AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೆ ಬೋಳಿಸಿಕೊಂಡ ನಟಿ: ಕನ್ನಡದಲ್ಲಿಯೂ ನಟಿಸಿರುವ ಈ ಸುಂದರಿಯ ಗುರುತಿಸಬಲ್ಲಿರಾ?

Actress: ಕನ್ನಡದಲ್ಲೂ ನಟಿಸಿರುವ ಈ ನಟಿಯನ್ನು ಗುರುತಿಸಬಲ್ಲಿರಾ? ಹೀಗೆ ಹಠಾತ್ತನೆ ತಲೆ ಬೋಳಿಸಿಕೊಳ್ಳುವಂಥಹದ್ದು ಏನಾಯ್ತು ಈ ನಟಿಗೆ?

ತಲೆ ಬೋಳಿಸಿಕೊಂಡ ನಟಿ: ಕನ್ನಡದಲ್ಲಿಯೂ ನಟಿಸಿರುವ ಈ ಸುಂದರಿಯ ಗುರುತಿಸಬಲ್ಲಿರಾ?
ಗಾಯತ್ರಿ
Follow us
ಮಂಜುನಾಥ ಸಿ.
|

Updated on: Aug 20, 2023 | 10:36 PM

ಮುಖದ ಮೇಲೆ ಸಣ್ಣ ಗುಳ್ಳೆಯಾದರೂ ಸಿನಿಮಾ ನಟಿಯರು ವಾರಗಟ್ಟಲೆ ಮನೆಯಿಂದ ಹೊರಗೆ ಬರುವುದಿಲ್ಲ, ಕ್ಯಾಮೆರಾಗಳನ್ನು ಕಂಡರೆ ದೆವ್ವ ಕಂಡಂತಾಡುತ್ತಾರೆ. ಹಾಲಿ ನಟಿಯರು ಮಾತ್ರವಲ್ಲ, ಮಾಜಿ ನಟಿಯರೂ ಹೀಗೆಯೇ, ಮಣಗಟ್ಟಲೆ ಮೇಕಪ್ (Make Up) ಇಲ್ಲದೆ ಕ್ಯಾಮೆರಾ ಎದುರಿಸುವುದಿಲ್ಲ. ಆದರೆ ಇಲ್ಲಿ ಮಾಜಿ ನಟಿಯೊಬ್ಬರು ತಲೆ ಬೋಳಿಸಿಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಅಪ್​ಲೋಡ್ ಮಾಡಿದ್ದಾರೆ. ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದ ಈ ನಟಿಯ ಗುರುತಿಸಬಲ್ಲಿರಾ?

ರಾಜಕಾರಣಿಯೂ ಆಗಿರುವ, ಈ ಮಾಜಿ ನಟಿಯ ಹೆಸರು ಗಾಯತ್ರಿ ರಘುರಾಮ್. 2002ರಲ್ಲಿ ಬಿಡುಗಡೆ ಆದ ಕನ್ನಡದ ‘ಮನಸೆಲ್ಲಾ ನೀನೆ’ ಸಿನಿಮಾದಲ್ಲಿ ನಾಯಕಿಯಾಗಿ ಈ ಗಾಯತ್ರಿ ರಘುರಾಮ್ ನಟಿಸಿದ್ದರು. ಪ್ರಭುದೇವ ಸಹೋದರ ಪ್ರಸಾದ್ ಈ ಸಿನಿಮಾಕ್ಕೆ ನಾಯಕ. ನಿರ್ದೇಶನ ಮಾಡಿದ್ದು ಸ್ವತಃ ಮೂಗೂರು ಸುಂದರಂ, ಸಿನಿಮಾವನ್ನು ಅವರೇ ನಿರ್ಮಾಣ ಸಹ ಮಾಡಿದ್ದರು. ಸಿನಿಮಾ ಹಿಟ್ ಎನಿಸಿಕೊಂಡಿತ್ತು, ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಸಿನಿಮಾದಲ್ಲಿ ಗಾಯತ್ರಿ ರಘುರಾಮ್ ನಟನೆಯನ್ನು ಕನ್ನಡ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

