ಕನ್ನಡ ಚಿತ್ರರಂಗದಲ್ಲಿ ‘ಅಲೆಮಾರಿ’ ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಜರ್ನಿ ಶುರು ಮಾಡಿದ ಹರಿ ಸಂತೋಷ್ ಅವರು ಈವರೆಗೂ 10 ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇತ್ತೀಚೆಗೆ ಅವರ ಸಾರಥ್ಯದಲ್ಲಿ 2 ಹೊಸ ಸಿನಿಮಾಗಳು ಅನೌನ್ಸ್ ಆದವು. ‘ಕೆ.ವಿ.ಎನ್ ಪ್ರೊಡಕ್ಷನ್ಸ್’ ಮುಖ್ಯಸ್ಥರಾದ ವೆಂಕಟ್ ನಾರಾಯಣ್ ಮತ್ತು ರವಿಕುಮಾರ್ ಅವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಈ ಹೊಸ ಸಿನಿಮಾಗಳಿಗೆ ಚಾಲನೆ ನೀಡಿದರು. ‘ಡಿ.ಎಸ್ ಮ್ಯಾಕ್ಸ್’ನ ದಯಾನಂದ್ ಮುಂತಾದ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆದರು.
ಹರಿ ಸಂತೋಷ್ ಅವರು ‘ಡಿಸ್ಕೋ’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ವಿಕ್ಕಿ ವರುಣ್ ಹೀರೋ ಆಗಿದ್ದಾರೆ. ಈ ಬಗ್ಗೆ ಹರಿ ಸಂತೋಷ್ ಮಾತನಾಡಿದರು. ‘ಡಿಸ್ಕೋ ಎಂಬುದು ನಾಯಕನ ಅಡ್ಡ ಹೆಸರು. ನನ್ನ ಮತ್ತು ವಿಕ್ಕಿ ವರಣ್ ಕಾಂಬಿನೇಶನ್ನಲ್ಲಿ ‘ಕಾಲೇಜ್ ಕುಮಾರ’ ಸಿನಿಮಾದ ಬಳಿಕ ಈ ಸಿನಿಮಾ ಮೂಡಿಬರುತ್ತಿದೆ. ಇದು ಹಳ್ಳಿಯಲ್ಲಿ ನಡೆಯುವ ಕಹಾನಿ. ನಮ್ಮ ‘ಪೆನ್ ಎನ್ ಪೇಪರ್ ಸ್ಟುಡಿಯೋಸ್’ ಮತ್ತು ‘ಕಲ್ಲೂರ್ ಸಿನಿಮಾಸ್’ ಮೂಲಕ ಈ ಸಿನಿಮಾ ಸಿದ್ಧವಾಗಲಿದೆ. ಪ್ರಶಾಂತ್ ಕಲ್ಲೂರ್ ಮತ್ತು ಹರೀಶ್ ರೆಡ್ಡಿ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಧ್ರುವ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ’ ಎಂದಿದ್ದಾರೆ ಹರಿ ಸಂತೋಷ್. ವಿಕ್ಕಿ ವರಣ್ ಮಾತನಾಡಿ, ‘ನಾನು ಹೀರೋ ಆಗಿ ನಟಿಸುತ್ತಿರುವ 4ನೇ ಸಿನಿಮಾ ಇದು. ಹಿಂದಿನ 3 ಸಿನಿಮಾಗಳೇ ಬೇರೆ ರೀತಿಯಲ್ಲಿ ಇದ್ದವು. ಡಿಸ್ಕೋ ಸಿನಿಮಾ ಅವುಗಳಿಗಿಂತ ಡಿಫರೆಂಟ್. ನಾನೇ ಕಥೆ ಬರೆದಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇನ್ನು, ‘ಕಂಗ್ರ್ಯಾಜುಲೇಷನ್ಸ್ ಬ್ರದರ್’ ಸಿನಿಮಾ ಕುರಿತಾಗಿಯೂ ಹರಿ ಸಂತೋಷ್ ಮಾಹಿತಿ ನೀಡಿದರು. ‘2 ವರ್ಷಗಳಿಂದ ನಾವು 12 ಸ್ನೇಹಿತರು ಸೇರಿ ಪೆನ್ ಎನ್ ಪೇಪರ್ ಸಂಸ್ಥೆ ಶುರು ಮಾಡಿದ್ದೆವು. ಆ ತಂಡದಿಂದ ಮೊದಲ ಸಿನಿಮಾ ಮಾಡುತ್ತಿದ್ದೇವೆ. ‘ಕಂಗ್ರ್ಯಾಜುಲೇಷನ್ಸ್ ಬ್ರದರ್’ ಸಿನಿಮಾಗೆ ಕಥೆ ಬರೆಯಲು ಒಂದು ವರ್ಷ ಸಮಯ ಹಿಡಿಯತು. ಮಾರ್ನಿಂಗ್ ಶೋ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಸಿದ್ಧ ಮಾಡಿದ್ದೇವೆ. ನಮ್ಮ ತಂಡದ ಪ್ರತಾಪ್ ಗಂಧರ್ವ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ರಕ್ಷಿತ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಪ್ರಶಾಂತ್ ಕಲ್ಲೂರ್ ಹಾಗೂ ಹರೀಶ್ ರೆಡ್ಡಿ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ’ ಎಂದರು ಹರಿ ಸಂತೋಷ್.
ಇದನ್ನೂ ಓದಿ: ‘ಪುಷ್ಪ 2’ನಲ್ಲಿ ಮತ್ತೊಬ್ಬ ಕನ್ನಡದ ನಟ, ಅಲ್ಲು ಅರ್ಜುನ್ಗಿಂತಲೂ ಈತನಿಗೆ ಹೊಗಳಿಕೆ
‘ಕಂಗ್ರ್ಯಾಜುಲೇಷನ್ಸ್ ಬ್ರದರ್’ ಸಿನಿಮಾಗೆ ಸಂಜನಾ ಅವರು ನಾಯಕಿ ಆಗಿದ್ದಾರೆ. ಅನುಷಾ ಎಂಬ ಹೊಸ ಹುಡುಗಿಯನ್ನು ಕೂಡ ಪರಿಚಯಿಸಲಾಗುತ್ತಿದೆ. ಈ ಸಿನಿಮಾಗೆ ಹರಿ ಸಂತೋಷ್ ಅವರೇ ಕಥೆ ಬರೆದಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಕಿರುತೆರೆ ಧಾರಾವಾಹಿಗಳ ನಿರ್ದೇಶನದಿಂದ ಅನುಭವ ಪಡೆದ ಪ್ರತಾಪ್ ಗಂಧರ್ವ ಅವರು ಈಗ ಮೊದಲ ಬಾರಿಗೆ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಹೀರೋ ರಕ್ಷಿತ್ ನಾಗ್ ಅವರಿಗೂ ಇದು ಮೊದಲ ಸಿನಿಮಾ. ಸೂರಜ್ ಜೋಯಿಸ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಗುರು ಅವರು ಛಾಯಾಗ್ರಹಣ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.