ಗಡ್ಡ ಬೆಳೆಸಿದ್ರೆ ಸಾಲದು, ಮೆದುಳಲ್ಲಿ ಬುದ್ಧೀನು ಬೆಳೆಸಿರಬೇಕು; ಶಮಂತ್​​ಗೆ ನೇರವಾಗಿ ಹೇಳಿದ ಗೀತಾ

|

Updated on: Mar 20, 2021 | 4:18 PM

ಬಿಗ್ ಬಾಸ್​ ಮನೆಯಲ್ಲಿ ಶಮಂತ್​ ಕಳಪೆ ಪ್ರದರ್ಶನದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಈಗ ಗೀತಾ ಕೂಡ ಶಮಂತ್​ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಗಡ್ಡ ಬೆಳೆಸಿದ್ರೆ ಸಾಲದು, ಮೆದುಳಲ್ಲಿ ಬುದ್ಧೀನು ಬೆಳೆಸಿರಬೇಕು; ಶಮಂತ್​​ಗೆ ನೇರವಾಗಿ ಹೇಳಿದ ಗೀತಾ
ಬ್ರೋ ಗೌಡ- ಗೀತಾ
Follow us on

ಬಿಗ್​ ಬಾಸ್​ ಮನೆ ಸೇರಿದ್ದ ಅಭ್ಯರ್ಥಿಗಳ ಪೈಕಿ ಇಬ್ಬರು ಎಲಿಮಿನೇಟ್​ ಆಗಿದ್ದಾರೆ. ಬಾಕಿ ಉಳಿದ 15 ಜನರ ಪೈಕಿ ಇಂದು ಒಬ್ಬರು ಬಿಗ್​ ಬಾಸ್​ ಮನೆಯಿಂದ ಹೊರ ಬೀಳುತ್ತಿದ್ದಾರೆ. ಈ ಮಧ್ಯೆ ಮನೆಯಲ್ಲಿರುವ ಶಮಂತ್​ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅವರು ಮನೆಯಲ್ಲಿ ಸರಿಯಾಗಿ ಆಟವಾಡುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು, ಅವರು ಸರಿಯಾಗಿ ಬೆರೆಯುತ್ತಿಲ್ಲ ಎನ್ನುವ ಆರೋಪ ಮಾಡುತ್ತಿದ್ದಾರೆ. ಈ ಮಧ್ಯೆ ಗೀತಾ ಭಾರತಿ ಭಟ್​ ಶಮಂತ್​ಗೆ ಟಾಂಗ್​ ನೀಡಿದ್ದಾರೆ. ಗಡ್ಡ ಬೆಳೆಸಿದ್ರೆ ಸಾಲದು ಮೆದುಳಲ್ಲಿ ಬುದ್ಧೀನು ಬೆಳೆದಿರಬೇಕು ಎಂದು ನೇರವಾಗಿ ಹೇಳಿದ್ದಾರೆ.

ಬಿಗ್ ಬಾಸ್​ ಮನೆಯಲ್ಲಿ ಶಮಂತ್​ ಕಳಪೆ ಪ್ರದರ್ಶನದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಶಮಂತ್​ಗೆ ಏನೂ ಅರ್ಥವಾಗುವುದೇ ಇಲ್ಲ. ಅವನು ಬಿಗ್​ ಬಾಸ್​ ಮನೆಗೆ ಬಂದಿದ್ದಾನೆ ಎನ್ನುವುದು ಅರ್ಥವಾಗಿಲ್ಲ ಅನಿಸುತ್ತದೆ ಎಂದು ದಿವ್ಯಾ ಸುರೇಶ್ ಶುಕ್ರವಾರ (ಮಾರ್ಚ್​​ 19) ಹೇಳಿದ್ದರು​. ಈ ವೇಳೆ ಅಲ್ಲಿದ್ದ ರಾಜೀವ್​, ಶಮಂತ್​ಗೆ ಎರಡು ವಾರಗಳ ಕಾಲ ಕ್ಯಾಪ್ಟನ್ಸಿ ನೀಡಿದ್ದಕ್ಕೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು ಎಂದು ಮರುಗಿದ್ದರು.

ಈಗ ಗೀತಾ ಕೂಡ ಶಮಂತ್​ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಬಿಗ್​ ಬಾಸ್​ ಮನೆ ಸೇರಿದಾಗಿನಿಂದಲೂ ಗೀತಾ ಹಾಗೂ ಶಮಂತ್​ ಒಟ್ಟಾಗಿದ್ದರು. ಆರಂಭದ ದಿನಗಳಲ್ಲಿ ಶಮಂತ್​ ಎಲ್ಲಾ ಗುಟ್ಟುಗಳನ್ನು ಗೀತಾ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ, ಶಮಂತ್​ ಒಬ್ಬರ ಹತ್ತಿರ ಒಂದೊಂದು ರೀತಿ ಮಾತನಾಡುತ್ತಾನೆ ಎನ್ನುವ ಬೇಸರ ಗೀತಾಗೆ ಇದೆ.
ಈ ಬಗ್ಗೆ ಅವರು ನೇರವಾಗಿ ಶಮಂತ್​ ಬಳಿಯೇ ಹೇಳಿಕೊಂಡಿದ್ದಾರೆ. ಶಮಂತ್​ ನೀನು ನಿನಗೆ ಬೇಕಾದಾಗ ಅಕ್ಕಾ ಅಕ್ಕಾ ಎಂದು ಕರೆಯುತ್ತೀಯಾ. ಆದರೆ, ನಿನಗೆ ಬೇಡ ಎಂದಾಗ ಬಿಗ್​ ಬಾಸ್​ ಬಳಿ ಹೋಗಿ ನನ್ನ ಬಗ್ಗೆಯೇ ದೂರು ನೀಡುತ್ತೀಯಾ ಎಂದಿದ್ದಾರೆ ಗೀತಾ. ಇದಕ್ಕೆ ಶಮಂತ್​ ಇಲ್ಲಾ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನನ್ನ ಬಗ್ಗೆ ಏನನ್ನಿಸುತ್ತದೆ ಎಂಬುದನ್ನು ಹೇಳಿ ಎಂದು ಕೋರಿದ್ದಾರೆ.

ಆಗ ನಗುನಗುತ್ತಲೇ ಗೀತಾ ತನಗೆ ಏನನ್ನಿಸಿತೋ ಅದನ್ನು ಹೇಳಿದ್ದಾರೆ. ತಲೇಲಿ ಕೂದಲು ಬೆಳೆದಿದೆ. ಆದರೆ, ತಲೆ ಒಳಗಡೆ ಬ್ರೇನ್​ ಬೆಳೆದಿಲ್ಲ. ಗಡ್ಡ ಬೆಳೆಸಿದ್ರೆ ಸಾಲದು. ಮೆದುಳಲ್ಲಿ ಬುದ್ಧೀನೂ ಬೆಳೆಸಿರಬೇಕು. ಒಟ್ನಲ್ಲಿ ನೀನು ಚೈಲ್ಡ್​ ಎಂದಿದ್ದಾರೆ.

ಇದನ್ನೂ ಓದಿ: ಶಮಂತ್​ಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ನನಗೆ ನಾನೇ ಚಪ್ಪಲ್ಲಿಯಲ್ಲಿ ಹೊಡೆದುಕೊಳ್ಳಬೇಕು 

Published On - 4:12 pm, Sat, 20 March 21