ಒಂಟೆ ಮೇಲೆಯೇ ಫೈಟ್! ಸ್ಯಾಂಡಲ್​ವುಡ್ ಮೊದಲ ಪ್ರಯತ್ನ.. ಇದು ವಿಕ್ರಮ್​ನ ತ್ರಿವಿಕ್ರಮ!

ಒಂಟೆ ಮೇಲೆಯೇ ಫೈಟ್! ಸ್ಯಾಂಡಲ್​ವುಡ್ ಮೊದಲ ಪ್ರಯತ್ನ.. ಇದು ವಿಕ್ರಮ್​ನ ತ್ರಿವಿಕ್ರಮ!

2020ಕ್ಕೆ ಸ್ಯಾಂಡಲ್​ವುಡ್​​ನಲ್ಲಿ ತೆರೆ ಕಾಣಲಿರೋ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೊ ಸಿನಿಮಾಗಳ ಪೈಕಿ ಕ್ರೇಜಿಸ್ಟಾರ್​ ರವಿಚಂದ್ರನ್ ಅವರ ಪುತ್ರ ವಿಕ್ರಮ್​ ರವಿಚಂದ್ರನ್​ ಅಭಿನಯದ ತ್ರಿವಿಕ್ರಮ ಸಿನಿಮಾ ಕೂಡ ಒಂದು. ರೋಸ್ , ಮಾಸ್ ಲೀಡರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ ಸಹಾನಾ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬರ್ತಿರೊ ಚಿತ್ರಕ್ಕೆ ಉದ್ಯಮಿ ಸೋಮಣ್ಣ (ರಾಮ್ಕೋ) ಬಂಡವಾಳ ಹಾಕಿದ್ದಾರೆ. ಈಗಾಗಲೇ ಹಲವು ವಿಶೇಷತೆಗಳಿಂದ ಸ್ಯಾಂಡಲ್ವುಡ್​ ಮಾತ್ರವಲ್ಲ ಇತರ ಚಿತ್ರರಂಗಗಳ ಗಮನ ಸೆಳೆತ್ತಿರೊ ಚಿತ್ರದ ಪ್ರತಿ ಸಿಕ್ವೀಲ್​ ಶೂಟಿಂಗ್​ನಲ್ಲೂ ಹೊಸತನ, ಹೊಸ […]

sadhu srinath

|

Dec 31, 2019 | 11:55 AM

2020ಕ್ಕೆ ಸ್ಯಾಂಡಲ್​ವುಡ್​​ನಲ್ಲಿ ತೆರೆ ಕಾಣಲಿರೋ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೊ ಸಿನಿಮಾಗಳ ಪೈಕಿ ಕ್ರೇಜಿಸ್ಟಾರ್​ ರವಿಚಂದ್ರನ್ ಅವರ ಪುತ್ರ ವಿಕ್ರಮ್​ ರವಿಚಂದ್ರನ್​ ಅಭಿನಯದ ತ್ರಿವಿಕ್ರಮ ಸಿನಿಮಾ ಕೂಡ ಒಂದು. ರೋಸ್ , ಮಾಸ್ ಲೀಡರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ ಸಹಾನಾ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬರ್ತಿರೊ ಚಿತ್ರಕ್ಕೆ ಉದ್ಯಮಿ ಸೋಮಣ್ಣ (ರಾಮ್ಕೋ) ಬಂಡವಾಳ ಹಾಕಿದ್ದಾರೆ. ಈಗಾಗಲೇ ಹಲವು ವಿಶೇಷತೆಗಳಿಂದ ಸ್ಯಾಂಡಲ್ವುಡ್​ ಮಾತ್ರವಲ್ಲ ಇತರ ಚಿತ್ರರಂಗಗಳ ಗಮನ ಸೆಳೆತ್ತಿರೊ ಚಿತ್ರದ ಪ್ರತಿ ಸಿಕ್ವೀಲ್​ ಶೂಟಿಂಗ್​ನಲ್ಲೂ ಹೊಸತನ, ಹೊಸ ಪ್ರಯತ್ನವೇ ಈ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಚಿತ್ರದಲ್ಲಿ ಮಾಡಿರೋ ಸಾಹಸದ ಚಿತ್ರೀಕರಣ. ಸೌತ್ ಇಂಡಿಯಾದ ಮೊಸ್ಟ್ ಹ್ಯಾಪನಿಂಗ್ ಫೈಟ್ ಮಾಸ್ಟರ್ ಗಳು ಸಾಹಸ ದೃಶ್ಯಗಳನ್ನ ಸೆರೆ ಹಿಡಿಯುತ್ತಿದ್ದಾರೆ.

ಒಂಟೆ ಮೇಲೆಯೇ ನಡೆಯುತ್ತದೆ  ಥ್ರಿಲ್ಲಿಂಗ್​ ಫೈಟ್​ ಈ ಹಿಂದೆ ಚಿತ್ರಗಳಲ್ಲಿ ಸಾಂಗ್​ಗಳ ಮೆಕಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿತ್ತು. ಆದ್ರೆ ಬದಲಾದ ಟ್ರೆಂಡ್​ನಲ್ಲಿ ಸಿನಿಮಾಗಳ ಸಾಹಸ ದೃಶ್ಯಗಳಿಗೆ, ಕ್ಲೈಮ್ಯಾಕ್ಸ್​ ಸೀನ್​ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇನ್ನು ತ್ರಿವಿಕ್ರಮ ಸಿನಿಮಾದಲ್ಲಿ ಸೌತ್​ ಇಂಡಿಯಾ ಸಿನಿಮಾಗಳಲ್ಲೇ ನೀವು ನೋಡಿರದ ವಿಶೇಷ ದೃಶ್ಯಗಳನ್ನ ನೋಡಿ ಥ್ರಿಲ್​ ಆಗಬಹುದು. ಅದುವೇ ಒಂಟೆ ಮೇಲಿನ ಫೈಟ್​ ಹಾಗೂ ಒಂಟೆಗಳ ಮೂಲಕ ನಡೆಯೋ ಚೇಸಿಂಗ್​ ಸೀನ್​. ಬೈಕ್​ಗಳ ಮೇಲೆ ನೀರಿನ ಒಳಗೆ, ಆಕಾಶದಲ್ಲಿ, ಕುದುರೆ, ಆನೆಗಳ ಮೇಲೆ ಸಮುದ್ರದಲ್ಲಿ ಹೀಗೆ ನಾನಾ ಬಗೆಯ ಫೈಟ್​ ಸೀನ್​ಗಳನ್ನ ನೀವು ನೋಡಿಯೇ ಇರ್ತೀರಾ.

