ದರ್ಶನ್ ಜೊತೆ ಸಿನಿಮಾ ನಿಂತು ಹೋಯ್ತಾ? ಉತ್ತರ ನೀಡಿದ ಪ್ರೇಮ್

Darshan: ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಸಿನಿಮಾ ಚಿತ್ರೀಕರಣ ಯಾವಾಗ ಪ್ರಾರಂಭ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ. ದರ್ಶನ್ ನಟಿಸುತ್ತಿದ್ದ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಪ್ರೇಮ್ ಜೊತೆ ಮಾಡಬೇಕಿದ್ದ ಸಿನಿಮಾದ ಬಗ್ಗೆ ಪ್ರಶ್ನೆಗಳು ಮೂಡಿವೆ. ಇದೀಗ ಈ ಬಗ್ಗೆ ನಟ ಪ್ರೇಮ್ ಮಾತನಾಡಿದ್ದಾರೆ.

ದರ್ಶನ್ ಜೊತೆ ಸಿನಿಮಾ ನಿಂತು ಹೋಯ್ತಾ? ಉತ್ತರ ನೀಡಿದ ಪ್ರೇಮ್
Prem Darshan
Follow us
ಮಂಜುನಾಥ ಸಿ.
|

Updated on:Dec 24, 2024 | 1:32 PM

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಇತ್ತೀಚೆಗಷ್ಟೆ ಜಾಮೀನು ಪಡೆದಿದ್ದಾರೆ. ಆದರೆ ಅವರ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ದರ್ಶನ್ ಬೆಂಗಳೂರಿನಿಂದ ತಮ್ಮ ಮೈಸೂರಿನ ಫಾರಂ ಹೌಸ್​ಗೆ ವಾಸ್ತವ್ಯ ಬದಲಾಯಿಸಿದ್ದು, ಕೆಲ ದಿನದ ಹಿಂದೆ ಹರಿದಾಡಿದ ವಿಡಿಯೋನಲ್ಲಿ ದರ್ಶನ್ ನಡೆಯಲು ಸಹ ಕಷ್ಟಪಡುತ್ತಿದ್ದರು. ಇಂಥಹಾ ವಿಷಮ ಸ್ಥಿತಿಯಲ್ಲಿ ಅವರು ಒಪ್ಪಿಕೊಂಡಿರುವ ಸಿನಿಮಾಗಳನ್ನು ಹೇಗೆ ಪೂರೈಸುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ದರ್ಶನ್ ಬಂಧನವಾದಾಗ ಅವರು ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿದ್ದರು. ನಿರ್ದೇಶಕ ಪ್ರೇಮ್ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದರು. ಈ ಸಿನಿಮಾಗಳು ನಿಂತು ಹೋಗಿವೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು, ಇದೀಗ ಈ ಬಗ್ಗೆ ನಟ ಪ್ರೇಮ್ ಸ್ಪಷ್ಟನೆ ನೀಡಿದ್ದಾರೆ.

ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಪ್ರೇಮ್, ‘ನಾನು ಹಾಗೂ ದರ್ಶನ್ ಅಣ್ಣ-ತಮ್ಮಂದಿರು. ನಾವು ಒಂದೇ ಕುಟುಂಬದವರು. ನಾನು ಮೊದಲ ಬಾರಿಗೆ ದರ್ಶನ್​ಗಾಗಿ ‘ಕರಿಯ’ ಸಿನಿಮಾ ಮಾಡಿದಾಗ ಆಗ ನಾವು ಪರಿಚಯದವರು ಅಷ್ಟೆ ಆದರೆ ಪತ್ನಿ ರಕ್ಷಿತಾ ಅವರಿಗೆ ಅದಾಗಲೇ ಅವರು ಬಹಳ ಆತ್ಮೀಯ ಗೆಳೆಯರು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗುವ ಗೆಳೆಯರು. ನನಗೂ ಸಹ ದರ್ಶನ್ ಅವರು ಬಹಳ ಆಪ್ತರು’ ಎಂದಿದ್ದಾರೆ ಪ್ರೇಮ್.

ಇದನ್ನೂ ಓದಿ:‘ನೋಡಿ ಎಲ್ಲ ಕೆಡಿಗಳೇ..’: ಚಿಕ್ಕಮಗಳೂರಲ್ಲಿ ಪ್ರೇಮ್ ವಿಡಿಯೋ

‘ದರ್ಶನ್ ಹಾಗೂ ನಾನು ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಹಲವು ವರ್ಷದಿಂದ ಕೇಳುತ್ತಲೇ ಇದ್ದರು. ಹಾಗಾಗಿ ನಾನು ಖಂಡಿತ ದರ್ಶನ್​ಗೆ ಸಿನಿಮಾ ಮಾಡುತ್ತೀನಿ. ಅದರಲ್ಲಿ ಅನುಮಾನವೇ ಬೇಡ. ಎಲ್ಲರೂ ಒಂದೇ ಕುಟುಂಬದ ರೀತಿ. ದರ್ಶನ್ ಅವರು ಆರೋಗ್ಯವಾಗಿದ್ದಿದ್ದರೆ ನಾನೇ ಅವರನ್ನು ಕರೀತಿದ್ದೆ. ಈ ಸಿನಿಮಾದ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸುತ್ತಿದ್ದೆ. ಆದರೆ ಅವರಿಗೆ ಬೆನ್ನು ನೋವು ಇರುವ ಕಾರಣ ಈಗ ಬೇಡ ಎಂದುಕೊಂಡೆ. ಮುಂದಿನ ದಿನಗಳಲ್ಲಿ ಅವರನ್ನು ಕರೆಯುತ್ತೀನಿ. ನನಗಾಗಲಿ, ರಕ್ಷಿತಾ, ಧ್ರುವ ಅವರಿಗಾಗಲಿ ಎಲ್ಲರಿಗೂ ಬೆಂಬಲ ಕೊಡುತ್ತಾರೆ’ ಎಂದಿದ್ದಾರೆ ನಿರ್ದೇಶಕ ಪ್ರೇಮ್.

ದರ್ಶನ್ ಈಗ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಬಳಿಕ ಪ್ರೇಮ್ ನಿರ್ದೇಶನದ ನಟಿಸಲು ಒಪ್ಪಿಗೆ ನೀಡಿದ್ದರು. ಪ್ರೇಮ್ ಹಾಗೂ ದರ್ಶನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ರೇಣುಕಾ ಸ್ವಾಮಿ ಪ್ರಕರಣ ನಡೆದ ಕಾರಣ ‘ಡೆವಿಲ್’ ಸಿನಿಮಾದ ಚಿತ್ರೀಕರಣ ನಿಂತು ಹೋಗಿದೆ. ಕೆಲ ಮಾಹಿತಿಯ ಪ್ರಕಾರ, ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭ ಆಗಲಿದೆಯಂತೆ. ಅದಾದ ಬಳಿಕ ಪ್ರೇಮ್ ಜೊತೆಗಿನ ಸಿನಿಮಾದಲ್ಲಿ ದರ್ಶನ್ ನಟಿಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Tue, 24 December 24

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