ಸ್ಟಾರ್ ಆಗ್ಬೇಕು ಅನ್ನೋ ಕನಸು ಹೊತ್ತು ಬಾಲಿವುಡ್ ಮೆಟ್ಟಿಲೇರುವವರಿಗೇನು ಕಮ್ಮಿಯಿಲ್ಲ. ಆದ್ರೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋಕೆ ಗಾಢ್ ಫಾದರ್ ಇರ್ಬೇಕು ಅನ್ನೋದನ್ನ ಈ ವರ್ಷವೂ ಸಾಬೀತಾಗಿದೆ. 2019ರಲ್ಲೂ ಬಾಲಿವುಡ್ ದಿಗ್ಗಜರ ಪುತ್ರಿಯರು ಸಹ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರು ಅನ್ನೋದನ್ನ ಇಲ್ಲಿ ತಿಳಿಯಿರಿ.
ಸಾರಾ ಅಲಿಖಾನ್:
ಸಾರಾ ಅಲಿಖಾನ್ ನಟಿಯಾಗ್ಬೇಕು ಅಂತ ಭಯಸಿದಾಗ 96 ಕೆಜಿ ತೂಕವಿದ್ದಳು. ಆಗ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಡಿಸಾರ್ಡರ್ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ರು. ಹೀಗಾಗಿ ದಿನದಿಂದ ದಿನಕ್ಕೆ ದೇಹದ ತೂಕ ಹೆಚ್ಚಾಗುತ್ತಲೇ ಇತ್ತು. ಮಗಳ ಆಸೆಯನ್ನ ಅರಿತಿದ್ದ ತಾಯಿ ಅಮೃತಾ ಸಿಂಗ್ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ರು. ಆಗಲೇ ಸಾರಾ ಅಲಿಖಾನ್ ದೇಹದ ತೂಕ ಇಳಿಸಿಕೊಳ್ಳಲು ಮುಂದಾದ್ರು.
ಕೇವಲ ಒಂದೂವರೆ ವರ್ಷದಲ್ಲಿ ಬರೊಬ್ಬರಿ 30ಕೆಜಿ ತೂಕ ಇಳಿಸಿಕೊಂಡ್ರು. ಒಂದಲ್ಲ ಎರಡು ಸಿನಿಮಾಗಳ ಮೂಲಕ ಬಾಲಿವುಡ್ ಮಂದಿ ಹುಬ್ಬೇರಿಸಿದ್ರು. ಕೇದರನಾಥ್ ಸಿನಿಮಾದ ಹಿಂದೆನೇ ಸ್ಟಾರ್ ನಟ ರಣ್ವೀರ್ ಸಿಂಗ್ ಜೊತೆ ನಟಿಸಿದ ಸಿಂಬಾ ಕೂಡ ರಿಲೀಸ್ ಆಗಿತ್ತು. ರೋಹಿತ್ ಶೆಟ್ಟಿ ನಿರ್ದೇಶಿಸಿದ ಸಿಂಬಾ ಬಾಲಿವುಡ್ ಬಾಕ್ಸಾಫೀಸ್ ಅನ್ನ ಚಿಂದಿ ಮಾಡಿತ್ತು. ಸದ್ಯ ಸಾರಾ ಅಲಿಖಾನ್ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಒಂದು ಸಿನಿಮಾ ಹಾಗೂ ಡೇವಿಡ್ ಧವನ್ ನಿರ್ದೇಶನದ ಕೂಲಿ ನಂಬರ್ 1 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಅನನ್ಯ ಪಾಂಡೆ:
ಮೊದಲ ಸಿನಿಮಾದಲ್ಲಿ ಅನನ್ಯ ಪಾಂಡೇಗೆ ಯುವನಟ ಟೈಗರ್ ಶ್ರಾಫ್ ಸಾಥ್ ನೀಡಿದ್ರು. ಆದ್ರೂ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಗಳಿಕೆಯಲ್ಲಿ ಹಿಂದೆ ಬಿದ್ದಿತ್ತು. ಆದ್ರೆ, ಅನನ್ಯ ಪಾಂಡೆಗೆ ಎರಡನೇ ಸಿನಿಮಾ ಪತಿ ಪತ್ನಿ ಔರ್ ವೋ ಗೆಲುವು ತಂದುಕೊಟ್ಟಿದೆ. ಬಾಲಿವುಡ್ನ ಯೂತ್ ಸ್ಟಾರ್ ಕಾರ್ತಿಕ್ ಆರ್ಯನ್ ಜೊತೆ ಅನನ್ಯ ಅಭಿನಯಿಸಿದ್ದರು. ಅನನ್ಯ ಪಾಂಡೆಯ ಪತಿ ಪತ್ನಿ ಔರ್ ವೋ 2019ರ ಬಾಲಿವುಡ್ನ ಬೆಸ್ಟ್ ಸಿನಿಮಾಗಳಲ್ಲೊಂದು. ಈಗ ಅನನ್ಯ ಪಾಂಡೇ ಮೂರನೇ ಸಿನಿಮಾ ‘ಕಾಲಿ ಪೀಲಿ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಸಾಯಿ ಮಂಜ್ರೇಕರ್:
ತಾರಾ ಸುತಾರಿಯಾ:
ಪ್ರನೂತನ್ ಬೆಹಲ್:
ನೋಟ್ಬುಕ್ ಸಿನಿಮಾ ಮೂಲಕ ಸಲ್ಮಾನ್ ಖಾನ್ ಮತ್ತೊಬ್ಬ ಹೊಸ ಪ್ರತಿಭೆಯನ್ನ ಪರಿಚಯಿಸಿದ್ರು. ಸಲ್ಲು ಗರಡಿಯಲ್ಲಿ ಬೆಳೆದ ಜಾಹೀರ್ ಇಕ್ಬಾಲ್ ಬಾಲಿವುಡ್ಗೆ ನೋಟ್ಬುಕ್ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ರು. ಜಾಹೀರ್, ಸಲ್ಮಾನ್ ಖಾನ್ ಬಾಲ್ಯದ ಗೆಳೆಯ ಈಕ್ಬಾಲ್ ರತ್ನಾಸಿಯ ಪುತ್ರ. ಸ್ವತ: ಸಲ್ಮಾನ್ ಖಾನ್ ಮುಂದೆ ನಿಂತು ನೋಟ್ಬುಕ್ ಸಿನಿಮಾವನ್ನ ಪ್ರಚಾರ ಮಾಡಿದ್ರೂ ಬಾಕ್ಸಾಫೀಸ್ನಲ್ಲಿ ಗೆಲ್ಲಲಿಲ್ಲ. 15 ಕೋಟಿ ವೆಚ್ಚದ ಸಿನಿಮಾ ಕೇವಲ 3 ಕೋಟಿ ಗಳಿಸಿತ್ತು. ಹೀಗಾಗಿ ಚೊಚ್ಚಲ ಸಿನಿಮಾದಲ್ಲೇ ಪ್ರನೂತನ್ ಬೆಹಲ್ ಸೋಲಿನ ಕಹಿ ಉಣ್ಣಬೇಕಾಯ್ತು. ಹೀಗಾಗಿ 2019ರಲ್ಲಿ ಬಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಯುವ ನಟಿಯರಲ್ಲಿ ಕೆಲವ್ರಿಗೆ ಸಿಹಿ ಮತ್ತೆ ಕೆಲವ್ರಿಗೆ ಕಹಿ ಸಿಕ್ಕಂತಾಗಿದೆ.
ಪ್ರಿಯಾ ಪ್ರಕಾಶ್ ವಾರಿಯರ್:
ಒರು ಅಡಾರ್ ಲವ್ ಸಿನಿಮಾ ಮಲಯಾಳಂ ಸೇರಿದಂತೆ ಡಬ್ ಆದ ಮೂರು ಭಾಷೆಗಳಲ್ಲೂ ಚಮತ್ಕಾರ ಮಾಡಲಿಲ್ಲ. ಇಲ್ಲಿಗೆ ಪ್ರಿಯಾ ವಾರಿಯರ್ ಕಥೆ ಮುಗೀತು ಅಂದ್ಕೊಂಡಿದ್ರು. ಆದ್ರೆ ಪ್ರಿಯಾ ಮತ್ತೆ ಶ್ರೀದೇವಿ ಬಂಗ್ಲೆ ಕಥೆಯೊಂದು ಬಾಲಿವುಡ್ಗೆ ಲಗ್ಗೆ ಇಟ್ಟು ಸದ್ದು ಮಾಡಿದ್ಲು. ಸದ್ಯ ಶ್ರೀದೇವಿ ಬಂಗ್ಲೇ ವಿವಾದದ ಸುಳಿಗೆ ಸಿಲುಕಿದೆ.
ಒಟ್ನಲ್ಲಿ 2019 ಕೇವಲ ಸ್ಯಾಂಡಲ್ವುಡ್ನಲ್ಲಷ್ಟೇ ಅಲ್ಲ. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಹೊಸ ಹೊಸ ನಟಿಯರ ಆಗಮನ ಆಗಿತ್ತು. ಬಣ್ಣ ಹಚ್ಚಿ ಅಭಿನಯಿಸಿದ ಬಹುತೇಕ ಎಲ್ಲಾ ನಟಿಯರೂ ಚಿತ್ರರಂಗದಲ್ಲಿ ನೆಲೆಕಂಡುಕೊಂಡಿದ್ದಾರೆ.
Published On - 11:09 am, Mon, 30 December 19