಶುಭಕೋರಿದ ಈ ಸಿನಿಮಾದಲ್ಲಿ ಏನಿದೆ ವಿಶೇಷ?