ಜಾತಿ ನಿಂದನೆ ಆರೋಪದ ಮೇಲೆ ಗಣೇಶ್ ನಟನೆಯ ಮಳೆಯಲಿ ಜೊತೆಯಲಿ ಸಿನಿಮಾದ ನಾಯಕಿ ಯುವಿಕಾ ಚೌಧರಿ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರಿಂದ ನಟಿ ಕೋರ್ಟ್ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಬಂದೊದಗಿದೆ.
ಯುವಿಕಾ ಮಾತನಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಯುವಿಕಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ದಲಿತ ಹಕ್ಕುಗಳ ಕಾರ್ಯಕರ್ತರೊಬ್ಬರು ಕೇಸ್ ದಾಖಲು ಮಾಡಿದ್ದರು. ಹೀಗಾಗಿ, ಯುವಿಕಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯುವಿಕಾ ಎಸ್ಸಿ-ಎಸ್ಟಿ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಈಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಭರವಸೆ ನಮಗಿದೆ ಎಂದು ದಲಿತ ಹಕ್ಕುಗಳ ಕಾರ್ಯಕರ್ತ ರಜತ್ ಹೇಳಿದ್ದಾರೆ. ಮೇ 26ರಂದು ದೂರು ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ ಯುವಿಕಾ ಟ್ವಿಟರ್ನಲ್ಲಿ ಕ್ಷಮೆ ಕೇಳಿದ್ದಾರೆ. ಯಾರಿಗೂ ಬೇಸರ ಮಾಡೋದು ನನ್ನ ಉದ್ದೇಶ ಆಗಿರಲಿಲ್ಲ. ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
Hi guys I didn’t kw the meaning about that word wt I used in my last vlog I didn’t mean to hurt anyone and I can never do that to hurt someone I apologise to each n every one I hope you understand love you all
— Yuvika Choudhary (@yuvikachoudhary) May 25, 2021
2009ರಲ್ಲಿ ತೆರೆಗೆ ಬಂದ ‘ಮಳೆಯಲಿ ಜತೆಯಲಿ’ ಸಿನಿಮಾದಲ್ಲಿ ಯುವಿಕಾ ನಟಿಸಿದ್ದರು. ಗಣೇಶ್ ಸಿನಿಮಾದ ಹೀರೋ. ಈ ಚಿತ್ರ ಸಾಧಾರಾಣ ಗೆಲುವು ಕಂಡಿತ್ತು.
ಇದನ್ನೂ ಓದಿ: ಜಾತಿ ನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ ಮುನ್ಮುನ್ ದತ್ತ ವಿರುದ್ಧ ಎಫ್ಐಆರ್ ದಾಖಲು