ಆರು ವರ್ಷಗಳ ಹಿಂದಿನ ಭೇಟಿ; ಮೊದಲ ಬಾರಿ ರಿಷಬ್ ಸಿಕ್ಕಿದ್ದನ್ನು ನೆನಪಿಸಿಕೊಂಡ ಗುಲ್ಶನ್ ದೇವಯ್ಯ

ಗುಲ್ಶನ್ ದೇವಯ್ಯ ಕನ್ನಡದವರಾದರೂ ಇಲ್ಲಿ ನಟಿಸಲು ಅವಕಾಶ ಸಿಕ್ಕಿರಲಿಲ್ಲ. 'ಕಾಂತಾರ: ಚಾಪ್ಟರ್ 1' ಅವರ ದೊಡ್ಡ ಯಶಸ್ಸಿನ ಹೆಜ್ಜೆ. ರಿಷಬ್ ಶೆಟ್ಟಿ ಜೊತೆಗಿನ ಅವರ ಸಹಯೋಗ ಆರು ವರ್ಷಗಳ ಹಿಂದೆಯೇ ಶುರುವಾಗಿತ್ತು. ಹಲವು ಯೋಜನೆಗಳು ಕಾರ್ಯರೂಪಕ್ಕೆ ಬಾರದೆ, ಅಂತಿಮವಾಗಿ 'ಕಾಂತಾರ: ಚಾಪ್ಟರ್ 1' ಮೂಲಕ ಅವರ ಕನಸು ನನಸಾಯಿತು.

ಆರು ವರ್ಷಗಳ ಹಿಂದಿನ ಭೇಟಿ; ಮೊದಲ ಬಾರಿ ರಿಷಬ್ ಸಿಕ್ಕಿದ್ದನ್ನು ನೆನಪಿಸಿಕೊಂಡ ಗುಲ್ಶನ್ ದೇವಯ್ಯ
Rishab And Gulshan (1)

Updated on: Oct 14, 2025 | 12:17 PM

ಗುಲ್ಶನ್ ದೇವಯ್ಯ ಅವರು ಕನ್ನಡದವರೇ ಆದರೂ ಇಲ್ಲಿ ಕೆಲಸ ಮಾಡುವ ಅವಕಶ ಸಿಕ್ಕಿರಲೇ ಇಲ್ಲ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಅವರು ದೊಡ್ಡ ಯಶಸ್ಸು ಕಂಡರು. ಅವರು ಕನ್ನಡಿಗರೂ ಪರಿಚಯಗೊಂಡರು. ಹಿಂದಿಯಲ್ಲಿ ಸಿನಿಮಾ, ವೆಬ್ ಸೀರಿಸ್ ಮಾಡಿಕೊಂಡಿದ್ದ ಅವರಿಗೆ ಕನ್ನಡದಲ್ಲಿ ಒಂದಷ್ಟು ಫ್ಯಾನ್ಸ್ ಹುಟ್ಟಿದರು. ರಿಷಬ್ (Rishab Shetty) ಹಾಗೂ ಗುಲ್ಶನ್ ಮೊದಲ ಬಾರಿಗೆ ಭೇಟಿ ಮಾಡಿದ್ದು ಆರು ವರ್ಷಗಳ ಹಿಂದೆ. ಅದನ್ನು, ರಿಷಬ್ ಅವರು ನೆನಪಿಸಿಕೊಂಡಿದ್ದಾರೆ.

ಗುಲ್ಶನ್ ಹಾಗೂ ರಿಷಬ್ ಮೊದಲು ಭೇಟಿ ಆಗಿದ್ದು 2019ರಲ್ಲಿ. ಆಗ ‘ಕಾಂತಾರ’ ಚಿತ್ರದ ಐಡಿಯಾನೇ ಇನ್ನೂ ಹುಟ್ಟಿಕೊಂಡಿರಲಿಲ್ಲ. ಆಗಲೇ ರಿಷಬ್ ಅವರು ಗುಲ್ಶನ್ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಹೊರಹಾಕಿದ್ದರಂತೆ.  ‘ನನನ್ನ ಗೆಳೆಯ ಪಿಡಿ ಸತೀಶ್ ಚಂದ್ರ ಅವರಿಂದ ರಿಷಬ್ ಪರಿಚಯ ಆಯಿತು. ಅವರು ನನ್ನ ಜೊತೆ ಕೆಲಸ ಮಾಡಬೇಕು ಎಂದು ಆಸೆ ಹೊರಹಾಕಿದರು. ಆಗ, ನನಗೆ ಅವರು ಯಾರು ಎಂಬುದೇ ಗೊತ್ತಿರಲಿಲ್ಲ’ ಎಂದಿದ್ದಾರೆ ಗುಲ್ಶನ್.

‘ನನಗೆ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿತು. ಅವರು ತುಂಬಾನೇ ಪ್ರಾಮಾಣಿಕವಾಗಿ ಕಂಡರು. ಅವರ ಎನರ್ಜಿ ನನಗೆ ಇಷ್ಟ ಆಯಿತು. ಮೊದಲು ಕೆಲವು ಸಿನಿಮಾಗಳ ಕಥೆ ಹೇಳಿದರು. ನಾನು ಹೀರೋ ಆಗಿ ನಟಿಸಬೇಕಿತ್ತು. ಆದರೆ, ಬೇರೆ ಬೇರೆ ಕಾರಣಗಳಿಂದ ಸಿನಿಮಾ ಸೆಟ್ಟೇರಲಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ
ಸ್ಪರ್ಧಿಗಳಿಗೆ ಕೊನೆಯ ಅವಕಾಶ ಕೊಟ್ಟ ‘ಬಿಗ್ ಬಾಸ್​’; ಮಾಡು ಇಲ್ಲವೇ ಮಡಿ
‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ
ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಕಾವ್ಯಾ ಕಣ್ಣಿಗೆ ಹೆದರಿದ ಗಿಲ್ಲಿ
ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್

‘ರಿಷಬ್ ಮತ್ತು ನಾನು ಮೊದಲು ಭೇಟಿಯಾದಾಗ ಕಲಾವಿದರಾಗಿ ನಮ್ಮ ಮಧ್ಯೆ ಕನೆಕ್ಷನ್ ಬೆಳೆಯಿತು. ಪರಸ್ಪರರ ಕೆಲಸದ ಬಗ್ಗೆ ಪರಸ್ಪರ ಮೆಚ್ಚುಗೆ ಮತ್ತು ಗೌರವವಿತ್ತು. ಒಂದು ದಿನ ಇಬ್ಬರೂ ಒಟ್ಟಾಗಿ ಕೆಲಸ ಮಾಡುವ ಆಲೋಚನೆ ಇತ್ತು. ಅದು ಯಾವಾಗ ಸಂಭವಿಸುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಕಾಂತಾರ: ಚಾಪ್ಟರ್ 1 ಮೂಲಕ ಅದು ಈಡೇರಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ರಿಷಬ್ ಶೆಟ್ಟಿ ಲುಂಗಿ ಕಟ್ಟೋದು ನೋಡಿ ಅಮಿತಾಭ್ ಶಾಕ್; ಇದನ್ನು ಕಲಿಯಬೇಕು ಎಂದ ಬಿಗ್ ಬಿ

‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿಶ್ವ ಮಟ್ಟದಲ್ಲಿ ಸುಮಾರು 700 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಕಲೆಕ್ಷನ್ 1000 ಕೋಟಿ ರೂಪಾಯಿ ಸಮೀಪಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.