ಸ್ಪಂದನಾ ಅಗಲಿಕೆ ಹಿನ್ನೆಲೆ; ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ರಿಲೀಸ್ ದಿನಾಂಕ ಮುಂದಕ್ಕೆ

ಸಿನಿಮಾ ಜನರಿಗೆ ತಲುಪಬೇಕು ಎಂದರೆ ಅದಕ್ಕೆ ಪ್ರಚಾರ ಮುಖ್ಯವಾಗುತ್ತದೆ. ಪ್ರಚಾರವಿಲ್ಲದೆ ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯವಿಲ್ಲ. ಈ ಕಾರಣದಿಂದ ‘ಕದ್ದ ಚಿತ್ರ’ ತಂಡ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದೆ. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಅವರು ಪ್ರಚಾರದಲ್ಲಿ ಭಾಗಿ ಆಗಲು ಸಾಧ್ಯವಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ.

ಸ್ಪಂದನಾ ಅಗಲಿಕೆ ಹಿನ್ನೆಲೆ; ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ರಿಲೀಸ್ ದಿನಾಂಕ ಮುಂದಕ್ಕೆ
ಸ್ಪಂದನಾ
Follow us
ರಾಜೇಶ್ ದುಗ್ಗುಮನೆ
|

Updated on: Aug 21, 2023 | 12:11 PM

ನಟಿ ಸ್ಪಂದನಾ ವಿಜಯ್ ರಾಘವೇಂದ್ರ (Vijay Raghavendra) ಅವರು ಆಗಸ್ಟ್ 6ರಂದು ಮೃತಪಟ್ಟರು. ಥೈಲ್ಯಾಂಡ್ ಪ್ರವಾಸ ತೆರಳಿದ್ದ ಅವರು ಮರಳಿ ಭಾರತಕ್ಕೆ ಜೀವಂತ ಬರಲೇ ಇಲ್ಲ. ಈ ದುಃಖ ಇಡೀ ಕುಟುಂಬವನ್ನು ಆವರಿಸಿದೆ. ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕಳೆದುಕೊಂಡ ವಿಜಯ್ ಅವರು ತೀವ್ರ ನೋವಿನಲ್ಲಿದ್ದಾರೆ. ಸದ್ಯ ಅವರು ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಈ ಮಧ್ಯೆ ಆಗಸ್ಟ್ 25ರಂದು ರಿಲೀಸ್ ಆಗಬೇಕಿದ್ದ ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಸಿನಿಮಾ (Kadda Chitra Movie) ರಿಲೀಸ್ ದಿನಾಂಕವನ್ನು ತಂಡ ಮುಂದೂಡಿಕೊಂಡಿದೆ. ಈ ಮೂಲಕ ಸ್ಪಂದನಾಗೆ ಚಿತ್ರತಂಡ ಗೌರವ ಸೂಚಿಸಿದೆ.

ಸಿನಿಮಾ ಜನರಿಗೆ ತಲುಪಬೇಕು ಎಂದರೆ ಅದಕ್ಕೆ ಪ್ರಚಾರ ಮುಖ್ಯವಾಗುತ್ತದೆ. ಪ್ರಚಾರವಿಲ್ಲದೆ ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯವಿಲ್ಲ. ಈ ಕಾರಣದಿಂದ ‘ಕದ್ದ ಚಿತ್ರ’ ತಂಡ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದೆ. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಅವರು ಪ್ರಚಾರದಲ್ಲಿ ಭಾಗಿ ಆಗಲು ಸಾಧ್ಯವಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ.

‘ಸ್ಪಂದನಾ ಅಕ್ಕ, ಪರಿಶುದ್ಧ ಹಾಗೂ ಒಂದು ಸುಂದರವಾದ ಆತ್ಮ. ಬಹುಬೇಗ ನಮ್ಮನ್ನೆಲ್ಲಾ ಶಾಶ್ವತವಾಗಿ ತೊರೆದು ಅನಂತದೆಡೆಗೆ ಸಾಗಿದ್ದೀರಿ. ನೀವಿಲ್ಲದ ನಮ್ಮೆಲ್ಲರ ಪ್ರಪಂಚಕ್ಕೆ ಮಂಕು ಕವಿದಂತಾಗಿದೆ. ಆದರೂ ನೀವಿಟ್ಟ ಮಾರ್ಗದರ್ಶನ ನಮ್ಮೆಲ್ಲರನ್ನು ಬೆಳಕಿನತ್ತ ಕೊಂಡೊಯ್ಯುತ್ತಿದೆ. ಎಲ್ಲರೊಂದಿಗಿನ ನಿಮ್ಮ ಉಪಸ್ಥಿತಿ, ಸಹನೆ, ಉದಾರತೆ ಸದಾ ನೆನಪಿನಲ್ಲಿ ಉಳಿಯುವಂಥದ್ದು. ನಮ್ಮೆಲ್ಲರ ಆತ್ಮೀಯರಾದಂಥ ವಿಜಯ್ ರಾಘವೇಂದ್ರ ಅವರಿಗೆ ನಿಮ್ಮ ಅಗಲಿಕೆಯಿಂದಾಗಿರುವ ನಷ್ಟ, ದುಃಖ, ನಿಮ್ಮ ಅನುಪಸ್ಥಿತಿ, ನೋವಿನ ತೀವ್ರತೆ ತುಂಬಾ ಆಳವಾದದ್ದು. ಅವರಿಗೆ ದೇವರು ಈ ದುಃಖದಿಂದ ಹೊರಬರುವ ಶಕ್ತಿ ನೀಡಲಿ’ ಎಂದು ಬರೆದುಕೊಂಡಿದೆ ಚಿತ್ರತಂಡ.

ಇದನ್ನೂ ಓದಿ: ಸ್ಪಂದನಾ ನಿಧನದ ಬಳಿಕ ಹೇಗಿತ್ತು ವಿಜಯ್ ರಾಘವೇಂದ್ರ ಪರಿಸ್ಥಿತಿ? ಯಾರಿಗೂ ಬೇಡ ಈ ನೋವು

‘ಒಂದಂತೂ ನಮ್ಮಕಡೆಯಿಂದ ಹೇಳಬಹುದಾದ್ದು ಏನೆಂದರೆ ವಿಜಯ್ ರಾಘವೇಂದ್ರ ಸರ್ ನಾವೆಂದೂ ಸದಾ ನಿಮ್ಮ ಜೊತೆ ಇರುತ್ತೇವೆ. ಈ ಮೊದಲೇ ನಿಗದಿಯಾದಂತೆ ನಮ್ಮ ‘ಕದ್ದ ಚಿತ್ರ’ ಇದೇ ತಿಂಗಳು 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಸ್ಪಂದನಾ ಅಕ್ಕನ ಅಗಲಿಕೆಯಿಂದ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿದ್ದೇವೆ. ಶೀಘ್ರದಲ್ಲಿ ಹೊಸ ದಿನಾಂಕ ಘೋಷಿಸುತ್ತೇವೆ’ ಎಂದು ಬರೆದುಕೊಂಡಿದೆ ಚಿತ್ರತಂಡ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