2019 ರ ಹವಾ ಕ್ರಿಯೇಟ್ ಮಾಡಿದ ಸ್ಟಾರ್ಸ್ ಚಾಲೆಂಜ್

  • TV9 Web Team
  • Published On - 18:54 PM, 30 Dec 2019
2019 ರ ಹವಾ ಕ್ರಿಯೇಟ್ ಮಾಡಿದ ಸ್ಟಾರ್ಸ್ ಚಾಲೆಂಜ್

ಅಕ್ಷಯ್ ಕುಮಾರ್ ಅಭಿನಯದ ಹೌಸ್ ಫುಲ್ 4 ಚಿತ್ರದ ಬಾಲ ಬಾಲ ಶೈತಾನ್ ಕಾ ಸಾಲ…ಹಾಡಿಗೆ ಹಾಕಿದ ಭರ್ಜರಿ ಸ್ಟೆಪ್ ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಲಿವುಡ್​ನ ಕೆಲ ಸ್ಟಾರ್ಸ್ ಈ ಬಾಲ ಚಾಂಲೆಂಜ್​ನ್ನು ತೆಗೆದುಕೊಂಡಿದ್ದಾರೆ ಅಂತ ಇಲ್ಲಿ ಓದಿ

ಮೊದಲಿಗೆ ವರುಣ್ ಧವನ್ ಹಾಗೂ ಡ್ಯಾಸ್ಸ್ ಕೊರಿಯೋಗ್ರಾಫರ್ ಗಣೇಶ್ ಅಚಾರ್ಯ, ರಣವೀರ್ ಸಿಂಗ್, ಹಾಗೆ ಅಕ್ಷಯ್ ಕುಮಾರ್ ಜೊತೆ ಕರೀನ ಕಪೂರ್ ಹಾಗೂ ಕೈರಾ ಅಡ್ವಾಣಿ, ಇನ್ನು ಆಯುಶ್ ಮಾನ್ ಕುರಾನ, ಅರ್ಜುನ್ ಕಪೂರ್ ಜೊತೆ ಮನೀಷ್ ಪೌಲ್ ಬಾಲ ಚಾಲೆಂಜ್ ಗೆ ಭರ್ಜರಿ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ.

ಧೀಮೆ ಧೀಮೆ:
ಟೋನೊ ಕಕ್ಕರ್ ಹಾಗೂ ನೇಹಾ ಕಕ್ಕರ್ ಹಾಡಿರುವ ಪತ್ನಿ ಪತಿ ಔರ್ ಹು? ಚಿತ್ರದ ಧೀಮೆ ಧೀಮೆ ಹಾಡು ಬಹಳಷ್ಟು ಸಂಚಲನ ಮೂಡಿಸಿತ್ತು. ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮಾಡಿರುವ ಡ್ಯಾನ್ಸ್ ಎಲ್ಲರಿಗೂ ಕಿಕ್ ಕೊಟ್ಟಿತ್ತು. ಈ ಸ್ಟೆಪ್​ನ್ನು ದೀಪಿಕಾ ಪಡುಕೋಣೆ ಸ್ವತ್ಃ ಕಾರ್ತಿಕ್ ಆರ್ಯನ್ ಅವರೋಂದಿಗೆ ಕಲಿತು ಧೀಮೆ ಧೀಮೆ ಚಾಲೆಂಜ್ ಸ್ವೀಕರಿಸಿದ್ರು, ಇನ್ನು ಹೀಗೆ ಬಹಳಷ್ಟು ಡ್ಯಾಸ್ಸರ್ಸ್ ಹುಚ್ಚೆದ್ದು ಕುಣಿಯುವಂತೆ ಮೋಡಿ ಮಾಡಿತ್ತು. ಈ ಹಾಡಿನ ಜೊತೆಗಿನ ಡ್ಯಾನ್ಸ್

ಬಾಟಲ್ ಕ್ಯಾಪ್ ಚಾಲೆಂಜ್:
ಬಾಟಲ್ ಕ್ಯಾಪ್ ಚಾಲೆಂಜ್ ಅಂತೂ ಜಗತ್ತಿನಾಂದ್ಯತ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಲಿವುಡ್ ಬಾಲುವುಡ್ ಸೌಂಡ್ ಮಾಡಿದ್ದ ಈ ಚಾಲೆಂಜ್ ಕ್ರೇಜ್ ಸಿಕ್ಕಾಪಟ್ಟೆ ಹಬ್ಬಿತ್ತು. ಸ್ಟಾರ್ ನಟ ಗೊಂವಿದ, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಹಾಗೂ ಹಾಲಿವುಡ್ ನಟ ಜೇಸನ್ ಸ್ಟಾತನ್ ಕೂಡ ಈ ಚಾಲೆಂಜ್ ಸ್ವೀಕರಿಸಿ ಕುಷಿ ಪಟ್ಟಿದ್ರು.

