ಕಂಡ ಕಂಡ ಮದುವೆಗೆ ನುಗ್ಗಿ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡುತ್ತಿದ್ದರು ಗೋಲ್ಡನ್​ ಸ್ಟಾರ್ ಗಣೇಶ್

| Updated By: ರಾಜೇಶ್ ದುಗ್ಗುಮನೆ

Updated on: Dec 24, 2024 | 8:20 AM

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹಿಂದಿನ ಹೋರಾಟಗಳ ಬಗ್ಗೆ ವೈರಲ್ ಆಗಿರುವ ವಿಡಿಯೋ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚಿಕ್ಕ ವಯಸ್ಸಿನಲ್ಲಿ ಆರ್ಕೆಸ್ಟ್ರಾಗಳಲ್ಲಿ ನೃತ್ಯ ಮಾಡುತ್ತಿದ್ದ ಅವರ ಜೀವನದ ಕಷ್ಟದ ದಿನಗಳ ವಿಡಿಯೋ ವೈರಲ್ ಆಗಿದೆ. ‘ಕೃಷ್ಣಂ ಪ್ರಣಯಸಖಿ’ ಚಿತ್ರದ ಯಶಸ್ಸಿನ ನಂತರ ಅವರು ಈಗ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.

ಕಂಡ ಕಂಡ ಮದುವೆಗೆ ನುಗ್ಗಿ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡುತ್ತಿದ್ದರು ಗೋಲ್ಡನ್​ ಸ್ಟಾರ್ ಗಣೇಶ್
ಗಣೇಶ್
Follow us on

ಗಣೇಶ್ ಅವರು ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ, ಅವರ ಜೀವನ ಮೊದಲು ಹೀಗೆ ಮಿನುಗುತ್ತಾ ಇರಲಿಲ್ಲ. ಅವರ ಜೀವನ ಸಖತ ಕಷ್ಟ ಇತ್ತು. ಈ ಬಗ್ಗೆ ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಈಗ ಆ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗಣೇಶ್ ಅವರು ಒಂದು ಅಪರೂಪದ ವಿಚಾರ ರಿವೀಲ್ ಮಾಡಿದ್ದರು. ಈ ವಿಚಾರ ಫ್ಯಾನ್ಸ್​ಗೆ ಅಚ್ಚರಿ ತಂದಿದೆ.

ಗಣೇಶ್ ಅವರಿಗೆ ಚಿಕ್ಕ ವಯಸ್ಸಿನಿಂದ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಅದೇ ರೀತಿ ಆರ್ಕೆಸ್ಟ್ರಾಗಳಲ್ಲಿ ಹೋಗಿ ಡ್ಯಾನ್ಸ್ ಮಾಡುವುದು ಕೂಡ ಅವರ ನೆಚ್ಚಿನ ಕಾಯಕಗಳಲ್ಲಿ ಒಂದಾಗಿತ್ತು. ಈ ಬಗ್ಗೆ ಅವರು ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್​ನಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋನ ಫ್ಯಾನ್ಸ್ ವೈರಲ್ ಮಾಡಿದ್ದಾರೆ.

ಆರ್ಕೆಸ್ಟ್ರಾದಲ್ಲಿ ಹೋಗಿ ಗಣೇಶ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೆ. ಇದನ್ನು ತೋರಿಸಿದ ಬಳಿಕ ಗಣೇಶ್ ಹೇಳಿದ್ದು ಒಂದೇ ಮಾತು, ‘ಎಣ್ಣೆ ಏಟು’. ಈ ಮಾತನ್ನು ಕೇಳಿ ರಮೇಶ್ ಅರವಿಂದ್ ಕೂಡ ನಕ್ಕರು. ಈ ವಿಡಿಯೋ ನೋಡಿದ ಬಳಿಕ ರಮೇಶ್ ಅರವಿಂದ್ ಅವರು ಕೆಲವು ಹೊತ್ತು ಚರ್ಚೆ ಮಾಡಿದರು. ಗಣೇಶ್ ಅವರು ಘಟನೆ ವಿವರಿಸಿದರು.

‘ಮದುವೆ ಇರಬೇಕು, ಗೊತ್ತಿದ್ದವರದ್ದೇ ಆಗಬೇಕು ಎಂದಿಲ್ಲ. ಆರ್ಕೆಸ್ಟ್ರಾ ಇದ್ರೆ ನುಗ್ಗೋದು. ಡ್ಯಾನ್ಸ್ ಮಾಡ್ತಾ ಇರೋವವರು ಗಂಡಿನ ಕಡೆಯವರಾ, ಹೆಣ್ಣಿನ ಕಡೆಯವರಾ ಎಂದು ನೋಡ್ತಾ ಇರ್ತಾರೆ. ರಾತ್ರಿ ಅಲ್ಲಿಯೇ ಹಾಲ್ಟ್ ಆಗೋದು. ಬೆಳಿಗ್ಗೆ ಮನೆಗೆ ಬಂದು ಕೆರದಲ್ಲಿ ಹೊಡೆಸಿಕೊಳ್ಳೋದು’ ಎಂದಿದ್ದರು ಗಣೇಶ್.


ಇದನ್ನೂ ಓದಿ: ತುಳು ಚಿತ್ರರಂಗಕ್ಕೆ ಕಾಲಿಟ್ಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್

ಗಣೇಶ್ ಅವರಿಗೆ ಈ ವರ್ಷ ಸಖತ್ ವಿಶೇಷವಾಗಿದೆ. ಅವರ ನಟನೆಯ ‘ಕೃಷ್ಣಂ ಪ್ರಣಯಸಖಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವುದರ ಜೊತೆಗೆ ಒಟಿಟಿಯಲ್ಲೂ ರಿಲೀಸ್ ಆಗಿ ಭೇಷ್ ಎನಿಸಿಕೊಂಡಿತು. ಈ ಸಿನಿಮಾದ ಹಾಡುಗಳು ಕೂಡ ಗಮನ ಸೆಳೆದವು. ಈ ಚಿತ್ರವನ್ನು ಜನರು ಮೆಚ್ಚಿದ್ದಾರೆ. ಈ ವರ್ಷ ಗಣೇಶ್ ಅವರು ಹೊಸ ಕಾರನ್ನು ಕೂಡ ಖರೀದಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.