ಈ ಕನ್ನಡದ ನಟನಿಗೆ ಸಿಕ್ಕಿತ್ತು ‘ಟಾಕ್ಸಿಕ್’ನಲ್ಲಿ ನಟಿಸುವ ಅವಕಾಶ: ನಿರಾಕರಿಸಿದ್ದೇಕೆ?

Toxic movie: ‘ಟಾಕ್ಸಿಕ್’ ಸಿನಿಮಾನಲ್ಲಿ ಖ್ಯಾತ ನಟ-ನಟಿಯರ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಅವರುಗಳು ಜೊತೆಗೆ ಕೆಲವು ಹಾಲಿವುಡ್, ಬಾಲಿವುಡ್​​ನ ಜನಪ್ರಿಯ ನಟ-ನಟಿಯರು ಸಹ ಇದ್ದಾರೆ. ಈ ಸಿನಿಮಾನಲ್ಲಿ ನಟಿಸುವ ಅವಕಾಶ ಕರ್ನಾಟಕ ಮೂಲದ ನಟರೊಬ್ಬರಿಗೆ ಸಿಕ್ಕಿತ್ತು ಆದರೆ ಅವಕಾಶ ನಿರಾಕರಿಸಿದ್ದಾರೆ ಆ ನಟ. ಕಾರಣವೇನು?

ಈ ಕನ್ನಡದ ನಟನಿಗೆ ಸಿಕ್ಕಿತ್ತು ‘ಟಾಕ್ಸಿಕ್’ನಲ್ಲಿ ನಟಿಸುವ ಅವಕಾಶ: ನಿರಾಕರಿಸಿದ್ದೇಕೆ?
Toxic Movie (1)

Updated on: Jan 08, 2026 | 1:28 PM

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಭಾರತದ ಅತಿ ಹೆಚ್ಚು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾವನ್ನು ಹಾಲಿವುಡ್​ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದು, ಇಂದು (ಜನವರಿ 08) ಬಿಡುಗಡೆ ಆಗಿರುವ ಟೀಸರ್​​ನಿಂದ ಇದು ಖಾತ್ರಿ ಆಗುತ್ತಿದೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಖ್ಯಾತ ನಟ-ನಟಿಯರ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಅವರುಗಳು ಜೊತೆಗೆ ಕೆಲವು ಹಾಲಿವುಡ್, ಬಾಲಿವುಡ್​​ನ ಜನಪ್ರಿಯ ನಟ-ನಟಿಯರು ಸಹ ಇದ್ದಾರೆ. ಈ ಸಿನಿಮಾನಲ್ಲಿ ನಟಿಸುವ ಅವಕಾಶ ಕರ್ನಾಟಕ ಮೂಲದ ನಟರೊಬ್ಬರಿಗೆ ಸಿಕ್ಕಿತ್ತು ಆದರೆ ಅವಕಾಶ ನಿರಾಕರಿಸಿದ್ದಾರೆ ಆ ನಟ. ಕಾರಣವೇನು?

ಗುಲ್ಷನ್ ದೇವಯ್ಯ, ಮೂಲತಃ ಬೆಂಗಳೂರಿನವರು. ಆದರೆ ಅವರು ಹೆಚ್ಚಾಗಿ ಮಿಂಚುತ್ತಿರುವುದು ಬಾಲಿವುಡ್ ಸಿನಿಮಾಗಳಲ್ಲಿ. ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಕುಲಶೇಖರ ಪಾತ್ರದಲ್ಲಿ ನಟಿಸಿರುವ ಗುಲ್ಷನ್ ದೇವಯ್ಯ, ಹೆಚ್ಚು ನಟಿಸಿರುವುದು ಹಿಂದಿ ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ. ಇವರಿಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ಅವಕಾಶ ಅರಸಿ ಬಂದಿತ್ತು. ಆದರೆ ಅವರು ನಿರಾಕರಿಸಿದರು. ಅದಕ್ಕೆ ಕಾರಣವನ್ನೂ ಸಹ ಗುಲ್ಷನ್ ತಿಳಿಸಿದ್ದಾರೆ.

ಗುಲ್ಷನ್ ದೇವಯ್ಯ

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಗುಲ್ಷನ್ ದೇವಯ್ಯ, ‘ಬಹಳ ಹಿಂದೆಯೇ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುವಂತೆ ಆಫರ್ ಬಂದಿತ್ತು. ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರು ಬಹಳ ಸಮಯ ನನ್ನೊಂದಿಗೆ ಮಾತುಕತೆ ನಡೆಸಿದರು. ನಿರ್ದಿಷ್ಟ ಪಾತ್ರದಲ್ಲಿ ನಾನೇ ನಟಿಸಲಿ ಎಂಬುದು ಅವರ ಇಚ್ಛೆ ಆಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಆ ಸಿನಿಮಾನಲ್ಲಿ ನಾನು ನಟಿಸಲಿಲ್ಲ’ ಎಂದಿದ್ದಾರೆ ಗುಲ್ಷನ್.

ಇದನ್ನೂ ಓದಿ:ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ

‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳದಿರಲು ಮುಖ್ಯ ಕಾರಣ ಡೇಟ್ಸ್​ ಸಮಸ್ಯೆ. ಅವರು (ಟಾಕ್ಸಿಕ್) ಬಹಳ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಅವರ ಶೆಡ್ಯೂಲ್ ಅವಧಿ ದೊಡ್ಡದು ಮತ್ತು ಅವರು ಅವರು ಹಲವು ಹಂತಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದರು, ನಾನು ಅದಾಗಲೇ ಒಂದು ದೊಡ್ಡ ಸಿನಿಮಾ ಒಪ್ಪಿಕೊಂಡಿದ್ದೆ, ಅದರ ಜೊತೆಗೆ ಬೇರೆ ಕೆಲವು ಸಿನಿಮಾಗಳು ಸಹ ಇದ್ದವು ಹಾಗಾಗಿ ನನಗೆ ‘ಟಾಕ್ಸಿಕ್’ ಒಪ್ಪಿಕೊಳ್ಳಲು ಆಗಲಿಲ್ಲ’ ಎಂದಿದ್ದಾರೆ ಗುಲ್ಷನ್ ದೇವಯ್ಯ.

‘ಟಾಕ್ಸಿಕ್’ ಸಿನಿಮಾಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್, ಸಂಗೀತ ರವಿ ಬಸ್ರೂರು ಅವರದ್ದು. ಬಂಡವಾಳ ಹೂಡಿರುವುದು ಕೆವಿಎನ್ ಮತ್ತು ಯಶ್ ಅವರ ಮಾನ್​ಸ್ಟರ್ ಮೈಂಡ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Thu, 8 January 26