ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಕಾವ್ಯಾ ಕಣ್ಣಿಗೆ ಹೆದರಿದ ಗಿಲ್ಲಿ ನಟ
‘ಬಿಗ್ ಬಾಸ್ ಕನ್ನಡ 12’ರಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಅವರ ಬಾಂಧವ್ಯ 'ಒಂಟಿ-ಜಂಟಿ' ಆಟದ ಮೂಲಕ ಗಟ್ಟಿಯಾಗಿತ್ತು. ಆಟ ಮುಗಿದ ನಂತರ ಇಬ್ಬರೂ ಭಾವುಕರಾದರು. ಕಾವ್ಯಾ ಗಿಲ್ಲಿಯ ಹೈಪರ್ ಸ್ವಭಾವ ಮತ್ತು ಮನೆ ನೆನಪು ಕಡಿಮೆ ಮಾಡಿದ ಗುಣಗಳನ್ನು ಶ್ಲಾಘಿಸಿದರು.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಗಿಲ್ಲಿ ನಟ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು, ಒಂಟಿ-ಜಂಟಿ ಆಟ. ಕಾವ್ಯಾ ಹಾಗೂ ಗಿಲ್ಲಿ ಜಂಟಿ ಆಗಿದ್ದರು. ಈಗ ಈ ಆಟ ಕೊನೆಯಾಗಿದೆ. ಎಲ್ಲರೂ ತಮ್ಮ ವೈಯಕ್ತಿಕ ಆಟ ತೋರಿಸೋ ಸಮಯ ಬಂದಿದೆ. ಈ ವೇಳೆ ಇಬ್ಬರೂ ಬೇಸರ ಮಾಡಿಕೊಂಡರು. ಕಾವ್ಯಾ ಅವರು ಎಮೋಷನಲ್ ಕೂಡ ಆದರು.
ಕಾವ್ಯಾ ಹಾಗೂ ಗಿಲ್ಲಿ ನಟ ಬೆಸ್ಟ್ ಜಂಟಿ ಆಗಿ ದೊಡ್ಮನೆಯಲ್ಲಿ ಕಾಣಿಸಿಕೊಂಡರು. ಇಬ್ಬರೂ ಎಲ್ಲರಿಗೂ ಕೌಂಟರ್ ಕೊಡುತ್ತಾ, ನಗಿಸುತ್ತಾ ಇದ್ದರು. ಇವರು ಬೇರೆ ಆಗಬೇಕು ಎಂದಾಗ ಸ್ವಲ್ಪ ಬೇಸರ ಆಗೋದು ಕಾಮನ್. ಆದರೆ, ಬೇರೆ ಆಗೋದು ಅನಿವಾರ್ಯ. ಈ ಬಗ್ಗೆ ಕಾವ್ಯಾ ಮಾತನಾಡಿದ್ದಾರೆ. ‘ಗಿಲ್ಲಿ ಅವರು ತುಂಬಾನೇ ಹೈಪರ್ ಆ್ಯಕ್ಟೀವ್. ಇದರಿಂದ ನನ್ನ ಆಟ ಹಿಂದಕ್ಕೆ ಸರಿದಂತೆ ಕಾಣಿಸಿರಬಹುದು’ ಎಂದು ಕಾವ್ಯಾ ಹೇಳಿದರು.
ನಂತರ ಗಿಲ್ಲಿ ಬಗ್ಗೆ ಪಾಸಿಟಿವ್ ಮಾತುಗಳನ್ನು ಹೇಳಿದರು. ‘ಗಿಲ್ಲಿ ನಟ ತುಂಬಾನೇ ನಗಿಸುತ್ತಾನೆ. ಅವನು ಇದ್ದಿದ್ದರಿಂದಲೇ ಮನೆಯ ನೆನಪು ಅಷ್ಟಾಗಿ ಕಾಡಿಲ್ಲ’ ಎಂದು ಕಾವ್ಯಾ ವಿವರಿಸಿದರು. ಆ ಬಳಿಕ ಗಿಲ್ಲಿ ನಟ ಅವರು ಕಾವ್ಯಾನ ಹೊಗಳಿದರು. ಅವರು ಯಾವಾಗಲೂ ಬೆಂಬಲ ಆಗಿ ನಿಂತಿದ್ದಕ್ಕೆ ಖುಷಿ ಆಯಿತು.
ಗಿಲ್ಲಿ ನಟ ಅವರು ಕಾವ್ಯಾ ಅವರ ಕಣ್ಣಿನ ಬಗ್ಗೆ ವಿವರಿಸಿದರು. ಕಣ್ಣು ಎಲ್ಲರನ್ನೂ ಸೆಳೆದುಕೊಳ್ಳುವ ಅಂಗ. ಆದರೆ, ಗಿಲ್ಲಿಗೆ ಮಾತ್ರ ಕಾವ್ಯಾ ಕಣ್ಣು ಕಂಡರೆ ಭಯ. ‘ನಾನು ಮಾತನಾಡುವಾಗ ಕಾವ್ಯಾ ಬೈಯುತ್ತಲೇ ಇರುತ್ತಾಳೆ. ಅದಕ್ಕೆ ನಾನು ಅಷ್ಟಾಗಿ ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ, ಅವಳು ಒಮ್ಮೆ ಕಣ್ಣಲ್ಲಿ ಲುಕ್ ಕೊಟ್ಟರೆ ಸಾಕು ನಾನು ಗಪ್-ಚುಪ್ ಆಗ್ತೀನಿ’ ಎಂದರು ಗಿಲ್ಲಿ.
ಇದನ್ನೂ ಓದಿ: ಅ.18, 19ರಂದು ‘ಬಿಗ್ ಬಾಸ್ ಕನ್ನಡ 12’ ಮೊದಲ ಫಿನಾಲೆ: ಆಟದಲ್ಲಿ ಭಾರಿ ಟ್ವಿಸ್ಟ್
ಈ ವಾರ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಕೆಲವು ಸ್ಪರ್ಧಿಗಳು ದೊಡ್ಮನೆಯಿಂದ ಔಟ್ ಆಗಲಿದ್ದಾರೆ. ಅದಕ್ಕೂ ಮೊದಲು ವೈಯಕ್ತಿಕ ಆಟ ತೋರಿಸೋ ಅವಕಾಶ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




