Kabzaa Movie Songs: ‘ನಮಾಮಿ..’ ಹಾಡಿನಲ್ಲಿ ಮಿಂಚಿದ ನಟಿ ಶ್ರೀಯಾ ಶರಣ್; ‘ಕಬ್ಜ’ ಚಿತ್ರದ ಅದ್ದೂರಿತನಕ್ಕೆ ಈ ಗೀತೆಯೇ ಸಾಕ್ಷಿ
Namaami Song | Shriya Saran: ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಎಷ್ಟು ಶ್ರೀಮಂತವಾಗಿ ಮೂಡಿಬಂದಿರಬಹುದು ಎಂಬುದಕ್ಕೆ ‘ನಮಾಮಿ..’ ಹಾಡಿನಲ್ಲಿ ಝಲಕ್ ಕಾಣಿಸಿದೆ. ಟ್ರೆಡಿಷನಲ್ ಲುಕ್ನಲ್ಲಿ ಶ್ರೀಯಾ ಶರಣ್ ಮಿಂಚಿದ್ದಾರೆ.
ಹಲವು ಕಾರಣಗಳಿಂದ ‘ಕಬ್ಜ’ ಸಿನಿಮಾ (Kabzaa Movie) ಕ್ರೇಜ್ ಸೃಷ್ಟಿ ಮಾಡಿದೆ. ಪೋಸ್ಟರ್, ಟೀಸರ್ ಮತ್ತು ಟೈಟಲ್ ಟ್ರ್ಯಾಕ್ ಈಗಾಗಲೇ ಧೂಳೆಬ್ಬಿಸಿವೆ. ಈಗ ‘ಕಬ್ಜ’ ತಂಡದಿಂದ ಹೊಸ ಸಾಂಗ್ ಬಿಡುಗಡೆ ಮಾಡಲಾಗಿದೆ. ನಟಿ ಶ್ರೀಯಾ ಶರಣ್ (Shriya Saran) ಅವರು ಹೆಜ್ಜೆ ಹಾಕಿರುವ ‘ನಮಾಮಿ..’ ಹಾಡು ರಿಲೀಸ್ ಆಗಿದೆ. ಚೆನ್ನೈನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ಈ ಗೀತೆಯನ್ನು ಅನಾವರಣ ಮಾಡಲಾಗಿದೆ. ರವಿ ಬಸ್ರೂರು ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ನಮಾಮಿ..’ ಹಾಡು (Namaami Song) ಎಲ್ಲರ ಗಮನ ಸೆಳೆಯುತ್ತಿದೆ. ಈ ಗೀತೆಯಿಂದಾಗಿ ‘ಕಬ್ಜ’ ಮೇಲೆ ಇರುವ ನಿರೀಕ್ಷೆ ಡಬಲ್ ಆಗಿದೆ. ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್ ಅವರ ಕಂಠದಲ್ಲಿ ಈ ಸಾಂಗ್ ಮೂಡಿಬಂದಿದೆ. ಕಿನ್ನಾಲ್ ರಾಜ್ ಸಾಹಿತ್ಯ ಬರೆದಿದ್ದಾರೆ.
ತುಂಬಾ ಅದ್ದೂರಿಯಾಗಿ ‘ನಮಾಮಿ..’ ಹಾಡು ಮೂಡಿಬಂದಿದೆ. ಟ್ರೆಡಿಷನಲ್ ಆದಂತಹ ಲುಕ್ನಲ್ಲಿ ಶ್ರೀಯಾ ಶರಣ್ ಅವರು ಮಿಂಚಿದ್ದಾರೆ. ಬೃಹತ್ ಸೆಟ್ಗಳು ಕಣ್ಮನ ಸೆಳೆಯುವಂತಿವೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಹಾಡು ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಇಡೀ ಸಿನಿಮಾ ಎಷ್ಟು ಶ್ರೀಮಂತವಾಗಿ ಮೂಡಿಬಂದಿರಬಹುದು ಎಂಬುದಕ್ಕೆ ‘ನಮಾಮಿ..’ ಹಾಡಿನಲ್ಲಿ ಝಲಕ್ ಕಾಣಿಸಿದೆ.
‘ಕಬ್ಜ’ ಬೆಡಗಿ ಶ್ರೀಯಾ ಶರಣ್ ಸುಂದರ ಫೋಟೋಸ್
ಉಪೇಂದ್ರ ಮತ್ತು ಸುದೀಪ್ ಅವರು ‘ಕಬ್ಜ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಜನ್ಮದಿನವಾದ ಮಾರ್ಚ್ 17ರಂದು ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ಬಿಡುಗಡೆಗೆ ಇನ್ನು ಒಂದು ತಿಂಗಳು ಬಾಕಿ ಇದ್ದು, ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಕಬ್ಜ’ ಆಡಿಯೋ ರಿಲೀಸ್ ಆಗಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಚಿತ್ರರಂಗದ ಹಲವು ದಿಗ್ಗಜ ನಟರಿಗೆ ಆಹ್ವಾನ ನೀಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.
Get ready to witness the mesmerizing performance of @shriya1109 as she dances with devotion to Lord Nataraja! https://t.co/RKRJYCBFgK
Tune into @aanandaaudio YouTube channel and enjoy #namaamivideosong #Kabzaa #upendra #sudeep pic.twitter.com/Eesn4JHTws
— R.Chandru (@rchandru_movies) February 16, 2023
‘ಕಬ್ಜ’ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ವಿದೇಶದ ಪ್ರೇಕ್ಷಕರು ಕೂಡ ಸಜ್ಜಾಗಿದ್ದಾರೆ. ನಾರ್ತ್ ಅಮೆರಿಕದಲ್ಲಿ ಈ ಸಿನಿಮಾ ಭಾರಿ ಓಪನಿಂಗ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿನ ದೊಡ್ಡ ಸಂಸ್ಥೆಗಳು ‘ಕಬ್ಜ’ ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ. ‘ಪ್ರೈಂ ಶೋ ಎಂಟರ್ಟೇನ್ಮೆಂಟ್’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು, 450ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:48 pm, Thu, 16 February 23