ಬದುಕೋಕೆ ಗೂಳಿ ಆಗುವ ಗೌಳಿ; ಟ್ರೇಲರ್​ನಲ್ಲಿ ರಗಡ್ ಅವತಾರ ತಾಳಿದ ಶ್ರೀನಗರ ಕಿಟ್ಟಿ

|

Updated on: Feb 17, 2023 | 12:32 PM

ಅದ್ದೂರಿ ಮೇಕಿಂಗ್ ಹಾಗೂ ಟೈಟಲ್‌ ಟೀಸರ್ ಮೂಲಕ ‘ಗೌಳಿ’ ಚಿತ್ರ ಸಾಕಷ್ಟು ಸುದ್ದಿ ಆಗಿತ್ತು. ಈ ಚಿತ್ರವನ್ನು ರಘು ಸಿಂಗಂ ಅವರು ನಿರ್ಮಾಣ ಮಾಡಿದ್ದಾರೆ.

ಬದುಕೋಕೆ ಗೂಳಿ ಆಗುವ ಗೌಳಿ; ಟ್ರೇಲರ್​ನಲ್ಲಿ ರಗಡ್ ಅವತಾರ ತಾಳಿದ ಶ್ರೀನಗರ ಕಿಟ್ಟಿ
ಶ್ರೀನಗರ ಕಿಟ್ಟಿ
Follow us on

ಶ್ರೀನಗರ ಕಿಟ್ಟಿ (Srinagar Kitty) ನಟನೆಯ ‘ಗೌಳಿ’ ಪೋಸ್ಟರ್ ಹಾಗೂ ಟೀಸರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಈ ಕೌತುಕ ಹೆಚ್ಚಿಸುವ ಕೆಲಸ ಟ್ರೇಲರ್​ನಿಂದ ಆಗಿದೆ. ‘ಗೌಳಿ’ ಸಿನಿಮಾದ (Gowli Movie) ಟ್ರೇಲರ್ ರಿಲೀಸ್ ಆಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಗೌಳಿ ಆಗಿದ್ದ ವ್ಯಕ್ತಿ ಸಮಾಜದ ತೊಂದರೆಗಳನ್ನು ಮೆಟ್ಟಿ ನಿಲ್ಲಲ್ಲು ಗೂಳಿಯಂತಾಗುವ ಕಥೆ ‘ಗೌಳಿ’ ಅನ್ನೋದು ಟ್ರೇಲರ್ ಮೂಲಕ ಗೊತ್ತಾಗಿದೆ. ಮೇಕಿಂಗ್ ಕೂಡ ಸಾಕಷ್ಟು ಗಮನ ಸೆಳೆದಿದೆ.

ಅದ್ದೂರಿ ಮೇಕಿಂಗ್ ಹಾಗೂ ಟೈಟಲ್‌ ಟೀಸರ್ ಮೂಲಕ ‘ಗೌಳಿ’ ಚಿತ್ರ ಸಾಕಷ್ಟು ಸುದ್ದಿ ಆಗಿತ್ತು. ಈ ಚಿತ್ರವನ್ನು ರಘು ಸಿಂಗಂ ಅವರು ನಿರ್ಮಾಣ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ರಗಡ್ ಅವತಾರದಲ್ಲಿ  ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಮೂಲಕ ಈ ವಿಚಾರ ಮತ್ತೊಮ್ಮೆ ಸಾಬೀತಾಗಿದೆ. ಅವರು ಮಸ್ತ್ ಆ್ಯಕ್ಷನ್ ಮೆರೆದಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ಸೊಗಡು ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕ ಭಾಷೆ ಆಗಿರುವುದರಿಂದ ಖಡಕ್ ಶಬ್ದಗಳ ಬಳಕೆ ಟ್ರೇಲರ್​ನಲ್ಲಿ ಆಗಿದೆ. ಸಿನಿಮಾದಲ್ಲೂ ಈ ರೀತಿಯ ಭಾಷಾ ಪ್ರಯೋಗ ಮುಂದುವರಿಯುವ ಸಾಧ್ಯತೆ ಇದೆ.

‘ಗೌಳಿ’ ಸಿನಿಮಾದ ಕೆಲಸಗಳು ಆರಂಭ ಆಗಿ ಸಾಕಷ್ಟು ಸಮಯ ಕಳೆದಿದೆ. ಎಲ್ಲಾ ದೃಶ್ಯಗಳನ್ನು ನಿರ್ದೇಶಕ ಸೂರ ಅವರು ಅಳೆದು ತೂಗಿ ಕಟ್ಟಿಕೊಟ್ಟಿದ್ದಾರೆ. ಟ್ರೇಲರ್​ ಅನೇಕರಿಗೆ ಇಷ್ಟವಾಗಿದೆ. ‘ಗೌಳಿ’ ಸಿನಿಮಾ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಚಿತ್ರದಲ್ಲಿ ನಾಯಕ ಶ್ರೀನಗರ ಕಿಟ್ಟಿ ಅವರು ಹಿಂದೆಂದೂ ಕಾಣಿಸಿರದಂಥ ರಗಡ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ನಾಯಕಿ ಪಾವನಾಗೌಡ ಮೊದಲಬಾರಿಗೆ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು, ಯಶ್‌ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಒಂದು ಆ್ಯಕ್ಷನ್ ದೃಶ್ಯಕ್ಕೆ 35 ಲಕ್ಷ ರೂ. ವೆಚ್ಛ ಮಾಡಿದ ‘ಗೌಳಿ’ ತಂಡ; ಶ್ರೀನಗರ ಕಿಟ್ಟಿ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​

ಶಶಾಂಕ್ ಶೇಷಗಿರಿ ಅವರ ಸಂಗೀತ ಸಂಯೋಜನೆಯ 3 ಹಾಡುಗಳು ಈ ಚಿತ್ರದಲ್ಲಿವೆ. ಸಂದೀಪ್  ವಲ್ಲೂರಿ ಅವರ ಛಾಯಾಗ್ರಹಣ, ಉಮೇಶ್ ಅವರ ಸಂಕಲನ, ರಘು ಎಂ. ಅವರ ಕಲಾನಿರ್ದೇಶನ, ವಿಕ್ರಂಮೋರ್, ಅರ್ಜುನ್‌ ರೈ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಫೆಬ್ರವರಿ 24ರಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:31 pm, Fri, 17 February 23