ಅದರಲ್ಲೂ ಕನ್ನಡದ ಸ್ಟಾರ್ ನಟರಾದಂತ ಪುನೀತ್ ರಾಜ್ ಕುಮಾರ್ , ಶಿವಣ್ಣ , ರಚಿತ ರಾಮ್ , ಅರ್ಜುನ್ ಸರ್ಜ, ಗಣೇಶ್ ಈ ಜಾಲೆಂಜ್ ಸ್ವೀಕರಿಸಿದ್ರು, ಇನ್ನು ನಟಿ ಹರಿಪ್ರೀಯಾ ಮತ್ತು ಹರ್ಷಿಕಾ ಪೂಣಚ್ಚ ಕೊಂಚ ವಿಭಿನ್ನ ರೀತಿಯಲ್ಲಿ ಈ ಚಾಲೆಂಜ್ ಟ್ರೈ ಮಾಡಿ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ್ರು.

ಬಕೆಟ್ ಚಾಲೆಂಜ್:
ಟಾಲಿವುಡ್​ನ ಸ್ಟಾರ್ ನಟಿ ಸಮಂತಾ ಇತ್ತಿಚೆಗೆ ಒಂದು ಬಕೆಟ್ ಚಾಲೆಂಜ್ ನೀಡಿದ್ರು. ಇದು ಯಾವುದೇ ಮನೋರಂಜನೆಯಿಂದ ಸ್ಪೂರ್ತಿಗೊಂಡ ಚಾಲೆಂಜ್ ಅಲ್ಲ. ಬದಲಾಗಿ ದೇಶದಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ‘ಒನ್ ಬಕೆಟ್’ ಚಾಲೆಂಜ್ ಸಮಂತಾ ಹಾಕಿದ್ರು, ಈ ಕುರಿತು ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ‘ ಮುಖ ತೊಳೆಯುವಾಗ, ವಾಹನಗಳನ್ನು ತೊಳೆಯುವಾಗ ಅಥವಾ ಟ್ಯಾಪ್ ಆನ್ ಮಾಡಿದಾಗ ಕೇವಲ ಒಂದು ಬಕೆಟ್ ನೀರು ಮಾತ್ರ ಉಪಯೋಗಿಸಿ, ಹೆಚ್ಚು ನೀರಿನ ಬಳಕೆ ಬೇಡ’ ಎಂದು ಚಾಲೆಂಜ್ ಹಾಕಿದ್ರು. ಇದಕ್ಕೆ ಸಾಕ್ಟಷ್ಟು ಪ್ರತಿಕ್ರಿಯೆ ಸಿಕ್ಕಿದ್ದು, ಜನರು ಈ ಚಾಲೆಂಜ್ ಸ್ವೀಕರಿಸಿದ್ದಾರೆ.

ಕವನ ವಾಚನ ಚಾಲೆಂಜ್:
ಆದ್ರೆ ಇಲ್ಲಿ ಕೊಂಚ ವಿಭಿನ್ನ ಚಾಲೆಂಜ್​ನ್ನ ಸ್ವೀಕರಿಸಲಾಗಿದೆ. ಈ ಚಾಲೆಂಜ್​ನ್ನ ಮೊದಲಿಗೆ ರಮೇಶ್ ಅವರು ಹಾಕಿದ್ದು, ಸ್ಯಾಂಡವುಡ್​ನ ಬಹುತೇಕ್ ಸ್ಟಾರ್ಸ್ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಈ ಚಾಲೆಂಜ್​ನಲ್ಲಿ ತಮಗಿಷ್ಟದ ಕವನವವನ್ನ ವಾಚನ ಮಾಡುವ ಚಾಲೆಂಜ್ ಸ್ವೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡಲಾಗಿದೆ. ಈ ಚಾಲೆಂಜ್​ನ್ನ ರಮೇಶ್ ಅರವಿಂದ್ ಸೇರಿದಂತೆ ನಟ ಯಶ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕ್ರಿಕೆಟ್ ಆಟಗಾಟರಾದ ಅನಿಲ್ ಕುಂಬ್ಳೆಯವರು ವಿಜಯ್ ಪ್ರಕಾಶ್ ಅವರಿಗೆ ಈ ಚಾಲೆಂಜ್​ನ ಹಾಕಿದ್ದಾರೆ. ಅದನ್ನ ಗಾಯಕ ವಿಜಯ್ ಪ್ರಕಾಶ್ ಅವರು ಕವನವನ್ನ ಹಾಡಿ ಹೇಳುವ ಮೂಲಕ ಬಹಳ ಅದ್ಬುತವಾಗಿ ಸ್ವೀಕರಿಸಿದ್ದಾರೆ.

ಇನ್ನು ಕಿಕೀ ಚಾಲೆಂಜ್ ಅಂತಾ ಡೇಂಜರ್ ಚಾಲೆಂಜ್​ಗಳನ್ನ ಸ್ವೀಕರಿಸಿ ಬಹಳಷ್ಟು ಜನ ಪೇಚೆಗೆ ಸಿಲುಕಿದ ಘಟನೆಯು ನಡೆದಿದೆ.