
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಅವರು ಮಿಂಚುತ್ತಿದ್ದಾರೆ. ಅವರು ಒಳಗೆ ಉತ್ತಮ ಆಟ ಆಡುತ್ತಿರುವಾಗಲೇ ಹೊರಗೆ ಒಂದು ವಿಶೇಷ ವಿಚಾರ ರಿವೀಲ್ ಆಗಿದೆ. ಅವರು ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲಿ ನಟಿಸಿರುವ ಬಗ್ಗೆ ಅಪ್ಡೇಟ್ ನೀಡಲಾಗಿದೆ. ಜೊತೆಗೆ ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಈ ಪೋಸ್ಟರ್ ಗಮನ ಸೆಳೆಯೋ ರೀತಿಯಲ್ಲಿ ಇದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಕಳೆದ ವರ್ಷ ದರ್ಶನ್ ಜೈಲು ಸೇರಿದರು. ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ಪಡೆದು ಹೊರಗೆ ಬಂದ ಅವರು, ‘ಡೆವಿಲ್’ ಚಿತ್ರದ ಶೂಟ್ ಪೂರ್ಣಗೊಳಿಸಿದ್ದರು. ಜೊತೆಗೆ ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದಾರೆ. ಈಗ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇದೆ. ಹೀಗಿರುವಾಗಲೇ ಚಿತ್ರದಲ್ಲಿ ನಟಿಸಿದ ಕಲಾವಿದರ ಪೋಸ್ಟರ್ ರಿಲೀಸ್ ಮಾಡಲಾಗುತ್ತಿದೆ.
ಗಿಲ್ಲಿ ನಟ ಕೂಡ ದರ್ಶನ್ ಜೊತೆ ‘ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರವನ್ನು ಅವರು ಮಾಡುತ್ತಿದ್ದಾರೆ ಎಂದು ತಂಡ ಮಾಹಿತಿ ನೀಡಿದೆ. ಶರ್ಟ್ ಹಾಕಿ, ಅದಕ್ಕೆ ಟೈ ಹಾಕಿ ಗಿಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ.
ಈ ಸಿನಿಮಾ ಬಿಡುಗಡೆ ರಿಲೀಸ್ ದಿನಾಂಕ ಮುಂದಕ್ಕೆ ಹೊಗಲಿದೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ, ಇದನ್ನು ನಂಬಂದಂತೆ ಫ್ಯಾನ್ಸ್ ಕೋರಿಕೊಂಡಿದ್ದರು. ಈಗ ರಿಲೀಸ್ ಆಗಿರೋ ಪೋಸ್ಟರ್ನಲ್ಲಿ ಡಿಸೆಂಬರ್ 12ರಂದೇ ಸಿನಿಮಾ ಬಿಡುಗಡೆ ಕಾಣಲಿದೆ ಎಂಬ ಸ್ಪಷ್ಟ ಉಲ್ಲೇಖ ಇದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿರೋ ಕಾವ್ಯಾ ಶೈವ ಅವರ ಫೇವರಿಟ್ ಹೀರೋ ಯಾರು ಗೊತ್ತಾ?
ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗಾಗಲೇ ಟೀಸರ್ ಗಮನ ಸೆಳೆದಿದೆ. ಅಲ್ಲದೇ, ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಕೂಡ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಈ ಚಿತ್ರಕ್ಕೆ ಮಿಲನಾ ಪ್ರಕಾಶ್ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.