Happy Birthday Meghana Raj: ಜನ್ಮದಿನಕ್ಕೂ ಒಂದು ದಿನ ಮೊದಲು ಮದುವೆ ಆಗಿದ್ದ ಮೇಘನಾ ರಾಜ್

ಮೇಘನಾ ರಾಜ್​-ಚಿರು ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Happy Birthday Meghana Raj: ಜನ್ಮದಿನಕ್ಕೂ ಒಂದು ದಿನ ಮೊದಲು ಮದುವೆ ಆಗಿದ್ದ ಮೇಘನಾ ರಾಜ್
ಮೇಘನಾ ರಾಜ್​-ಚಿರು ಸರ್ಜಾ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:May 02, 2021 | 8:57 PM

ನಟಿ ಮೇಘನಾ ರಾಜ್​ಗೆ ಸೋಮವಾರ (ಮೇ 3) ಜನ್ಮದಿನದ ಸಂಭ್ರಮ. ಇದೇ ಮೊದಲ ಬಾರಿಗೆ ಅವರು ಚಿರಂಜೀವಿ ಸರ್ಜಾ ಇಲ್ಲದೆಯೇ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ, ಜನ್ಮದಿನಕ್ಕೂ ಒಂದು ದಿನ ಮೊದಲು ಅವರು ವಿವಾಹವಾಗಿದ್ದರು. ಚಿರು ಹಾಗೂ ಮೇಘನಾ ರಾಜ್​ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯಲ್ಲೂ ಸಮ್ಮತಿ ಸಿಕ್ಕಿತ್ತು. 2018ರ ಮೇ 2ರಂದು ಮೇಘನಾ ರಾಜ್​ ಚಿರು ಜತೆ ಹಸೆಮಣೆ ಏರಿದ್ದರು. ಈ ಮದುವೆಗೆ ಸ್ಯಾಂಡಲ್​ವುಡ್​ ಮಂದಿ ಸಾಕ್ಷಿ ಆಗಿದ್ದರು.

ನಟಿ ಮೇಘನಾ ರಾಜ್​ ಕನ್ನಡ ಮಾತ್ರವಲ್ಲದೆ, ಮಲಯಾಳಂನಲ್ಲೂ ನಟಿಸಿದ್ದಾರೆ. ಮದುವೆ ಆದ ನಂತರದಲ್ಲಿ ಮೇಘನಾ ಅಷ್ಟಾಗಿ ಚಿತ್ರರಂಗದಲ್ಲಿ ಆ್ಯಕ್ಟಿವ್​ ಇಲ್ಲ. 2020ರ ಜೂನ್​ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಿರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿ. ಅವರಿಗೆ ಮಗು ಜನಿಸಿದ್ದು, ಅದರ ಆರೈಕೆಯಲ್ಲಿ ಮೇಘನಾ ತೊಡಗಿಕೊಂಡಿದ್ದಾರೆ.

ಮೇಘನಾ ರಾಜ್​-ಚಿರು ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಮೇಘನಾ ರಾಜ್​ ಯಾವುದೇ ಫೋಟೋಗಳನ್ನು ಅಪ್​ಲೋಡ್​ ಮಾಡಿಲ್ಲ.

ಚಿರು ಮತ್ತು ಮೇಘನಾ ಜತೆಯಾಗಿ ನಿಂತಿರುವ ಫೋಟೋವನ್ನು ಮೇಘನಾ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು . ಈ ಫೋಟೋಗೆ ಐ ಲವ್​ ಯೂ, ಹಿಂದಿರುಗಿ ಬಾ ಎಂದು ಮೇಘನಾ ಕ್ಯಾಪ್ಶನ್​ ನೀಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳ ಕಣ್ಣು ಒದ್ದೆ ಆಗಿತ್ತು.

ಇದನ್ನೂ ಓದಿ: Meghana Raj: ಜೂನಿಯರ್ ಚಿರುಗೆ ಆರು ತಿಂಗಳು; ಸಂಭ್ರಮಿಸಿದ ಮೇಘನಾ ರಾಜ್​

Meghana Raj: ಚಿರು ಐ ಲವ್​ ಯೂ, ಹಿಂದಿರುಗಿ ಬಾ; ಭಾವುಕರಾದ ನಟಿ ಮೇಘನಾ ರಾಜ್​

(Happy Birthday Meghana Raj Meghana Married Chiru Sarja Before Her birthday)

Published On - 8:40 pm, Sun, 2 May 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್