Kantara: ‘ವರಾಹ ರೂಪಂ..’ ಹಾಡಿನ ವಿವಾದ: ನಟ ಪೃಥ್ವಿರಾಜ್​ ಸುಕುಮಾರನ್​​ ಮೇಲಿನ ಎಫ್​ಐಆರ್​ಗೆ ಕೋರ್ಟ್​ ತಡೆ

Prithviraj Sukumaran | Varaha Roopam Song: ತಮ್ಮ ಮೇಲೆ ಎಫ್​ಐಆರ್​ ಹಾಕಿರುವುದನ್ನು ಪ್ರಶ್ನಿಸಿ ಪೃಥ್ವಿರಾಜ್​ ಸುಕುಮಾರನ್​ ಅವರು ಕೇರಳ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದಿದ್ದು ಗುರುವಾರ (ಫೆ.16) ತೀರ್ಪು ಪ್ರಕಟ ಆಗಿದೆ.

Kantara: ‘ವರಾಹ ರೂಪಂ..’ ಹಾಡಿನ ವಿವಾದ: ನಟ ಪೃಥ್ವಿರಾಜ್​ ಸುಕುಮಾರನ್​​ ಮೇಲಿನ ಎಫ್​ಐಆರ್​ಗೆ ಕೋರ್ಟ್​ ತಡೆ
ರಿಷಬ್ ಶೆಟ್ಟಿ, ಪೃಥ್ವಿರಾಜ್ ಸುಕುಮಾರನ್
Follow us
|

Updated on:Feb 16, 2023 | 6:34 PM

ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’ (Kantara Movie) ಸಿನಿಮಾಗೆ ಸಿಕ್ಕಂತಹ ಜನಸ್ಪಂದನೆ ತುಂಬ ದೊಡ್ಡದು. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಅನೇಕ ದಾಖಲೆಗಳನ್ನು ಬರೆಯಿತು. ಅದರ ಜೊತೆಗೆ ಒಂದಷ್ಟು ವಿವಾದಗಳು ಕೂಡ ಸುತ್ತಿಕೊಂಡವು. ಅತಿ ದೊಡ್ಡ ವಿವಾದ ಎದುರಾಗಿದ್ದು ‘ವರಾಹ ರೂಪಂ..’ (Varaha Roopam) ಹಾಡಿನ ಕಾರಣದಿಂದ. ಅಜನೀಶ್​ ಲೋಕನಾಥ್​ ಸಂಗೀತ ನೀಡಿದ ಈ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಎದುರಾಯಿತು. ಅಷ್ಟೇ ಅಲ್ಲದೇ ಆ ಪ್ರಕರಣ ಕೋರ್ಟ್​ ಮೆಟ್ಟಿಲೇರಿತು ಕೂಡ. ಈ ಕೇಸ್​ನಲ್ಲಿ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ (Prithviraj Sukumaran)​ ಕೂಡ ಸಮಸ್ಯೆ ಎದುರಿಸುವಂತಾಗಿದ್ದು ಅಚ್ಚರಿ. ಆದರೆ ಅವರಿಗೆ ಈಗ ರಿಲೀಫ್​ ಸಿಕ್ಕಿದೆ. ಅವರ ಮೇಲಿದ್ದ ಎಫ್​ಐಆರ್​ಗೆ ಕೇರಳ ಹೈಕೋರ್ಟ್​ ತಡೆ ನೀಡಿದೆ.

