AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವರ್​ಫುಲ್ ಸಿನಿಮಾ ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ

Vijay Raghavendra: ವಿಜಯ್ ರಾಘವೇಂದ್ರ ನಟನೆಯ ಹೊಸ ಸಿನಿಮಾ ‘ರುದ್ರಾಭಿಷೇಕಂ’ ಇಂದು (ನವೆಂಬರ್ 20) ಸೆಟ್ಟೇರಿದೆ. ಸಿನಿಮಾವು ವೀರಗಾಸೆ ಕುರಿತಾದ ಕತೆಯನ್ನು ಒಳಗೊಂಡಿರುವ ಜೊತೆಗೆ ಹಾರರ್ ಕತೆಯೂ ಇದೆ. ಸಿನಿಮಾದಲ್ಲಿ ಪ್ರೇರಣ ನಾಯಕಿ.

ಪವರ್​ಫುಲ್ ಸಿನಿಮಾ ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
ಮಂಜುನಾಥ ಸಿ.
| Updated By: ಮದನ್​ ಕುಮಾರ್​|

Updated on:Nov 20, 2024 | 7:04 PM

Share

‘ಕೇಸ್ ಆಫ್ ಕೊಂಡಾನ’, ‘ಕದ್ದ ಚಿತ್ರ’, ‘ಗ್ರೇ ಗೇಮ್ಸ್’, ‘ಜೋಗ್ 101’ ಹೀಗೆ ಭಿನ್ನ ಕತೆಗಳನ್ನು ಆಯ್ಕೆ ಮಾಡಿಕೊಂಡು ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರೆದುರು ಬರುತ್ತಿರುವ ನಟ ವಿಜಯ್ ರಾಘವೇಂದ್ರ ಇದೀಗ ಮತ್ತೊಂದು ವಿಭಿನ್ನವಾದ ಕತೆಯುಳ್ಳ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ‘ರುದ್ರಾಭಿಷೇಕಂ’ ಹೆಸರಿನ ಹಾರರ್ ಮತ್ತು ಜನಪದ ಮಿಳಿತವಾದ ಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದು, ಸಿನಿಮಾದ ಮುಹೂರ್ತ ಇಂದು (ನವೆಂಬರ್ 20) ನೆರವೇರಿದೆ.

ವೀರಗಾಸೆ ಕಲೆಯನ್ನು ಒಳಗೊಂಡ ಕತೆಯನ್ನು ನಿರ್ದೇಶಕ ಕೆ ವಸಂತ್ ಕುಮಾರ್ ಹೆಣೆದಿದ್ದು ಸಿನಿಮಾದಲ್ಲಿ ಹಾರರ್ ಮತ್ತು ಥ್ರಿಲ್ಲರ್ ಅಂಶಗಳೂ ಸಹ ಇರಲಿವೆ. ವಸಂತ್ ಕುಮಾರ್ ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವವುಳ್ಳವರಾಗಿದ್ದು, ಈಗ ಕೆಲ ವರ್ಷಗಳ ಬ್ರೇಕ್ ಬಳಿಕ ಮತ್ತೊಮ್ಮೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿನಿಮಾದ ಕತೆ, ಚಿತ್ರಕತೆ ಮತ್ತು ಸಂಭಾಷಣೆ ಅವರದ್ದೇ. ‘ರುದ್ರಾಭಿಷೇಕಂ’ ಸಿನಿಮಾದ ಮುಹೂರ್ತ ಇಂದು (ನವೆಂಬರ್ 20) ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದ ಬಳಿಯ ಎನ್​ಎಸ್ ಫಾರ್ಮ್ಸ್​ನಲ್ಲಿ ನಡೆದಿದೆ.

ನಿವೃತ್ತ ತೋಟಗಾರಿಕೆ ಇಲಾಖೆ ನಿರ್ದೇಶಕರು ನಾರಾಯಣಸ್ವಾಮಿ, ಹಾಗೂ ಮೇಲೂರು ಸಚಿನ್ ಅವರು ಕ್ಲ್ಯಾಪ್ ಮಾಡಿ ಸಿನಿಮಾಕ್ಕೆ ಶುಭ ಕೋರಿದರು. ನಿರ್ಮಾಪಕರು, ವಕೀಲರೂ ಆದ ಜಯರಾಮ್ ಅವರು ಕ್ಯಾಮೆರಾಕ್ಕೆ ಚಾಲನೆ ನೀಡಿದರು. ಮುಹೂರ್ತ ಪೂಜೆಯಲ್ಲಿ ಭಾಗವಹಿಸಿದ್ದ ವಿಜಯ ರಾಘವೇಂದ್ರ ಅವರು ಮೊದಲ ಶಾಟ್​ ನೀಡಿ, ಶುಭಾರಂಭ ಮಾಡಿದರು. ಹೊಸ ತಂಡದೊಂದಿಗೆ ಕೆಲಸ ಮಾಡುತ್ತಿರುವ ಬಗ್ಗೆ ಉತ್ಸುಕತೆ ವ್ಯಕ್ತಪಡಿಸಿದರು.

