ಬೋಲ್ಡ್​ ಸೀನ್​ ಇರೋದಲ್ಲ, ತುರುಕೋದು; ಸಿನಿಮಾ ಸೆಲ್​ ಆಗೋಕೆ ಈ ರೀತಿ ಮಾಡ್ತಾರೆ ಎಂದ ‘ನಿನ್ನಿಂದಲೇ’ ಚಿತ್ರದ ನಟಿ

‘555’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ಎರಿಕಾ. 2014ರಲ್ಲಿ ತೆರೆಗೆ ಬಂದ ‘ನಿನ್ನಿಂದಲೇ’ ಸಿನಿಮಾದಲ್ಲಿ ಪುನೀತ್​ ​ರಾಜ್​ಕುಮಾರ್​ಗೆ ಜತೆಯಾಗಿ ಎರಿಕಾ ನಟಿಸಿದ್ದರು.

ಬೋಲ್ಡ್​ ಸೀನ್​ ಇರೋದಲ್ಲ, ತುರುಕೋದು; ಸಿನಿಮಾ ಸೆಲ್​ ಆಗೋಕೆ ಈ ರೀತಿ ಮಾಡ್ತಾರೆ ಎಂದ ‘ನಿನ್ನಿಂದಲೇ’ ಚಿತ್ರದ ನಟಿ
ಎರಿಕಾ
Follow us
ರಾಜೇಶ್ ದುಗ್ಗುಮನೆ
|

Updated on: May 29, 2021 | 7:07 PM

 ಸಿನಿಮಾದಲ್ಲಿ ಬರುವ ಬೋಲ್ಡ್​ ದೃಶ್ಯಗಳನ್ನು ಮಾಡೋಕೆ ಕೆಲ ನಟಿಯರು ಮುಜುಗರಪಟ್ಟುಕೊಳ್ಳುವುದೇ ಇಲ್ಲ. ಆದರೆ, ಕೆಲವರು ಈ ಬಗ್ಗೆ ಅಸಮಾಧಾನ ಹೊರ ಹಾಕುತ್ತಾರೆ. ನಾವು ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿಬಿಡುತ್ತಾರೆ. ಈಗ ಪುನೀತ್​ ನಟನೆಯ ‘ನಿನ್ನಿಂದಲೇ’ ಸಿನಿಮಾ ನಟಿ ಎರಿಕಾ ಫರ್ನಾಂಡಿಸ್​ ಬೋಲ್ಡ್​ ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ.

ನನಗೆ ಬೋಲ್ಡ್​ ದೃಶ್ಯಗಳನ್ನು ಮಾಡೋಕೆ ಇಷ್ಟವಿಲ್ಲ. ನಾನು ಆ ಬಗ್ಗೆ ಮುಕ್ತವಾಗಿಯೇ ಹೇಳಿದ್ದೇನೆ. ಈ ರೀತಿಯ ಕೆಲ ಶೋಗಳಲ್ಲಿ ಪಾಲ್ಗೊಳ್ಳೋಕೆ ಅವಕಾಶ ಬಂದಿತ್ತು. ಆದರೆ, ನಾನು ಅದಕ್ಕೆ ನೋ ಎಂದಿದ್ದೇನೆ. ಜನರು ಶೋ ನೋಡಬೇಕು ಎನ್ನುವ ಕಾರಣಕ್ಕೆ ಈ ರೀತಿಯ ಬೋಲ್ಡ್​ ಕಂಟೆಂಟ್​ಗಳನ್ನು ತುರುಕುತ್ತಾರೆ ಎಂದೆನಿಸುತ್ತದೆ ಎಂದಿದ್ದಾರೆ ಎರಿಕಾ.

ನಾನು ಏನೇ ಮಾಡುತ್ತೀನಿ ಎಂದರೂ ಅದಕ್ಕೊಂದು ಲಾಜಿಕ್​ ಬೇಕು. ಈ ರೀತಿಯ ವಿಚಾರಗಳು ಶೋನಲ್ಲಿ ಬೇಕು ಎಂದು ಹೇಳಿದಾಗ ಅದಕ್ಕೆ ಕಾರಣ ಕೇಳುತ್ತೇನೆ. ಅದಕ್ಕೆ ಅವರಿಂದ ಸರಿಯಾದ ಉತ್ತರ ಸಿಕ್ಕರೆ ನಾನು ಅದನ್ನು ಮಾಡುತ್ತೇನೆ. ಆದರೆ, ಜನರು ನೋಡುತ್ತಾರೆ ಎನ್ನುವ ಕಾರಣಕ್ಕೆ ಬೋಲ್ಡ್​ ಕಂಟೆಂಟ್​​ಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

‘555’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ಎರಿಕಾ. 2014ರಲ್ಲಿ ತೆರೆಗೆ ಬಂದ ‘ನಿನ್ನಿಂದಲೇ’ ಸಿನಿಮಾದಲ್ಲಿ ಪುನೀತ್​ ​ರಾಜ್​ಕುಮಾರ್​ಗೆ ಜತೆಯಾಗಿ ಎರಿಕಾ ನಟಿಸಿದ್ದರು. ವಿಜಯ್​ ಕಿರಗಂದೂರು ನಿರ್ಮಾಣದ ಈ ಸಿನಿಮಾ ಪ್ಲಾಫ್​ ಆಗಿತ್ತು. ‘ಬುಗುರಿ’ ಚಿತ್ರದಲ್ಲಿಯೂ ಎರಿಕಾ ನಟಿಸಿದ್ದರು. 2017ರ ಬಳಿಕ ಅವರು ಚಿತ್ರರಂಗದಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಎರಿಕಾ ಅಲ್ಲದೆ, ಸಾಕಷ್ಟು ನಟಿಯರು ಇದೇ ರೀತಿಯ ಆರೋಪ ಮಾಡಿದ್ದಿದೆ. ಅನೇಕ ನಿರ್ದೇಶಕರು ಸೊಂಟ ಬಳುಕಿಸೋಕೆ ಮಾತ್ರ ಹೀರೋಯಿನ್​ಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದ ಉದಾಹರಣೆ ಕೂಡ ಇದೆ.

ಇದನ್ನೂ ಓದಿ: ‘ಬುಲ್​ಬುಲ್’​ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್

ಮತ್ತೊಂದು ಸಿಡಿ ಪ್ರಕರಣ; ನಟಿ ಜತೆ ಮಾಜಿ ಸಚಿವನ ಲಿವ್​​ ಇನ್​ ರಿಲೇಶನ್​ಶಿಪ್, ಠಾಣೆ ಮೆಟ್ಟಿಲೇರಿದ ಕೇಸ್​

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