‘ಗಂಧದಗುಡಿ’ ಸಾಕ್ಷ್ಯ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದು ಪುನೀತ್ ರಾಜ್ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ಇದನ್ನು ಜನರ ಮುಂದಿಡುವ ಮೊದಲೇ ಪುನೀತ್ (Puneeth Rajkumar) ಅವರು ಇಹಲೋಕ ತ್ಯಜಿಸಿದರು. ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಸಾಕ್ಷ್ಯಚಿತ್ರವನ್ನು ಜನರ ಮುಂದೆ ಇಡುತ್ತಿದ್ದಾರೆ. ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿ ಒಂದು ವರ್ಷ ಆಗಲಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ಥಿಯೇಟರ್ನಲ್ಲೇ ರಿಲೀಸ್ ಆಗಲಿದೆ. ಸದ್ಯ ಟ್ರೇಲರ್ ಬಿಡುಗಡೆಗೆ ದಿನಾಂಕ ಅನೌನ್ಸ್ ಮಾಡಲಾಗಿದೆ. ಅಕ್ಟೋಬರ್ 9ರಂದು ಬೆಳಗ್ಗೆ 10:19ಕ್ಕೆ ಪಿಆರ್ಕೆ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ‘ಗಂಧದಗುಡಿ’ಯ ಟ್ರೇಲರ್ ರಿಲೀಸ್ ಆಗಲಿದೆ.
ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಹೊಸ ಹೊಸ ಆಲೋಚನೆಗಳೊಂದಿಗೆ ಪ್ರೇಕ್ಷಕರ ಎದುರು ಬರುವ ಉದ್ದೇಶ ಇಟ್ಟುಕೊಂಡಿದ್ದರು. ‘ಪಿಆರ್ಕೆ ಪ್ರೊಡಕ್ಷನ್ಸ್’ ಸ್ಥಾಪಿಸಿ ಹೊಸಬರಿಗೆ ಅವಕಾಶ ನೀಡುವ ಕೆಲಸವೂ ನಡೆಯುತ್ತಿತ್ತು. ಇದೇ ನಿರ್ಮಾಣ ಸಂಸ್ಥೆ ಅಡಿಯಲ್ಲಿ ‘ಗಂಧದ ಗುಡಿ’ ಸಾಕ್ಷ್ಯ ಚಿತ್ರ ನಿರ್ಮಾಣ ಆಗುತ್ತಿತ್ತು. ಇದರ ಕೆಲಸಗಳು ಬಾಕಿ ಇರುವಾಗಲೇ ಅವರು ಇಹಲೋಕ ತ್ಯಜಿಸಿದರು. ಈಗ ಈ ಡಾಕ್ಯುಮೆಂಟರಿ ರಿಲೀಸ್ಗೆ ರೆಡಿ ಇದೆ.
ಗಣೇಶ ಚತುರ್ಥಿ ಅಂಗವಾಗಿ ‘ಗಂಧದ ಗುಡಿ’ಯ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಪುನೀತ್ ಅವರು ಆನೆಯ ಜತೆ ನಿಂತಿದ್ದರು. ‘ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಸಂದರ್ಭದಲ್ಲಿ, ಭಗವಂತನು ನಿಮಗೆಲ್ಲರಿಗೂ ಸುಖ ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ಈ ಪೋಸ್ಟರ್ಗೆ ಕ್ಯಾಪ್ಶನ್ ನೀಡಲಾಗಿತ್ತು.
ಒಂದು ಅದ್ಬುತ ಪಯಣಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದೆ…#ಗಂಧದಗುಡಿ ಟ್ರೈಲರ್ | 9ನೇ ಅಕ್ಟೋಬರ್ 2022 ಬೆಳಗ್ಗೆ 10:19:10 ಕ್ಕೆ @PRKAudio ಯೌಟ್ಯೂಬ್ ಚಾನೆಲ್ ನಲ್ಲಿ. pic.twitter.com/698PUPV32a
— Ashwini Puneeth Rajkumar (@Ashwini_PRK) October 6, 2022
ಇದನ್ನೂ ಓದಿ: ಹೊಸ ಪೋಸ್ಟರ್ ಮೂಲಕ ‘ಗಂಧದ ಗುಡಿ’ ರಿಲೀಸ್ ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
2021ರ ಅಕ್ಟೋಬರ್ 29ರಂದು ಅಪ್ಪು ನಿಧನ ಹೊಂದಿದರು. ಈ ಕಾರಣಕ್ಕೆ ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ಯನ್ನು ರಿಲೀಸ್ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಡಾಕ್ಯುಮೆಂಟರಿಗಳು ಒಟಿಟಿ ಹಾಗೂ ಯೂಟ್ಯೂಬ್ಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ‘ಗಂಧದ ಗುಡಿ’ಯನ್ನು ಪುನೀತ್ ಅವರ ಆಸೆಯಂತೆ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಂದ ಉತ್ತಮ ಬೆಂಬಲ ಸಿಗುವ ನಿರೀಕ್ಷೆ ಇದೆ.