ಪ್ಯಾನ್ ಇಂಡಿಯಾ ಕ್ರಿಯೇಷನ್ಸ್​ ನಿರ್ಮಾಣ ಸಂಸ್ಥೆ ಅಡಿ ‘ರುದ್ರಾಭಿಷೇಕಂ’ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಕೆ ವೆಂಕಟೇಶ್, ಲಾಯರ್ ಜಯರಾಂ, ಚಿದಾನಂದ್, ರಮೇಶ್, ಚಂದ್ರಶೇಖರ ಹಡಪದ, ಮಂಜಣ್ಣ, ಡಾ ಶಿವಕುಮಾರ್ ಇನ್ನಿತರ ಕೆಲ ಗೆಳೆಯರ ತಂಡ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣ ವಿಜಯಪುರದ ಎನ್​ಎಸ್ ಫಾರ್ಮ್ಸ್​ ಹಾಗೂ ಚಿಕ್ಕತತ್ತಮಂಗಲ ಗ್ರಾಮದಲ್ಲಿ ನಡೆಯಲಿದೆ. ಅದ್ಧೂರಿ ಜಾತ್ರೆ ಸೆಟ್​ ನಿರ್ಮಾಣ ಪ್ರಗತಿಯಲ್ಲಿದೆ.

ಇದನ್ನೂ ಓದಿ:‘ಬಿಗ್ ಬಾಸ್’ ಅನುಭವ ತೆರೆದಿಟ್ಟ ಮೊದಲ ಸೀಸನ್ ವಿನ್ನರ್ ವಿಜಯ್ ರಾಘವೇಂದ್ರ

ಸಿನಿಮಾದಲ್ಲಿ ನಾಯಕಿಯಾಗಿ ಪ್ರೇರಣ ನಟಿಸಿದ್ದಾರೆ. ಒಂದು ತಮಿಳು ಹಾಗೂ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ ಅನುಭವ ಇವರಿಗಿದೆ. ಖಳನಟನಾಗಿ ಜನಪ್ರಿಯ ನಟ ಬಾಲ ರಾಜವಾಡಿ ನಟಿಸುತ್ತಿದ್ದಾರೆ. ಸಿನಿಮಾದ ಮತ್ತೊಂದು ಮುಖ್ಯ ಪಾತ್ರದಲ್ಲಿ ಬಿರಾದರ, ಗುರುರಾಜ್ ಹೊಸಕೋಟೆ ಇನ್ನೂ ಕೆಲವು ಹಿರಿಯ ನಟರ ಜೊತೆಗೆ ಕೆಲವು ಹೊಸ ನಟರೂ ಸಹ ಸೇರಿಕೊಂಡಿದ್ದಾರೆ. ಸಿನಿಮಾಕ್ಕೆ ವಿ ಮನೋಹರ್ ಸಂಗೀತ ನೀಡುತ್ತಿದ್ದಾರೆ. ಸಾಹಸ ನಿರ್ದೇಶನ ಚಂದ್ರು ಬಡ್ಡಿ ಅವರದ್ದು, ಸಿನಿಮಾಟೊಗ್ರಫಿ ಜವಾಬ್ದಾರಿ ಮುತ್ತುರಾಜ್ ಅವರದ್ದು, ಸಂಕಲನವನ್ನೂ ಅವರೇ ಮಾಡಲಿದ್ದಾರೆ. ಡಿಕೆಡಿಯ ರುದ್ರ ಅವರು ಕೊರಿಯೋಗ್ರಫಿ ಮಾಡಲಿದ್ದಾರೆ. ಪ್ರೊಡಕ್ಷನ್ ಮ್ಯಾನೇಜರ್ ಜವಾಬ್ದಾರಿಯನ್ನು ಕಿಶೋರ್ ಕುಮಾರ್ ಹೊತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Wed, 20 November 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!