ಸಲಗಕ್ಕೆ ಸಾಥ್ ನೀಡಲಿದ್ದಾರೆ ಸೆಂಚುರಿ ಸ್ಟಾರ್
ದುನಿಯಾ ವಿಜಿ ಅಭಿನಯದ ಸಲಗ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸೌಂಡ್ ಮಾಡ್ತಿದೆ. ವಿಜಿ ನಟಿಸಿ ನಿರ್ದೇಶನ ಮಾಡಿರೋ ಸಲಗ ಸಿನಿಮಾದ ಆಡಿಯೋ ರಿಲೀಸ್ಗೆ ಕೌಂಟ್ ಡೌನ್ ಶುರುವಾಗಿದೆ. ಅಂದ ಹಾಗೆ ಸಲಗ ಸಿನಿಮಾದ ಆಡಿಯೋ ಜನವರಿ ಮೊದಲ ವಾರದಲ್ಲಿಯೇ ರಿಲೀಸ್ ಆಗಲಿದ್ದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರತಮಡಕ್ಕೆ ಸಾಥ್ ನಿಡಲಿದ್ದಾರಂತೆ ದ್ರೋಣನಾದ ಶಿವಣ್ಣನ ರಾಮನ ಜಪ..! ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ ದ್ರೋಣ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಅಂದ ಹಾಗೆ ಶ್ರೀರಾಮನೇ […]
ದುನಿಯಾ ವಿಜಿ ಅಭಿನಯದ ಸಲಗ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸೌಂಡ್ ಮಾಡ್ತಿದೆ. ವಿಜಿ ನಟಿಸಿ ನಿರ್ದೇಶನ ಮಾಡಿರೋ ಸಲಗ ಸಿನಿಮಾದ ಆಡಿಯೋ ರಿಲೀಸ್ಗೆ ಕೌಂಟ್ ಡೌನ್ ಶುರುವಾಗಿದೆ. ಅಂದ ಹಾಗೆ ಸಲಗ ಸಿನಿಮಾದ ಆಡಿಯೋ ಜನವರಿ ಮೊದಲ ವಾರದಲ್ಲಿಯೇ ರಿಲೀಸ್ ಆಗಲಿದ್ದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರತಮಡಕ್ಕೆ ಸಾಥ್ ನಿಡಲಿದ್ದಾರಂತೆ
ದ್ರೋಣನಾದ ಶಿವಣ್ಣನ ರಾಮನ ಜಪ..! ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ ದ್ರೋಣ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಅಂದ ಹಾಗೆ ಶ್ರೀರಾಮನೇ ಜಗದಾ ನಾಯಕ ಅನ್ನೋ ಹಾಡಿನಲ್ಲಿ ಶಿವರಾಜ್ಕುಮಾರ್ ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡ್ತಿದ್ದಾರೆ. ಸದ್ಯ ಈ ಸಾಂಗ್ ಝಲಕ್ ನೋಡಿದವರಿಗೆ ಸಿನಿಮಾದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.
ವಿಭಿನ್ನ ಪಾತ್ರಕ್ಕಾಗಿ ಸನಾ ಹುಡುಕಾಟ..! ಒಡೆಯ ಸಿನಿಮಾ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ನಟಿ ಸನಾ ತಿಮ್ಮಯ್ಯ ಸದ್ಯ ಎರಡನೇ ಸಿನಿಮಾಗಾಗಿ ತಯಾರಾಗ್ತಿದ್ದಾರೆ. ಅಂದ ಹಾಗೆ ಒಡೆಯ ಸಿನಿಮಾದಲ್ಲಿ ನಟಿಸಿರೋದು ನನ್ನ ಅದೃಷ್ಟ ಸದ್ಯ ಎರಡನೇ ಸಿನಿಮಾದಲ್ಲಿ ನಟಿಸೋಕೆ ಹಲವು ಕಥೆ ಕೇಳಿದ್ದೇನೆ. ಆದ್ರೆ ವಿಭಿನ್ನ ಪಾತ್ರದ ಹುಡುಕಾಟದಲ್ಲಿದ್ದೇನೆ ಹಾಗಾಗಿ ಸದ್ಯ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ ಎಂದಿದ್ದಾರೆ.
IPL ಬೆಟ್ಟಿಂಗ್ ಕಥೆ ಹೇಳೋ ಸಿನಿಮಾ..! ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಕಮಾಲ್ ಮಾಡಿದ್ದ ನಿರ್ದೇಶಕ ಕುಮಾರ್ ಈಗ ಕ್ರಿಟಿಕಲ್ ಕೀರ್ತನೆಗಳು ಅನ್ನೋ ವಿಭಿನ್ನ ಟೈಟಲ್ನಲ್ಲಿ ಸಿನಿಮಾ ಮಾಡ್ತಿದ್ದಾರೆ. ಅಂದ ಹಾಗೆ ಕ್ರಿಟಿಕಲ್ ಕೀರ್ತನೆಗಳು ಅನ್ನೋದೊಂದು ಐಪಿಎಲ್ ಬೆಟ್ಟಿಂಗ್ ಸುತ್ತ ನಡೆಯೋ ಕಥೆಯಾಗಿದೆ. ತಬಲಾ ನಾಣಿ, ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವು ಕಲಾವಿದರು ನಟಿಸ್ತಿದ್ದಾರೆ.
Published On - 12:58 pm, Sun, 29 December 19