‘ತ್ರಿವಿಕ್ರಮ’ನ ಸಾಹಸಕ್ಕೆ ಫೈಟ್​ ಮಾಸ್ಟರ್ಸ್​ ಯಾರ್​ ಯಾರ್​ ಗೊತ್ತಾ..?

ಆದ್ರೆ ಇದೇ ಮೊದಲ ಬಾರಿಗೆ ಒಂಟೆಗಳ ಮೇಲೆ ಫೈಟ್​ ಸೀನ್​ ಶೂಟ್​ ಮಾಡಲಾಗಿದೆ, ಅಷ್ಟೇ ಅಲ್ಲ ಒಂಟೆಗಳನ್ನ ಬಳಸಿ ಚೇಸಿಂಗ್​ ಸೀನ್​ ಕೂಡ ಶೂಟ್​ ಮಾಡಲಾಗಿದೆ. ಸೈರಾ, ದಬಾಂಗ್​, ಬಾಡಿಗಾಡ್​, ಪೊಕಿರಿ ಸೇರಿದಂತೆ ಹಲವು ಸೂಪರ್​ ಹಿಟ್​ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರೋ ವಿಜಿ ಮಾಸ್ಟರ್,​ ಒಂಟೆ ಮೇಲಿನ ಸಾಹಸ ದೃಶ್ಯಗಳ ನಿರ್ದೇಶನ ಮಾಡಿದ್ದಾರೆ. ಅಭ್ಯಾಸ ಇಲ್ಲದವರು ಒಂಟೆ ಮೇಲೆ ಕೂತು ಒಂದು ರೌಂಡ್​ ಹಾಕೋದೆ ಕಷ್ಟ ಅಂಥದ್ರಲ್ಲಿ ನಟ ವಿಕ್ರಮ್​ ಹಾಗೂ ಖಳ ನಟರು ಒಂಟೆಗಳ ಮೇಲೆ ಗಂಟೆಗಟ್ಟಲೆ ಕೂತು ಸಾಹಸ ಮಾಡಿರೋದು ಅವರ ಡೆಡಿಕೇಶನ್​ಗೆ ಹಿಡಿದ ಕೈಗನ್ನಡಿ.

‘ಕ್ರೇಜ್’ ಹುಟ್ಟಿಸ್ತಿದೆ ವಿಕ್ರಮ್ ರವಿಚಂದ್ರನ್ ಚೊಚ್ಚಲ ಚಿತ್ರ ತ್ರಿವಿಕ್ರಮ!

ಒಂಟೆಗಳಿಗೆ ತೊಂದರೆಯಾಗದಂತೆ ಆರೈಕೆ ಮಾಡಿ ಪ್ರಾಣಿ-ಪ್ರೀತಿ ಮೆರೆದ ಚಿತ್ರತಂಡ ಇನ್ನು ಈ ದೃಶ್ಯಗಳ ಶೂಟಿಂಗ್​ಗಾಗಿಯೇ ಸುಮಾರು 15 ದಿನ, ಚಿತ್ರದ ನಟಿ ಆಕಾಂಕ್ಷ ಶರ್ಮಾ, ಹಾಸ್ಯ ನಟ ಸಾಧು ಕೋಕಿಲಾ, ಬಾಲಿವುಡ್​ ಖ್ಯಾತ ನಟ ರೋಹಿತ್​ ರಾಯ್​ ಸೇರಿದಂತೆ ಇಡೀ ಚಿತ್ರತಂಡ ರಾಜಸ್ತಾನದಲ್ಲಿ ಬೀಡು ಬಿಟ್ಟಿತ್ತು. ಇನ್ನು ಚಿತ್ರದ ಶೂಟಿಂಗ್​ ವೇಳೆ ಒಂಟೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಾಕಷ್ಟು ಆರೈಕೆ ಮಾಡಿ ಪ್ರಾಣಿ ಪ್ರೀತಿಯನ್ನ ಚಿತ್ರತಂಡ ಮೆರೆದಿದೆ, ಅದಕ್ಕೆ ತಕ್ಕಂತೆ ಒಂಟೆಗಳು ಕೂಡ ಶೂಟಿಂಗ್​ ಗೆ ಸಹಕರಿಸಿವೆ. ಓಟ್ಟಾರೆ ಈ ಥ್ರಿಲ್ಲಿಂಗ್​ ಫೈಟಿಂಗ್​ ಸೀನ್​ ನೋಡ ಬೇಕಾದ್ರೆ ತ್ರಿವಿಕ್ರಮ ತೆರೆಗೆ ಬರೋವರೆಗೂ ಕಾಯಲೇ ಬೇಕು.

Follow us on

Related Stories

Most Read Stories

Click on your DTH Provider to Add TV9 Kannada