ಕೋಲಾರ: ತಮ್ಮ ಮುಂಬರುವ ಸಲಗ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ದುನಿಯಾ ವಿಜಿ ಇಂದು ತಮ್ಮ ಕೆಲಸದಿಂದ ಕೊಂಚ ಬ್ರೇಕ್ ತಗೊಂಡು ಅಭಿಮಾನಿಗಳ ಜೊತೆ ಕ್ರಿಕೆಟ್ ಆಡೋಕೆ ಮುಂದಾದರು. ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಸಿನಿಮಾ ತಂಡದವರಿಂದ ಆಯೋಜಿಸಲಾಗಿದ್ದ ಸಲಗ ಕಪ್ ಟೂರ್ನಮೆಂಟ್ನಲ್ಲಿ ನಟ ಪಾಲ್ಗೊಂಡು ಎಂಜಾಯ್ ಮಾಡಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಸಿನಿತಂಡ
ಸಿನಿತಂಡದ ಜೊತೆ ಕ್ರಿಕೆಟ್ ಮ್ಯಾಚ್ಗೆ ಸಜ್ಜಾದ ಅಭಿಮಾನಿಗಳು
ದುನಿಯಾ ವಿಜಿ ಹಾಗೂ ಸಲಗ ಚಿತ್ರತಂಡ ತಮ್ಮ ಫ್ಯಾನ್ಸ್ಗಳಿಗಾಗಿಯೇ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದರು. ಇದೇ ಕಾರಣಕ್ಕೆ, ಪಟ್ಟಣದ ಹೊಂಡಾ ಕ್ರೀಡಾಂಗಣದಲ್ಲಿ ಟೂರ್ನಮೆಂಟ್ನ ಆಯೋಜಿಸಲಾಗಿತ್ತು.
ಕ್ರಿಕೆಟ್ ಮ್ಯಾಚ್ನಲ್ಲಿ ಪಾಲ್ಗೊಂಡ ನಟ ದುನಿಯಾ ವಿಜಿ
ಮ್ಯಾಚ್ನಲ್ಲಿ ಭಾಗಿಯಾದ ದುನಿಯಾ ವಿಜಿ
ಇದೇ ವೇಳೆ, ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ತಂಡೋಪತಂಡವಾಗಿ ಆಗಮಿಸಿದರು. ದುನಿಯಾ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು.
ಸಲಗ ಕಪ್ನಲ್ಲಿ ಕಾಣಿಸಿಕೊಂಡ ಜನಸಾಗರ
ದುನಿಯಾ ವಿಜಯ್ ಅವರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು
ಕಾಶಿ ವಿಶ್ವನಾಥಸ್ವಾಮಿಯ ಮಹಾ ಕುಂಭಾಬಿಷೇಕ ಕಾರ್ಯಕ್ರಮದಲ್ಲಿ ಪವರ್ಸ್ಟಾರ್!
ಇತ್ತ, ಜಿಲ್ಲೆಯ ಕೊರಗಂಡಹಳ್ಳಿಯಲ್ಲಿ ನಡೆದ ಕಲರ್ಫುಲ್ ಕಾರ್ಯಕ್ರಮದಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಭಾಗಿಯಾಗಿದ್ದರು. ಗ್ರಾಮದ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಮಹಾ ಕುಂಭಾಬಿಷೇಕ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಪಾಲ್ಗೊಂಡರು.
ಈ ವೇಳೆ, ಖ್ಯಾತ ಗಾಯಕ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಗಾಯಕಿ ಅನುರಾಧಾ ಭಟ್ ಅವರಿಂದ ರಸಸಂಜೆ ಕಾರ್ಯಕ್ರಮ ನೆರವೇರಿತು. ಈ ನಡುವೆ, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಪುನೀತ್ ರಾಜ್ ಕುಮಾರ್
ಇದನ್ನೂ ಓದಿ: ಪರಿಶಿಷ್ಟ ಜಾತಿ ಮೀಸಲಾತಿ ಪ್ರಬಲರ ಪಾಲಾಗುತ್ತಿದೆ -ರಾಜ್ಯದಲ್ಲಿ ಆರಂಭವಾಗಲಿದೆ ಬೃಹತ್ ಮಾದಿಗ ಪಾದಯಾತ್ರೆ
Published On - 6:39 pm, Sun, 7 March 21