ಮೊದಲು ಕನ್ನಡದಲ್ಲಿ ರಿಲೀಸ್​ ಆಗಿದ್ದ ‘ಕಾಂತಾರ’ ಚಿತ್ರವನ್ನು ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್​ ಮಾಡಿ ತೆರೆಕಾಣಿಸಲಾಯಿತು. ಕೇರಳದಲ್ಲಿ ಈ ಚಿತ್ರದ ಮಲಯಾಳಂ ವರ್ಷನ್​ ಬಿಡುಗಡೆ ಮಾಡಿದ್ದು ಖ್ಯಾತ ನಟ ಪೃಥ್ವಿರಾಜ್​ ಸುಕುಮಾರನ್​. ಅವರ ವಿತರಣಾ ಕಂಪನಿ ಮೂಲಕ ‘ಕಾಂತಾರ’ ರಿಲೀಸ್​ ಆಯಿತು. ‘ವರಾಹಂ ರೂಪಂ..’ ಹಾಡನ್ನು ಕಾಪಿ ಮಾಡಲಾಗಿದೆ ಎಂದು ಹಾಕಿದ್ದ ಕೇಸ್​ನಲ್ಲಿ ಪೃಥ್ವಿರಾಜ್​ ಸುಕುಮಾರನ್​​ ಅವರ ಹೆಸರನ್ನೂ ಸೇರಿಸಲಾಯಿತು. ಬಳಿಕ ಎಫ್​ಐಆರ್​ ದಾಖಲಾಯಿತು.

ಇದನ್ನೂ ಓದಿ: Urvashi Rautela: ‘ಕಾಂತಾರ 2’ ಚಿತ್ರದಲ್ಲಿ ಊರ್ವಶಿ ರೌಟೇಲಾ ನಟಿಸೋದು ನಿಜವಲ್ಲ; ಫೋಟೋ ಹಿಂದಿನ ಸತ್ಯ ಇಲ್ಲಿದೆ

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ತಮ್ಮ ಮೇಲೆ ಎಫ್​ಐಆರ್​ ಹಾಕಿರುವುದನ್ನು ಪ್ರಶ್ನಿಸಿ ಪೃಥ್ವಿರಾಜ್​ ಸುಕುಮಾರನ್​​ ಅವರು ಕೇರಳ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದಿದ್ದು ಗುರುವಾರ (ಫೆಬ್ರವರಿ 16) ತೀರ್ಪು ಪ್ರಕಟ ಆಗಿದೆ. ‘ಪೃಥ್ವಿರಾಜ್​ ಸುಕುಮಾರನ್​ ಅವರು ಈ ಸಿನಿಮಾವನ್ನು ವಿತರಣೆ ಮಾಡಿದ್ದಾರೆ ಅಷ್ಟೇ. ಅದಕ್ಕಾಗಿ ಕಾಪಿರೈಟ್​ ವಿಷಯದಲ್ಲಿ ಅವರನ್ನು ಅನಗತ್ಯವಾಗಿ ಎಳೆದು ತರಲಾಗಿದೆ’ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ಮುಂದಿನ 7 ದಿನಗಳ ಕಾಲ ಯಾವುದೇ ವಿಚಾರಣೆ ಮಾಡಬಾರದು ಎಂದು ತೀರ್ಪು ನೀಡಲಾಗಿದೆ.

ಇದನ್ನೂ ಓದಿ: Rishab Shetty: ‘ಕಾಂತಾರ’ ಚಿತ್ರದ ನಟ, ನಿರ್ದೇಶಕ ರಿಷಬ್​ ಶೆಟ್ಟಿಗೆ ‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’

‘ಕಾಂತಾರ 2’ ಮಾಡಲು ರಿಷಬ್​ ಶೆಟ್ಟಿ ಸಿದ್ಧತೆ:

ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಿಂದ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ. ಅವರು ಅವರು ‘ಕಾಂತಾರ 2’ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಜೂನ್​ ತಿಂಗಳಲ್ಲಿ ಇದರ ಶೂಟಿಂಗ್​ ಆರಂಭ ಆಗುವ ಸಾಧ್ಯತೆ ಇದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್​’ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಪಾತ್ರವರ್ಗಕ್ಕೆ ಹೊಸ ಕಲಾವಿದರು ಕೂಡ ಎಂಟ್ರಿ ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:34 pm, Thu, 16 February 23