AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾಲಿ ಹುಟ್ಟುಹಬ್ಬ ಈ ಬಾರಿ ಬಲು ಜೋರು: ಅಭಿಮಾನಿಗಳಲ್ಲಿ ಮಾಡಿದರು ಮನವಿ

Daali Dhananjay: ನಟ ಡಾಲಿ ಧನಂಜಯ್ ಐದು ವರ್ಷಗಳ ಬಳಿಕ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯೋಜಿಸಿದ್ದು, ಆ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಜೊತೆಗೆ ಮನವಿ ಒಂದನ್ನು ಮಾಡಿದ್ದಾರೆ.

ಡಾಲಿ ಹುಟ್ಟುಹಬ್ಬ ಈ ಬಾರಿ ಬಲು ಜೋರು: ಅಭಿಮಾನಿಗಳಲ್ಲಿ ಮಾಡಿದರು ಮನವಿ
ಡಾಲಿ ಧನಂಜಯ್
ಮಂಜುನಾಥ ಸಿ.
|

Updated on: Aug 20, 2023 | 4:17 PM

Share

ನಟ ಡಾಲಿ ಧನಂಜಯ್ (Daali Dhananjay) ಹುಟ್ಟುಹಬ್ಬಕ್ಕೆ ಉಳಿದಿರುವುದು ಇನ್ನು ಕೆಲವೇ ದಿನಗಳು. ಕೋವಿಡ್ ಹಾಗೂ ಇತರೆ ಕಾರಣಗಳಿಂದ ಕಳೆದ ಕೆಲ ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದ ನಟ ಡಾಲಿ ಧನಂಜಯ್ ಈ ವರ್ಷ ಅಭಿಮಾನಿಗಳೊಟ್ಟಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ (Birthday) ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಹುಟ್ಟುಹಬ್ಬ ಆಚರಣೆ ಕುರಿತಂತೆ ಅಭಿಮಾನಿಗಳಿಗೆ ಮಾಹಿತಿ ನೀಡುವ ವಿಡಿಯೋ ಬಿಡುಗಡೆ ಮಾಡಿರುವ ನಟ ಧನಂಜಯ್, ಜೊತೆಗೆ ಒಂದು ಮನವಿಯನ್ನೂ ಮಾಡಿದ್ದಾರೆ.

‘ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ಚೆನ್ನಾಗಿ ಆಚರಿಸಿಕೊಂಡು ಬರುತ್ತಿದ್ದೀರ. ವಿಶ್ ಮಾಡುತ್ತಿದ್ದೀರ, ಮನೆಯ ಹತ್ತಿರ ಬರುತ್ತೀರ, 2018ರಲ್ಲಿ ಜಯನಗರದ ಶಾಲಿನಿ ಗ್ರೌಂಡ್ಸ್​ನಲ್ಲಿ ನನ್ನ ಹುಟ್ಟುಹಬ್ಬವನ್ನು ಕೊನೆಯದಾಗಿ ನಿಮ್ಮೊಂದಿಗೆ ಆಚರಿಸಿಕೊಂಡಿದ್ದೆ. ಅದಾದ ಬಳಿಕ ಕೋವಿಡ್ ಸೇರಿದಂತೆ ನಾನಾ ಕಾರಣಗಳಿಂದ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ” ಎಂದಿದ್ದಾರೆ ಡಾಲಿ ಧನಂಜಯ್.

”ಈ ಬಾರಿ ನಿಮ್ಮೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದೇನೆ. ಆದರೆ ಮನೆಯಲ್ಲಿ ಅಲ್ಲ. ಯಾರೂ ಮನೆ ಹತ್ತಿರ ಬರಬೇಡಿ. ಮಂಗಳವಾರ ಸಂಜೆ ಅಂದರೆ ಆಗಸ್ಟ್ 22ರಂದು ಸಂಜೆ ಸಂತೋಷ್ ಚಿತ್ರಮಂದಿರದಲ್ಲಿ ನಮ್ಮ ‘ಉತ್ತರಕಾಂಡ’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಅಲ್ಲಿ ಸಿಗೋಣ. ಅದಾದ ಬಳಿಕ ನಂದಿ ಲಿಂಕ್ಸ್ ಗ್ರೌಂಡ್ಸ್​ನಲ್ಲಿ ರಾತ್ರಿ 11 ಗಂಟೆಗೆ ನಿಮ್ಮೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದೇನೆ. ಅದಾದ ಬಳಿಕ ಮಾರನೇಯ ದಿನ ಆಗಸ್ಟ್ 23, ನನ್ನ ಹುಟ್ಟುಹಬ್ಬದಂದು ಅದೇ ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ನಿಮ್ಮೊಟ್ಟಿಗೆ ಇರಲಿದ್ದೇನೆ” ಎಂದು ಡಾಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ತಂದೆಯ ಜೊತೆ ಬೆಟ್ಟ ಹತ್ತಿ ಬಾಲ್ಯದ ನೆನಪಿಗೆ ಜಾರಿದ ಡಾಲಿ ಧನಂಜಯ್

”ಎಲ್ಲರೂ ಸೇರೋಣ, ಒಟ್ಟಿಗೆ ಸಂಭ್ರಮಿಸೋಣ ಎಂದಿರುವ ನಟ ಡಾಲಿ ಧನಂಜಯ್ ಕೊನೆಯಲ್ಲಿ ಅಭಿಮಾನಿಗಳಲ್ಲಿ ಮನವಿಯೊಂದನ್ನು ಸಹ ಮಾಡಿದ್ದಾರೆ. ಎಲ್ಲರೂ ಬನ್ನಿ ಆದರೆ ಬರುವಾಗ ಯಾರೂ ಕೇಕ್ ಹಾಗೂ ಹಾರಗಳನ್ನು ತರಬೇಡಿ” ಎಂದಿದ್ದಾರೆ. ಡಾಲಿ ಧನಂಜಯ್ ಹುಟ್ಟುಹಬ್ಬ ಆಗಸ್ಟ್ 23 ರಂದು ಇದೆ. ಆ ದಿನ ಅವರು ತಮ್ಮ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜೊತೆಗೆ ಅವರ ಹಲವು ಸಿನಿಮಾಗಳ ಟೀಸರ್, ಫಸ್ಟ್ ಲುಕ್ ಇನ್ನಿತರೆಗಳು ಸಹ ಬಿಡುಗಡೆ ಆಗುತ್ತಿವೆ.

ಕೋವಿಡ್ ಹಾಗೂ ಇತರೆ ಕಾರಣಗಳಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದ ಹಲವು ನಟರು ಈ ವರ್ಷ ಅಭಿಮಾನಿಗಳೊಟ್ಟಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟ ರಿಷಬ್ ಶೆಟ್ಟಿ ತಿಂಗಳ ಹಿಂದಷ್ಟೆ ತಮ್ಮ ಹುಟ್ಟುಹಬ್ಬವನ್ನು ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ಆಚರಿಸಿಕೊಂಡಿದ್ದರು. ಇದೀಗ ಡಾಲಿ ಧನಂಜಯ್ ಸಹ ಅದೇ ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಜೋರಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