ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಆಗಸ್ಟ್ 15ರಂದು ಬಿಡುಗಡೆ ಆಗಿದೆ. ಈ ಚಿತ್ರದಿಂದ ಅವರು ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಗಣೇಶ್ ಅವರ ನಟನೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಸಿನಿಮಾದಲ್ಲಿ ಭರ್ಜರಿ ಕಾಮಿಡಿ ಇದೆ ಎಂಬ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ಮೊದಲ ದಿನ ಈ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ನಿರೀಕ್ಷೆ ಇದೆ.
‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಗಣೇಶ್, ರಂಗಾಯಣ ರಘು, ಸಾಧು ಕೋಕಿಲ, ಮಾಳವಿಕಾ ನಾಯರ್, ಶರಣ್ಯಾ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ನೋಡಿದ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಚಿತ್ರ ಮೊದಲದಿನ 1.25 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು Sacnilk ವೆಬ್ಸೈಟ್ ವರದಿ ಮಾಡಿದೆ. ಇಂದು (ಆಗಸ್ಟ್ 16), ಶನಿವಾರ (ಆಗಸ್ಟ್ 17), ಭಾನುವಾರ (ಆಗಸ್ಟ್ 18) ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಸಿನಿಮಾ ತಂಡದ ಕಡೆಯಿಂದ ಇನ್ನಷ್ಟೇ ಪಕ್ಕಾ ಲೆಕ್ಕ ಬರಬೇಕಿದೆ.
‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ ಸದ್ಯ (ಆಗಸ್ಟ್ 16ರ ಮುಂಜಾನೆ 9 ಗಂಟೆ ವೇಳೆಗೆ) 9.2 ರೇಟಿಂಗ್ ಸಿಕ್ಕಿದೆ. ಇನ್ನು, ಐಎಂಡಿಬಿಯಲ್ಲಿ 8.7 ರೇಟಿಂಗ್ ಸಿಕ್ಕಿದೆ. ಶ್ರೀನಿವಾಸ್ ರಾಜು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬಲ ಸಿಕ್ಕಿದೆ.
ಇದನ್ನೂ ಓದಿ: ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಲು ಬಂದ ಜನ ಸಾಗರ; ಶರಣ್ಯ ಶೆಟ್ಟಿಗೆ ಅಚ್ಚರಿ
ಇತ್ತೀಚೆಗೆ ಸಿನಿಮಾಗಳೇ ಇಲ್ಲದೆ ಕನ್ನಡ ಚಿತ್ರರಂಗ ಮಂಕಾಗಿದೆ. ಕಳೆದ ವಾರ ‘ಭೀಮ’ ಸಿನಿಮಾ ರಿಲೀಸ್ ಆಯಿತು. ಈ ವಾರ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಿಡುಗಡೆ ಕಂಡು ಯಶಸ್ಸು ಪಡೆದುಕೊಂಡಿದೆ. ಈ ಚಿತ್ರದಿಂದ ಗಣೇಶ್ ಗೆಲುವಿನ ನಗೆ ಬೀರಿದ್ದಾರೆ. ಮತ್ತೆ ಜನರು ಚಿತ್ರರಂಗದತ್ತ ಬರುತ್ತಿರುವುದು ಎಲ್ಲರ ಖುಷಿ ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:01 am, Fri, 16 August 24