‘ಮನಸೆಲ್ಲಾ ನೀನೆ’ ಸಿನಿಮಾದ ಬಳಿಕವೂ ಹಲವಾರು ತಮಿಳು ಕೆಲವು ತೆಲುಗು ಸಿನಿಮಾಗಳಲ್ಲಿಯೂ ಗಾಯತ್ರಿ ರಘುರಾಮ್ ನಟಿಸಿದ್ದಾರೆ. ಬಿಗ್​ಬಾಸ್ ಸ್ಪರ್ಧಿಯಾಗಿಯೂ ಗಾಯತ್ರಿ ಭಾಗವಹಿಸಿದ್ದರು. ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ರಾಜಕೀಯ ಸಹ ಪ್ರವೇಶಿಸಿದರು ಗಾಯತ್ರಿ. 2014ರ ಮೋದಿ ಅಲೆಯ ವೇಳೆ ಬಿಜೆಪಿ ಸೇರ್ಪಡೆಯಾಗಿ, ತಮಿಳುನಾಡು ಬಿಜೆಪಿಯ ಭಾಗವಾದರು. ಆದರೆ ಇತ್ತೀಚೆಗೆ ಪಕ್ಷದ ವರಿಷ್ಠರ ಮೇಲೆ ಅಸಮಾಧಾನ ಹೊರಹಾಕಿ ಪಕ್ಷದಿಂದ ಹೊರನಡೆದರು. ಅದರಲ್ಲಿಯೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ತೀವ್ರ ಅಸಮಾಧಾನವನ್ನು ಗಾಯತ್ರಿ ಹೊರಹಾಕಿದ್ದರು.

ಇದನ್ನೂ ಓದಿ:ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು, ಒಬ್ಬರಂತೂ ಸ್ಟಾರ್ ನಟಿ: ಗುರುತಿಸಿಬಲ್ಲಿರಾ?

”ಭಾರವಾದ ಮನಸ್ಸಿನಿಂದ ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ಅಣ್ಣಾಮಲೈ ನೇತೃತ್ವದಲ್ಲಿ ಮಹಿಳೆಯರು ಸುರಕ್ಷಿತವಲ್ಲ. ಪಕ್ಷದ ಒಳಗಿನವಳಾಗಿರುವುದಕ್ಕಿಂತಲೂ, ಪಕ್ಷದ ಹೊರಗಿನವಳಾಗಿ ಟ್ರೋಲ್​ಗೆ ಒಳಗಾಗುವುದೇ ಒಳಿತು. ತಮಿಳುನಾಡು ಬಿಜೆಪಿಯಲ್ಲಿ ಸಮಾನ ಹಕ್ಕು, ಗೌರವಗಳಿಗೆ ಜಾಗವೇ ಇಲ್ಲ” ಎಂದಿದ್ದಾರೆ.

ಸುಂದರವಾಗಿದ್ದ ನಟಿ ಗಾಯತ್ರಿ ಈಗ ಇದ್ದಕ್ಕಿದ್ದಂತೆ ತಲೆ ಬೋಳಿಸಿಕೊಳ್ಳಲು ವಿಶೇಷ ಕಾರಣವೇನು ಇಲ್ಲ. ಇತ್ತೀಚೆಗೆ ತಿರುಪತಿ ಬೆಟ್ಟಕ್ಕೆ ಭೇಟಿ ನೀಡಿದ್ದ ಗಾಯತ್ರಿ ಅಲ್ಲಿ ಕೂದಲನ್ನು ದೇವರಿಗೆ ಅರ್ಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಗಾಯತ್ರಿ, 10 ವರ್ಷಗಳ ಆಸೆ ಈಗ ಈಡೇರಿದೆ ಎಂದಿದ್ದಾರೆ. ಹತ್ತು ವರ್ಷಗಳಿಂದಲೂ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಕೂದಲು ಕೊಡಬೇಕೆಂದು ಹರಕೆ ಹೊತ್ತಿದ್ದರಂತೆ ನಟಿ, ಈಗ ಅದು ಸಾಧ್ಯವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