ಪುನೀತ್​ ನಟಿಸುತ್ತಿದ್ದ ಈ ಸಿನಿಮಾ ಕೆಲಸಗಳು ಕೊನೆಗೂ ಪೂರ್ಣಗೊಳ್ಳಲೇ ಇಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Oct 29, 2021 | 3:34 PM

ಪುನೀತ್​ ಅಪಾರ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಮೃತಪಟ್ಟಿದ್ದರಿಂದ ಅನೇಕ ಸಿನಿಮಾ ಕೆಲಸಗಳು ಹಾಗೆಯೇ ಉಳಿದುಕೊಂಡಿವೆ. ಯಾವುದು ಆ ಸಿನಿಮಾಗಳು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪುನೀತ್​ ನಟಿಸುತ್ತಿದ್ದ ಈ ಸಿನಿಮಾ ಕೆಲಸಗಳು ಕೊನೆಗೂ ಪೂರ್ಣಗೊಳ್ಳಲೇ ಇಲ್ಲ
ಪುನೀತ್​
Follow us on

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ್ದಾರೆ. ಕೇವಲ 46ನೇ ವಯಸ್ಸಿಗೆ ಅವರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂಬುದನ್ನು ಯಾರಿಯೂ ಊಹಿಸಿರಲಿಲ್ಲ. ಪುನೀತ್​ ಅಪಾರ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಮೃತಪಟ್ಟಿದ್ದರಿಂದ ಅನೇಕ ಸಿನಿಮಾ ಕೆಲಸಗಳು ಹಾಗೆಯೇ ಉಳಿದುಕೊಂಡಿವೆ. ಯಾವುದು ಆ ಸಿನಿಮಾಗಳು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ದ್ವಿತ್ವ:

ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಪವನ್​ ಕುಮಾರ್​ ಜೊತೆಯಾಗಿ ‘ದ್ವಿತ್ವ’ ಸಿನಿಮಾ ಮಾಡಬೆಕಿತ್ತು. ಸೈಕಲಾಜಿಕಲ್​ ಕಥಾಹಂದರ ಹೊಂದಿದ್ದ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್​ ಕುಮಾರ್​ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್​ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದರು. 2014ರಲ್ಲಿ ತೆರೆಗೆ ಬಂದ ಪುನೀತ್​ ನಟನೆಯ ‘ಪವರ್***​’ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಹಾಗೂ ಕೊನೆಯ ಕನ್ನಡ ಚಿತ್ರ. ದ್ವಿತ್ವ ಚಿತ್ರದ ಮೂಲಕ ತ್ರಿಷಾ ಮತ್ತೆ ಕನ್ನಡಕ್ಕೆ ಬರಬೇಕಿತ್ತು.

ಜೇಮ್ಸ್

‘ಬಹದ್ದೂರ್’​, ‘ಭರ್ಜರಿ’, ‘ಭರಾಟೆ’ ಸಿನಿಮಾ ನಿರ್ದೇಶನ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿರುವ ಚೇತನ್​ ಕುಮಾರ್​ ಅವರು ಪುನೀತ್​ ರಾಜ್​ಕುಮಾರ್​ ನಟನೆಯ ‘ಜೇಮ್ಸ್​’ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದರು. ಕ್ರಿಸ್​ಮಸ್​ಗೆ ಸಿನಿಮಾದ ಟೀಸರ್​ ರಿಲೀಸ್​ ಆಗಬೇಕಿತ್ತು.

ಪಿಆರ್​ಕೆ ಬ್ಯಾನರ್ ಅಡಿಯ ಸಿನಿಮಾ

ಪಿಆರ್​ಕೆ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಮೂಡಿ ಬರುವ ಚಿತ್ರದಲ್ಲಿ ಪುನೀತ್​ ನಟಿಸಬೇಕು ಎಂಬುದು ಅಭಿಮಾನಿಗಳ ಕನಸಾಗಿತ್ತು. ಅಷ್ಟೇ ಅಲ್ಲ, ಪುನೀತ್​ ಕೂಡ ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಅದು ಈವರೆಗೆ ಸಾಧ್ಯವಾಗಿರಲಿಲ್ಲ. ಈಗ ಈ ಕನಸು ನನಸಾಗುವ ಕಾಲ ಸನಿಹವಾಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ‘ಪೃಥ್ವಿ’ ಸಿನಿಮಾದಲ್ಲಿ ಪುನೀತ್​ ಹಾಗೂ ಜೇಕಬ್​ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ಐಎಎಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಇದೇ ರೀತಿಯ ಕಥೆಯನ್ನು ಜೇಕಬ್​ ಹೆಣೆದಿದ್ದರು. ಪುನೀತ್​ ಚಿತ್ರಕ್ಕೆ ಹೀರೋ ಆಗಿದ್ದರು. ಪಿಎಆರ್​ಕೆ ಬ್ಯಾನರ್​ ಅಡಿಯಲ್ಲಿ ಸಿನಿಮಾ ಮೂಡಿ ಬರಬೇಕಿತ್ತು.

ಪುನೀತ್ ರಾಜ್​ಕುಮಾರ್ ನಿಧನ: ಕ್ಷಣಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Puneeth Rajkumar: ‘ದೇವರು ಇವರೆಲ್ಲರಿಗೂ ಒಳ್ಳೆಯದು ಮಾಡಲಿ’; ಇದು ವೇದಿಕೆ ಮೇಲೆ ಪುನೀತ್​ ಕೊನೆಯ ಮಾತು