ಜಾತಿ ನಿಂದನೆ ಪ್ರಕರಣ; ಮಳೆಯಲಿ ಜೊತೆಯಲಿ ಸಿನಿಮಾ ನಟಿ ವಿರುದ್ಧ ಎಫ್​ಐಆರ್​

ಯುವಿಕಾ ಮಾತನಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿತ್ತು. ಈ ವಿಡಿಯೋದಲ್ಲಿ ಯುವಿಕಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಜಾತಿ ನಿಂದನೆ ಪ್ರಕರಣ; ಮಳೆಯಲಿ ಜೊತೆಯಲಿ ಸಿನಿಮಾ ನಟಿ ವಿರುದ್ಧ ಎಫ್​ಐಆರ್​
ಯುವಿಕಾ ಚೌಧರಿ
Follow us
ರಾಜೇಶ್ ದುಗ್ಗುಮನೆ
|

Updated on: May 29, 2021 | 8:32 PM

ಜಾತಿ ನಿಂದನೆ ಆರೋಪದ ಮೇಲೆ ಗಣೇಶ್ ನಟನೆಯ ಮಳೆಯಲಿ ಜೊತೆಯಲಿ ಸಿನಿಮಾದ ನಾಯಕಿ ಯುವಿಕಾ ಚೌಧರಿ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರಿಂದ ನಟಿ ಕೋರ್ಟ್​ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಬಂದೊದಗಿದೆ.

ಯುವಿಕಾ ಮಾತನಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿತ್ತು. ಈ ವಿಡಿಯೋದಲ್ಲಿ ಯುವಿಕಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ದಲಿತ ಹಕ್ಕುಗಳ ಕಾರ್ಯಕರ್ತರೊಬ್ಬರು ಕೇಸ್​ ದಾಖಲು ಮಾಡಿದ್ದರು. ಹೀಗಾಗಿ, ಯುವಿಕಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಯುವಿಕಾ ಎಸ್​ಸಿ-ಎಸ್​ಟಿ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಈಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಭರವಸೆ ನಮಗಿದೆ ಎಂದು ದಲಿತ ಹಕ್ಕುಗಳ ಕಾರ್ಯಕರ್ತ ರಜತ್​ ಹೇಳಿದ್ದಾರೆ. ಮೇ 26ರಂದು ದೂರು ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ. ಈ ವಿಚಾರ ವೈರಲ್​ ಆಗುತ್ತಿದ್ದಂತೆ ಯುವಿಕಾ ಟ್ವಿಟರ್​ನಲ್ಲಿ ಕ್ಷಮೆ ಕೇಳಿದ್ದಾರೆ. ಯಾರಿಗೂ ಬೇಸರ ಮಾಡೋದು ನನ್ನ ಉದ್ದೇಶ ಆಗಿರಲಿಲ್ಲ. ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

2009ರಲ್ಲಿ ತೆರೆಗೆ ಬಂದ ‘ಮಳೆಯಲಿ ಜತೆಯಲಿ’ ಸಿನಿಮಾದಲ್ಲಿ ಯುವಿಕಾ ನಟಿಸಿದ್ದರು. ಗಣೇಶ್​ ಸಿನಿಮಾದ ಹೀರೋ. ಈ ಚಿತ್ರ ಸಾಧಾರಾಣ ಗೆಲುವು ಕಂಡಿತ್ತು.

ಇದನ್ನೂ ಓದಿ: ಜಾತಿ ನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ ಮುನ್​ಮುನ್​ ದತ್ತ ವಿರುದ್ಧ ಎಫ್​ಐಆರ್​ ದಾಖಲು